ಒಂಟಿ ಹಕ್ಕಿಯ ಪಯಣ
ನಡೆಯುತಿರೆ ನಾನೊಂಟಿಯಾಗಿ
ಮರಳ ತೀರದಲ್ಲಿ ,
ಬಂದು ಬಿಗಿದಪ್ಪಿದಾ ಅಲೆಯು ನೀ
ಜಗದ ಮರುಳಿನಲ್ಲಿ.
ಸಾಗುತಿರಲು ನಾ
ಕಾಡುಮೇಡಿನಲ್ಲಿ,
ಬೀಸಿದ ತಂಗಾಳಿ ನೀ
ಇಹದ ಕನಸುಗಳಲ್ಲಿ.
ಸಾಗುತಿರೆ ಪಯಣ
ಬರಡು ಬೆಂಗಾಡಿನಲ್ಲಿ,
ಒದಗಿದೊಲುಮೆಯ ಚಿಲುಮೆ ನೀ
ಈ ಸುಂದರ ಸಂಜೆಯಲ್ಲಿ.
ಕುಳಿತಿರಲು ನಾ ಏಕಾಂಗಿಯಾಗಿ
ಮನದ ಮೂಲೆಯಲ್ಲಿ,
ಪ್ರೀತಿಯ ನೀರೆರೆದ ಒಲವು ನೀ
ಈ ಜೀವದಲ್ಲಿ.
Rating
Comments
ಅಪ್ಯಾಯಮಾನವಾಗಿದೆ. ನಿಮ್ಮ
ಅಪ್ಯಾಯಮಾನವಾಗಿದೆ. ನಿಮ್ಮ ಚೆಲುವೆ ನಿಮ್ಮೊ0ದಿಗೆ ನಿರ0ತರ ಇರಲಿ
In reply to ಅಪ್ಯಾಯಮಾನವಾಗಿದೆ. ನಿಮ್ಮ by harishsaniha
ಮೆಚ್ಚುಗೆ & ಹಾರೈಕೆಗಳಿಗೆ
ಮೆಚ್ಚುಗೆ & ಹಾರೈಕೆಗಳಿಗೆ ಧನ್ಯವಾದಗಳು. ನಾನು ಬಯಸುವುದು ನೀವು ಹೇಳಿದ್ದನ್ನೇ :)
ವಂದನೆಗಳೊಂದಿಗೆ
ರವಿಕಿರಣ್