ಒಂದು ಅತಿಸಣ್ಣ ಕಥೆ-
ಒಬ್ಬ ಗುರುವಿನ ಹತ್ತಿರ ಒಬ್ಬ ಶಿಷ್ಯ ಅಧ್ಯಯನ ಮಾಡುತ್ತಿದ್ದ . ಅವನು ಯಾವಾಗಲೂ ಓದಿನ ಕುರಿತೇ ಚಿಂತಿಸುತ್ತಿದ್ದ. ಗುರುಗಳು ತಮ್ಮ ಪತ್ನಿಗೆ ಶಿಷ್ಯನಿಗೆ ಊಟದ ಸಮಯದಲ್ಲಿ ತುಪ್ಪದ ಬದಲು ಬೇವಿನ ಎಣ್ಣೆಯನ್ನು ಬಡಿಸಲು ಹೇಳಿದ್ದರು. ಆ ಪ್ರಕಾರ ಅವರು ಪ್ರತಿದಿನ ಬೇವಿನ ಎಣ್ಣೆ ಬಡಿಸಿದರೂ , ಅನ್ನದ ಜತೆ ಅದನ್ನೇ ಕಲಸಿಕೊಂಡು ಉಣ್ಣುತ್ತಿದ್ದ . ಅವನಿಗೆ ಅದರ ರುಚಿ ಗೊತ್ತಾಗುತ್ತಲೇ ಇರಲಿಲ್ಲ. ಏಕೆಂದರೆ ಊಟದತ್ತ ಅವನ ಗಮನ ಇರಲೇ ಇಲ್ಲವಲ್ಲ? .
ಹೀಗೆ ಅನೇಕ ವರ್ಷಗಳು ಕಳೆದವು .
ಒಂದು ದಿನ ಅವನು ಗುರುಪತ್ನಿಗೆ ' ಅಮ್ಮಾ ಕೈತಪ್ಪಿ ನೀವು ತುಪ್ಪದ ಬದಲಾಗಿ ಬೇವಿನ ಎಣ್ಣೆ ಬಡಿಸಿದಿರಿ ಎಂತ ಕಾಣುತ್ತದೆ' ಅಂದ . ಗುರುಪತ್ನಿ 'ಹೌದಾ? ಹಾಳು ಮರೆವು ನನ್ನದು. ' ಎಂದು ತುಪ್ಪ ಬಡಿಸಿದರು .
ವಿಷಯವನ್ನು ಗುರುಗಳಿಗೆ ತಿಳಿಸಿದರು.
ಗುರುಗಳು ನಂತರ ಶಿಷ್ಯನನ್ನ ಕರೆದು . ' ಅಪ್ಪಾ , ನೀವು ನನ್ನ ಬಳಿ ಕಲಿಯುವುದೆಲ್ಲ ಮುಗಿದಿದೆ . ನೀನಿನ್ನು ಇಲ್ಲಿಂದ ಹೊರಡಬಹುದು.' ಎಂದು ಅಪ್ಪಣೆ ಕೊಟ್ಟರು
Rating
Comments
ನಮಸ್ಕಾರ,