ಏಪೆಕ್ ಪ್ರೊಟೆಸ್ಟ್

ಏಪೆಕ್ ಪ್ರೊಟೆಸ್ಟ್

 

 

ಸಿಡ್ನಿಯಲ್ಲಿ ನಡೆಯುತ್ತಿರುವ ಏಪೆಕ್ ಸಮ್ಮಿಟ್‌ನ ಸಂದರ್ಭದಲ್ಲಿ ಬುಷ್ ಮತ್ತಿತರ ಸಮರಾಕಾಂಕ್ಷಿಗಳ ವಿರುದ್ಧ ನಡೆದ ಪ್ರೊಟೆಸ್ಟ್ ಮಾರ್ಚಿಗೆ ಈವತ್ತು ಹೋಗಿದ್ದೆ. ಮಕ್ಕಳು-ಮರಿಗಳಿಂದ ಹಿಡಿದು ಮುದುಕರವರೆಗೆ ಗಾಂಧಿವಾದಿಗಳಿಂದ ಹಿಡಿದು ವೇಶ್ಯೆಯರವರೆಗೆ ಎಲ್ಲರೂ ಈವತ್ತು ಸೇರಿದ್ದರು.

 

 

ವಾರದಿಂದ ಸಿಡ್ನಿಗೇ ಒಂದು ರೀತಿಯ ದಿಗ್ಬಂಧನ ಹಾಕಿಟ್ಟ ಅನುಭವ. ಹತ್ತಾರು ಅಡಿ ಎತ್ತರದ ಕಬ್ಬಿಣದ ಬೇಲಿಗಳನ್ನು ನಗರದ ಮುಖ್ಯ ರಸ್ತೆಗಳಿಗೇ ಹಾಕಿಬಿಟ್ಟಿದ್ದಾರೆ. ಲೋಕದ ೨೧ ರಾಷ್ಟ್ರದ "ಪ್ರತಿಷ್ಟಿತರು" ಓಡಾಡಲು ಅನುಕೂಲವಾಗುವಂತೆ. ನಮ್ಮನಿಮ್ಮಂತವರ ನೆರಳು ಅವರು ತುಳಿಯದಂತೆ ದೂರದಲ್ಲೇ ಹೋಗಬೇಕು!

ಈವತ್ತಿನ ಚಳವಳಿಯೂ ೨ ಕಿ.ಮಿ ದೂರದಲ್ಲೇ ಇಟ್ಟಿದ್ದರು. ಈವತ್ತು ಭಾರಿ ಹಿಂಸಾಚಾರ ನಡೆಯುತ್ತದೆ. ಸಿಡ್ನಿ ಹಿಂದೆಂದೂ ಇಂಥ ಹಿಂಸೆ ಕಂಡಿಲ್ಲ. ೨೦ ಸಾವಿರ ಜನ ಬರುತ್ತಾರೆ. ಯಾರು ಏನು ಮಾಡುತ್ತಾರೆ ಎಂದು ಹೇಳಲಾಗುವುದಿಲ್ಲ. ಹೀಗೆಲ್ಲಾ ಮೊದಲೇ ಜನರನ್ನು ಪೋಲೀಸರು ಹೆದರಿಸಿದ್ದರು. ಪೋಲೀಸ್ ಕುದುರೆಗಳಿಗೆ ಯಾವುದೋ ಫ್ಲೂ ರೋಗ ಅಂತ ನೀರಿನ ಕಾನೆನ್ ಟ್ರಕ್‌ಗಳು ಬಂದಿದ್ದವು!

ಎಲ್ಲಾ ಹುಸಿಯಾಯಿತು. ೫೦೦೦ಕ್ಕೂ ಮಿಕ್ಕಿ ಬಂದಿದ್ದ ಜನರೆಲ್ಲಾ ಪೋಲೀಸರನ್ನು ನೋಡಿ ಪಕಪಕ ನಗುತ್ತಾ, ಖೂಳರ ವಿರುದ್ಧ ಘೋಷಣೆ ಕೂಗುತ್ತಾ, ಕುಣಿಯುತ್ತಾ ಓಡಾಡಿಕೊಂಡಿದ್ದರು! ಪೋಲೀಸರು ಏನೂ ಹಿಂಸಾಚಾರ ನಡೆಯದ್ದು ನೋಡಿ ಆತಂಕಗೊಂಡು ಕಡೆಯಲ್ಲಿ ಎಲ್ಲರನ್ನೂ ವಿನಾಕಾರಣ ರಸ್ತೆಯ ಒಂದು ಬದಿಗೆ ತಳ್ಳಲು ಶುರು ಮಾಡಿದರು! ಜನ ನಗುತ್ತಾ ಪಕ್ಕದ ಪಾರ್ಕಿನ ಒಳಗೆ ಭಾಷಣ ಕೇಳಲು ಹೋದರು!!
ಪೋಲೀಸ್ ಬಂದೋಬಸ್ತಿಗೆ ನೂರಾರು ಮಿಲಿಯನ್ ಡಾಲರ್‍ ಖರ್ಚು ಮಾಡಿದ್ದು ಏನಕ್ಕೋ ಎಂದು ಎಲ್ಲರ ಪ್ರಶ್ನೆ!

"[http://www.flickr.com/gp/12844008@N06/B11X9u|ಇನ್ನೂ ಹೆಚ್ಚಿನ ಚಿತ್ರಗಳಿಗೆ ಇಲ್ಲಿ ನೋಡಿ]"

Rating
No votes yet