ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ

ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ

ಸಂಪದದಲ್ಲಿ ಒಮ್ಮೆ ಜಯಲಕ್ಷ್ಮಿಯವರು ಟ್ರೆಕಿಂಗ್ ಹೋಗೋದಕ್ಕೆ ಏನೇನು ಬೇಕಾಗತ್ತೆ ಅಂತ ಕೇಳಿದ್ದರು. ಇಲ್ಲಿ ಸುಮ್ನೆ ಟ್ರೆಕಿಂಗ್ ಹೋಗಕ್ಕೆ ಏನೇನು ಕಟ್ಕೋ ಬೇಕು ಅಂತ ನನ್ನ ಅನುಭವದಿಂದ ಬರೀತಿದೀನಿ. ಈ ಬರಹ ಪಶ್ಚಿಮ ಘಟ್ಟಗಳಲ್ಲಿ ಟ್ರೆಕಿಂಗ್ ಹೋಗಲು ಮಾತ್ರ. ಹಿಮಾಲಯಕ್ಕೆ ಇನ್ನೂ ಹೆಚ್ಚಿನ ಸಿದ್ಧತೆ ಬೇಕಾಗತ್ತೆ.
ಈ ಕೆಲವು ವಸ್ತುಗಳ್ನ ಎಲ್ರೂ ತೊಗೊಂಡ್ ಹೋಗ್ಬೇಕಾಗತ್ತೆ.
೧. ಸಾಮಾನೆಲ್ಲ ತುಂಬಲು ರಕ್ ಸ್ಯಾಕ್ (ಚೀಲ) - ನಾನು nature craft ನವರ ರಕ್ ಸ್ಯಾಕ್ ಬಳಸುತ್ತಿದೀನಿ. wild craft ಅನ್ನೋ ಕಂಪನಿ outletಗಳು ಬೆಂಗಳೂರಲ್ಲಿ ತುಂಬಾ ಕಡೆ ಇವೆ.
೨. ಮಲಗಲು sleeping bag ಅಥವಾ ಭಾರ ಕಡಿಮೆ ಇರೋ blanket/ರಜಾಯಿ. (ಸೆಕೆಗಾಲದಲ್ಲಿ ಸ್ಲೀಪಿಂಗ್ ಬ್ಯಾಗ್ ಬೇಕಾಗೋದಿಲ್ಲ.)
೩. ಟ್ರೆಕಿಂಗ್ ಶೂಗಳು - ಸಾಮಾನ್ಯವಾಗಿ ಯಾವುದೇ ಶೂನಲ್ಲೂ ಟ್ರೆಕಿಂಗ್ ಮಾಡಬಹುದು. ಆದರೆ ಮಳೆಗಾಲದಲ್ಲಿ ಸ್ವಲ್ಪ ಒಳ್ಳೆಯ ಹಿಡಿತ (grip) ಇರೋ ಶೂಗಳಾದರೆ ಒಳ್ಳೇದು. Woodlands, Adidas, Caterpillarನಲ್ಲಿ ಒಳ್ಳೇ ಟ್ರೆಕಿಂಗ್ ಶೂಗಳು ಸಿಗುತ್ವೆ. ತುಂಬಾ ಒಳ್ಳೆ Water proof ಶೂಗಳು ಬೇಕಾದ್ರೆ Gore Tex ಅನ್ನೋ material ಇಂದ ಮಾಡಿರೋ ಶೂಗಳನ್ನ ತೊಗೋಬಹುದು. Gore Tex ತುಂಬಾ light weight ಕೂಡ. ಆದರೆ ಬೆಲೆ ತುಂಬಾ ಹೆಚ್ಚು. (ಅಡಿಡಾಸ್ ಗೋರ್ ಟೆಕ್ಸ್ ಶೂ ೮೦೦೦ ರೂ. ಆಗತ್ತೆ). ಚೈನಾ ಶೂಗಳು ತುಂಬಾ ಕಡಿಮೆ ಬೆಲೆಗೆ ಸಿಗುತ್ತಂತೆ (೧೫೦೦ಕ್ಕೆಲ್ಲಾ ಸಿಗತ್ತಂತೆ).
೪. ಟೆಂಟ್ ಒಳಗೆ ಹಾಸಲು Sleeping Mats (carry mats). ಒಂದು ಟೆಂಟ್ ಗೆ ೨-೩ carry-mats ಬೇಕಾಗತ್ತೆ.
೫. ನೀರು ತೊಗೊಂಡು ಹೋಗೋದು ತುಂಬಾ ಮುಖ್ಯ. ಕಡೇ ಪಕ್ಷ 3 ಲೀಟರ್ ಆದರೂ ನೀರು ಇರಬೇಕು. ನೀರಿನ ಬಾಟಲಿ ತೊಗೊಂಡು ಹೋಗೋದನ್ನ ಮರೀಬೇಡಿ.
೬. Torch - ಇದು ತುಂಬಾ ಮುಖ್ಯ. ಎಲ್ಲರ ಬಳೀಲೂ ಒಂದು Torch ಇರಲೇಬೇಕು. ಎಷ್ಟೊ ಸಲಿ ರಾತ್ರಿ ಟ್ರೆಕಿಂಗಿಗೆ ಅಥವಾ ಕ್ಯಾಂಪ್ ಸೈಟ್ ನಲ್ಲಿ ಬೇಕಾಗತ್ತೆ.
೬. ದುಡ್ಡು - ಇದು ಎಲ್ರಿಗೂ ಗೊತ್ತಿರತ್ತೆ. ಆದ್ರೂ ನನ್ನ IT ಸ್ನೇಹಿತರು ಕೆಲವರು ಎಲ್ಲಾದ್ರೂ ದುಡ್ಡು draw ಮಾಡಬಹುದು ಅಂತ Debit cards ತಂದಿದ್ರು. :) ಹಾಗಾಗಿ ಹಾಕಿದೀನಿ.
೬. ಇವೆಲ್ಲಾ ಬಿಟ್ರೆ ನಿಮ್ಮ ಬಟ್ಟೆಗಳು - ಆದಷ್ಟೂ ಕಡಿಮೆ ಇಟ್ಕೊಳಿ. Rain Coat (poncho), jacket with hood, cap, monkey cap, towel ಇತ್ಯಾದಿ. ಒದ್ದೆ ಬಟ್ಟೆ ಒಣಗಿದ ಬಟ್ಟೆ ಬೇರೆ ಮಾಡಲು ಪ್ಲಾಸ್ಟಿಕ್ ಕವರ್ ಗಳು ಬೇಕಾಗತ್ತೆ.
೭. Camera - ಒಳ್ಳೇ camera ತೊಗೊಂಡು ಹೋಗೋದನ್ನ ಮರೀಬೇಡಿ.
ಗುಂಪಿಗೆ ಬೇಕಾಗೋ ವಸ್ತುಗಳು
೧. ಟೆಂಟ್ ಗಳು - ೩-೪ ಜನ ಮಲಗೋ ಅಂತಹ ಟೆಂಟ್ ಗಳು ಎಲ್ಲಾ ಕಡೆ ಸಿಗತ್ವೆ. ಎಷ್ಟೊ ಜನ ಬಾಡಿಗೆಗೂ ಕೊಡ್ತಾರೆ.  Triangular ಅಥವಾ Dome Type ಟೆಂಟ್ ಗಳ್ನ ನಾವು ತೊಗೊಂಡು ಹೋಗ್ತೀವಿ. wild craft ನಲ್ಲಿ ೪-ಜನರ La Fuma ಕಂಪನಿ ಟೆಂಟ್ ೪೫೦೦ ರೂ. ಆಗತ್ತೆ. Coleman ಅನ್ನೋ ಕಂಪನಿ ಟೆಂಟ್ ಇನ್ನೂ ಕಡಿಮೆ ಅನ್ಸತ್ತೆ. ಗಾಳಿ ಕಡಿಮೆ ಇರೋ ಕಡೆ ಟೆಂಟ್ ಹಾಕಿ. camp fire ಹಾಕ್ತಾ ಇದ್ರೆ ಅದರಿಂದ ದೂರ ಇರ್ಲಿ.
೨. ರಾತ್ರಿ ಅಡುಗೆಗೆ ಒಂದು ಪಾತ್ರೆ ಬೇಕಾಗತ್ತೆ. ಹಿಡಿ ಇರೋ ಪಾತ್ರೆ ತೊಗೊಂಡು ಹೋಗಿ. ಊಟಕ್ಕೆ ನಾವು ಜೋಳದ ರೊಟ್ಟಿ ಅಥವಾ ಚಪಾತಿ ಇಲ್ಲಾಂದ್ರೆ Ready-to-eat ತೊಗೊಂಡು ಹೋಗ್ತೀವಿ. Maggi , ಬ್ರೆಡ್ ಬೆಳಿಗ್ಗೆ ತಿಂಡಿಗೆ ತೊಗೊಂಡು ಹೋಗಬಹುದು. ಬೆಟ್ಟದ ಮೇಲೆ ನೀರು ಸಿಗೋದು ಅಪರೂಪ. ಹಾಗಾಗಿ ಜಾಸ್ತಿ ನೀರು ಉಳಿಸಿಕೊಂಡಿರಿ.
೩. ಒಲೆ (Stowe) - ಕರ್ಪೂರ ಉಪಯೋಗಿಸೋ Stowe ಒಳ್ಳೇದು. ಇದಕ್ಕೆ ಉಪಯೋಗಿಸೋ ಕರ್ಪೂರ ಮಂಗಳಾರತಿ ಮಾಡೋ ಕರ್ಪೂರಕ್ಕಿಂತ ಗಟ್ಟಿ ಇರತ್ತೆ. ಸ್ವಲ್ಪ ಹೆಚ್ಚು ಹೊತ್ತು ಉರಿಯತ್ತೆ. Stowe ಮಡಸಿಕೊಳ್ಳೋ ತರ ಇರತ್ತೆ. ನಾವು ಸುಮಾರ್ ಸಲಿ camp fireನಲ್ಲೇ ಅಡುಗೆ ಮಾಡಿದ್ವಿ. ಆದ್ರೆ ಮಳೆ ಬರ್ತಿದ್ರೆ ಕಷ್ಟ ಆಗತ್ತೆ. camp fire ನಲ್ಲಿ ಅಡುಗೆ ಮಾಡೋದಾದ್ರೆ ಡೀಸೆಲ್ ತೊಗೊಂಡು ಹೋಗಬಹುದು. ಸೀಮೆ ಎಣ್ಣೆ ತರ ವಾಸನೆ ಹೊಡೆಯಲ್ಲ. ಪೆಟ್ರೋಲ್ ನಷ್ಟು inflammable ಅಲ್ಲ.  ಬೆಂಕಿ ಪೊಟ್ಟಣ, lighter ತೊಗೊಂಡು ಹೋಗೋದು ಮರೀಬೇಡಿ.
೪. ದಾರೀಲಿ ತಿನ್ನಲು ಬಿಸ್ಕೆಟ್ಟು, ಚಾಕಲೇಟು, ಖರ್ಜೂರ, ಹಣ್ಣುಗಳು ಇಟ್ಕೊಳಿ. ಬೆಟ್ಟ್ ಹತ್ತಲು ಶಕ್ತಿ ತುಂಬಾ ಮುಖ್ಯ. ಗ್ಲೂಕೋಸ್, ಎಲೆಕ್ಟ್ರಾಲ್ ಇಟ್ಕೋಬಹುದು.
೫. Tissue Paper, ದಿನಪತ್ರಿಕೆಗಳು - Camp Fire ಹಾಕಲು ದಿನಪತ್ರಿಕೆಗಳು ಬೇಕಾಗತ್ವೆ. ಬೆಳಗ್ಗಿನ ಕೆಲಸ ಮುಗಿಸಲು Tissue paper ಬೇಕಾಗತ್ತೆ.
೬. ಒಳ್ಳೇ ಚಾಕು ಬೇಕೇ ಬೇಕು.
೭. Medical Kit - Band aids, bandage cloth, Cotton, Dettol, Anti-Inflammatory Ointment/Spray, Crepe bandage, Paracetamol, Anti-Diarrhoeal, Personal medication.
೮. ಭೂಪಟ(map),  ID card, permission letter (ಇದ್ದರೆ), ಬ್ಲಾಗ್ ಗಳ print-outs.
೯. ಬೆಟ್ಟಗಳಲ್ಲಿ ನಕ್ಷತ್ರಗಳು ತುಂಬಾ ಚೆನ್ನಾಗಿ ಕಾಣುತ್ವೆ. ಖಗೋಳದಲ್ಲಿ ಆಸಕ್ತಿ ಇರೋರು star charts ತೊಗೊಂಡು ಹೋಗ್ಬೋದು.
೧೦. ಜಿಗಣೆ ಹತ್ಕೊಂಡ್ರೆ ಬಿಡಿಸಿಕೊಳ್ಳಲು ಉಪ್ಪು ತೊಗೊಂಡು ಹೋಗಿ.
ದಯವಿಟ್ಟು ಬೆಟ್ಟಗಳಲ್ಲಿ ಮದ್ಯಪಾನ ಧೂಮಪಾನ ಮಾಡ್ಬೇಡಿ. ಹಾಗೇ ನಿಮ್ಮ ಕಸವನ್ನು ನಿಮ್ಮ ಜೊತೆಗೇ ಹಿಂದೆ ತನ್ನಿ.
Leave nothing but footprints. Take nothing but memories (and of course photographs :) ). 

ಇನ್ನೂ ಏನಾದ್ರೂ ಬಿಟ್ಟಿದ್ರೆ ನೀವು comment ಬರೆದು ಸೇರಿಸಿ.
ಹ್ಯಾಪ್ಪಿ ಟ್ರೆಕಿಂಗ್...

Rating
No votes yet

Comments