ಏಪ್ರಿಲ್ ಒಂದರ ಇತಿಹಾಸ

ಏಪ್ರಿಲ್ ಒಂದರ ಇತಿಹಾಸ

ಏಪ್ರಿಲ್ ಒಂದರ ಇತಿಹಾಸ ಏಪ್ರಿಲ್ ಒಂದು ಸ್ಟೀವ್ ಅಪ್ರಿಲ್ ಎಂಬ ಹೆಸರಿನವನಿಂದ ಪೂಲ್ಸ್ ಡೆ (ದಡ್ಡರ ದಿನ) ಎಂದು ಹೆಸರಾಯಿತು. april 1 1857 ರಲ್ಲಿ ಜನಿಸಿದ ಸ್ತೀವ್ ಅಪ್ರಿಲ್ , ತನ್ನ ಜೀವನದಲ್ಲಿ ದಡ್ಡತನಕ್ಕೆ ಹೆಸರಾಗಿದ್ದ, ಸುಮ್ಮರು 115 ವ್ಯವಹಾರಗಳಲ್ಲಿ ತೊಡಗಿಸಿಕೊಂಡು ತನ್ನ ಅಪ್ಪ ಅಜ್ಜ ಗಳಿಸಿದ ಆಸ್ತಿಯನ್ನೆಲ್ಲ ಕರಗಿಸಿದ. ಹೀಗಾಗಿ ಅವನನ್ನು ದಡ್ಡರ ಪಿತ (ಅಂದರೆ father of fools) ಎಂದು ಕರೆಯುತ್ತಿದ್ದರು. ಅವನು ತನ್ನ 19 ನೇ ವಯಸ್ಸಿನಲ್ಲಿ ತನಗಿಂತ ಹಿರಿಯಳಾದ 61 ವರ್ಷ ವಯಸಿನ ಮುದುಕಿಯನ್ನು ಮದುವೆಯಾದ ಆದರೆ ಅವಳು ಅವನನ್ನು ಡೈವೋರ್ಸ್ ಮಾಡಿದಳು, ಕಾರಣ ತುಂಬಾ ವಿಚಿತ್ರವಾಗಿತ್ತು, ಅವನು ಸದಾ ಸುಳ್ಳು ಸುಳ್ಳು ಕತೆಗಳನ್ನು ಓದುತ್ತಿದ್ದ, ನೀವು ಈಗ ಓದುತ್ತಿರುವ ಕತೆಯಂತೆ........ ಹೇಗಿದೆ ಏಪ್ರಿಲ್ ಫೂಲ್ ಪುರಾಣ! (ಸ್ನೇಹ ರಮಾಕಾಂತ ಅನ್ನುವವರಿ ಅಂಗ್ಲದಲ್ಲಿ ಬರೆದಿದ್ದ ಬರಹದ ಕನ್ನಡ ಅವತಾರ)

Rating
No votes yet

Comments

Submitted by partha1059 Wed, 04/02/2014 - 06:15

In reply to by ಗಣೇಶ

ಗಣೇಶರವರಿಗೆ ನಮಸ್ಕಾರ
ಕಡೆಗೂ ಕಾಣಿಸಿದಿರಿ ನೀವು!
ಇದ್ದಕಿದ್ದಂತೆ ಮಾಯವಾಗಿ ಬಿಡುವಿರಿ
ದೀರ್ಘಕಾಲ....!!
ಒಮ್ಮೊಮ್ಮೆ ಎಂತದೋ ಆತಂಕವೂ ಕಾಡುತ್ತದೆ!
ಸರಿ ತಿಳಿದುಕೊಳ್ಳೋಣವೆಂದರೆ , ನಿಮ್ಮ ಕಾಂಟಾಕ್ಟೇ ಇಲ್ಲ !

Submitted by ಗಣೇಶ Wed, 04/02/2014 - 23:36

In reply to by partha1059

ತಲೆಕೆರೆದುಕೊಳ್ಳಲೂ ಪುರುಸೋತ್ತಿರಲಿಲ್ಲ ಪಾರ್ಥರೆ :).. ನಾನೂ ಕೆಲವೊಮ್ಮೆ ತಿಂಗಳುಗಟ್ಟಲೆ ಬರೆಯದಿರುವ ಸಂಪದಿಗರ ಬಗ್ಗೆ "ಕಡೇ ಪಕ್ಷ ವಾರಕ್ಕೊಂದು ಪ್ರತಿಕ್ರಿಯೆಯಾದರೂ ಬರೆಯಬಾರದೆ" ಎಂದಾಲೋಚಿಸುತ್ತಿದ್ದೆ.
ಏನಾಯಿತು ಅಂದರೆ- ಪರ್ಕುಟ್ ಸ್ಕೂಟರ್‌ನ ಹಾಗೇ ನನ್ನದು ಅಕ್ಬರ್ ಕಾಲದ ಕಂಪ್ಯೂಟರ್. ಒಂದು ರಾತ್ರಿ ಆನ್ ಮಾಡಿದಾಗ ಮಿಕ್ಸಿ ರನ್ ಮಾಡಿದ ಹಾಗೇ ಜೋರಾಗಿ ಶಬ್ದ ಮಾಡಲು ಪ್ರಾರಂಭಿಸಿತು. ಮಲಗಿದ್ದವರೆಲ್ಲಾ ಎದ್ದು ವಿಚಾರಿಸುವಂತಾಯಿತು.:)
ಮೊನ್ನೆ ಸಂಡೆ ಕುಳಿತು ನನಗೆ ತಿಳಿದಂತೆ ರಿಪೇರಿ ಮಾಡಿದೆ! ಪರವಾಗಿಲ್ಲ..
ನಿಮ್ಮ ಶಿಷ್ಯನ ಬಳಿ ನನ್ನ ಇ ಮೈಲ್ ವಿಳಾಸವಿದೆ! ಆದರೆ ಶಿಷ್ಯನೇ ನಾಪತ್ತೆ!!