ಐಟಿ ಕಂಪನಿಯಲ್ಲಿ ಬಭ್ರುವಾಹನ

ಐಟಿ ಕಂಪನಿಯಲ್ಲಿ ಬಭ್ರುವಾಹನ

ಐಟಿ ಕಂಪನಿಯಲ್ಲಿ ಬಭ್ರುವಾಹನ

ಪಾತ್ರಗಳು:
ಅರ್ಜುನ = ಮ್ಯಾನೇಜರ್
ಬಭ್ರುವಾಹನ = ಟೆಸ್ಟ್ ಇಂಜಿನೀಯರ್

ಯಾರು ತಿಳಿಯರು.. ಹೇ ಮ್ಯಾನೇಜರ್ ನಿನ್ನ ಕೋಡಿಂಗ್ ಪರಾಕ್ರಮ..
ರಿಲೀಸ್ ಟೈಂ ನಲ್ಲಿ ತಿಳಿಯಿತು ನಿನ್ನ ಕೋಡಿಂಗ್ ನ ಮರ್ಮ..
ಹಗಲಿರುಳು ತಲೆಕೆಡಿಸಿಕೊಂಡು ಕೋಡಿಂಗ್ ಮಾಡಿ
ಪ್ರಾಜೆಕ್ಟ್ ಸಕ್ಸಸ್ ಮಾಡಿದ ಆ ಐಟಿ ನಂದನರು..
ಎಲ್ಲದಕೂ ಕಾರಣರು ಈ ನಿನ್ನ ಡೆವೆಲಪರ್ ಇಂಜಿನಿಯರ್ಸ್ ಊ..
ಅವರಿಲ್ಲದೆ ನೀನು ತೃಣಕ್ಕೆ ಸಮಾನ..ಆ..

ಹಹಾ!.. ಸಾಫ್ಟ್ವ್ ವೇರ್ ಎಕ್ಸ್ ಪರ್ಟು ನಾ.. ಕೋಡಿಂಗ್ ಶೂರನಾಗಿದ್ದವನೋ..!
ಕ್ಲಯಿಂಟ್ ಗಳ ಜೊತೆ ಹೋರಾಡಿ ಆನ್ ಸೈಟ್ ಗಳ ಗಿಟ್ಟಿಸಿದವನೋ..
ಕ್ರಿಟಿಕಲ್ ಇಶ್ಯುಗಳು ಎದುರಾಗಿ.. ಎಲ್ಲವನು ಫಿಕ್ಸ್ ಮಾಡಿದ ವ್ಯಾಘ್ರನಿವನೋ.. "ಬೆಸ್ಟ್ ಪರ್ಫಾರ್ಮರ್ ಊ.."

ಓಹ್ಹೋ..! "ಬೆಸ್ಟ್ ಪರ್ಫಾರ್ಮರ್".. ಯುಎಸ್ ಪ್ರಾಜೆಕ್ಟ್ ಮಠ ಹತ್ತುತ್ತಿದ್ದಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ..
"ಲೇಡಿ ಇಂಜಿನಿಯರ್ಸ್" ಗಳ ಕಟ್ಟಿಕೊಂಡು ಆನ್ಯುಯಲ್ ಡೇ ನಲ್ಲಿ ಡ್ಯಾನ್ಸ್ ಕಲಿಸಿದ ಡ್ಯಾನ್ಸರ್ ನೀನು..
ಕ್ಲಯಿಂಟ್ ಗಳ ಜೊತೆ ಡೀಲ್ ಮಾಡಿ ಇಂಜಿನಿಯರ್ಸ್ ಗಳ ಮನೆಗೆ ಕಳಿಸಿದ ಭ್ರಷ್ಟಾ ನೀನು..
ಡೆವೆಲಪರ್ ಗಳ ಮೀರಿಸೋ ಕೋಡಿಂಗು ನಿನದೆಲ್ಲೋ.. ಡಿಫೆಕ್ಟ್ ಅಸ್ಸೈನ್ ಮಾಡದೇ ಉಳಿಸುವೆ..
ಹೊಗೋ ಹೊಗೆಲೋ.. ’ಡ್ಯಾನ್ಸರ್’..

ಪಡ-ಪಡಾ ’ಡ್ಯಾನ್ಸರ್’ ಎಂದಡಿಗಡಿಗೆ ಅನೌನ್ಸ್ ಮಾಡಬೇಡೋ ಮೂಢ..
ಟೆಸ್ಟರ್,ಇಂಜಿನಿಯರ್ಸ್ ಗಳ ನಿದ್ರೆ ಕೆಡಿಸುತ.. ಲೇಟ್ ನೈಟ್ ವರ್ಕ್ ಮಾಡುವಂತೆ ಮಾಡುವ ಈ ಮ್ಯಾನೇಜರ್..
ಇಂಜಿನೀಯರ್ ಗಳ ಗಂಡ.. ಐಟಿ-ಪುಂಡ.. ಭೂಮಂಡಲದೋಳ್ ಭಂಡ.. ಸಾಫ್ಟ್ ವೇರ್ ಪ್ರಚಂಡ..

ಗಂಡನೋ..ಷಂಡನೋ, ಪುಂಡನೋ ನಿರ್ಧರಿಸುವುದು ಈ ಐಟಿ ರಣರಂಗ..
ಮಾಡು ಕೋಡಿಂಗ್.. ಡಿಫೆಕ್ಟ್ಸ್ ಬಂದ್ರೆ ನಿನ್ನ ಮಾನಭಂಗ..

ಪ್ರಾಜೆಕ್ಟ್ ನಲ್ಲಿ ಈ ಮ್ಯಾನೇಜರ್ ನ ಕೆಣಕಿ ಉಳಿದವರಿಲ್ಲ..
ಅಬ್ಬರಿಸಿ ಒನ್-ಒನ್ ಮೀಟಿಂಗ್ ಮಾಡಿದ್ರೂ.. ಇಲ್ಲಾರಿಗೂ ಭಯವಿಲ್ಲ..

ಆರ್ಭಟಿಸಿ ಬರುತಿದೆ ನೋಡು ’ಫೈರಿಂಗ್ ಲೆಟರ್’
ಫೈರಿಂಗ್ ಗೆ ಫೈರ್ ಇಂಜಿನ್ನು ಈ ’ಟೆಸ್ಟ್ ಇಂಜಿನೀಯರ್’

----
ಸೂ: ಇದು ನನ್ನ ಸ್ವಂತದ್ದಲ್ಲ.

Rating
No votes yet

Comments