ಒಂದು ಕನ್ನಡ ಕೆಲಸ ಆಗಬೇಕು ಅಂದ್ರೆ ಹೋರಾಟ ಮಾಡ್ಲೆಬೇಕಾ?

ಒಂದು ಕನ್ನಡ ಕೆಲಸ ಆಗಬೇಕು ಅಂದ್ರೆ ಹೋರಾಟ ಮಾಡ್ಲೆಬೇಕಾ?

ನಮಸ್ಕಾರ ಸ್ನೇಹಿತರೆ,
ಇವತ್ತಿನ ಯಾವುದೇ ಕನ್ನಡ ಪತ್ರಿಕೆ ನೋಡಿದ್ರೆ ಅಲ್ಲಿ ನಮ್ಮ ಡಾ.ರಾಜ್ ಕುಮಾರ್ ಅಂಚೆ ಚೀಟಿ ಕೊನೆಗೂ ಹೊರಗೆ ಬರುವ ವಿಷಯವನ್ನು ಬರೆದಿದ್ದಾರೆ. ಸಂತೋಷದ ವಿಷಯ. ಯಾವತ್ತೋ ಸಿಗಬೇಕಾದ ಸನ್ಮಾನ ಮುಂದಿನ ವರ್ಷ ಮಾರ್ಚಿನಲ್ಲಿ ಸಿಗಬಹುದು ಅನ್ನೋ ನಿರೀಕ್ಷೆ. ಇದನ್ನ ಸಾಧಿಸೋಕೆ ನಮ್ಮ ಸಂಸದರು ೧೦೦ ಬಾರಿ ಮಂತ್ರಿಗಳ ಕಾಲಿಗೆಬೀಳಬೇಕು, ಅದು ಅವರದೇ ಪಕ್ಷದ ಮಂತ್ರಿಗಳಿಗೆ.
ಆದ್ರೆ ಒಂದು ಅಂಚೆ ಚೀಟಿ ನಮ್ಮ ಕನ್ನಡ ಇತಿಹಾಸ ಅಥವಾ ಇಲ್ಲಿನ ಮಹನೀಯರನ್ನು ಕುರಿತು ತರಬೇಕು ಅಂದ್ರೆ ಅದಕ್ಕೂ ನಾವುಗಳು ಹೋರಾಟ ಮಾಡಬೇಕಾ? ಅಷ್ಟು ಶಕ್ತಿಹೀನರಾಗಿದ್ದೆವೆಯೇ? ನಿಮಗೆ ಗೊತ್ತಿರಲಿ ಕನ್ನಡ ಇತಿಹಾಸ ಬಿಂಬಿಸುವ ಅಂಚೆ ಚೀಟಿ ಅಂತ ಇದುವರೆಗೂ ಬಂದಿರುವುದು ಕೇವಲ ೩ ಬಾರಿ.
೧) 1960ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ,
೨)1979ರಲ್ಲಿ ಭಕ್ತಿ ಭಂಡಾರಿ ಬಸವಣ್ಣ ಮತ್ತು
೩)ಮೊದಲ ನಾಲ್ಕು ಜ್ಞಾನಪೀಠ ಪ್ರಶಸ್ತಿ ಗಳಿಸಿದ ಸಾಹಿತಿಗಳನ್ನು ಒಟ್ಟಾಗಿ ಸೇರಿಸಿ ತಂದ ಅಂಚೆ ಚೀಟಿ.
ನಮ್ಮ ಪಕ್ಕದ ತಮಿಳುನಾಡಿನಲ್ಲಿ ೨೦೦೬ಲ್ಲೆ ೧೭ ಬೇರೆ ಅಂಚೆ ಚೀಟಿ ಹೊರಗೆ ತಂದಿದ್ದಾರೆ.

ಯಾಕೆ ಹೀಗೆ ನಾವುಗಳು ಎಲ್ಲದರಲ್ಲೂ ಹಿಂದೆ ಬೀಳಬೇಕು? ನಮ್ಮಲ್ಲಿ ರಾಜಕೀಯ ಇಚ್ಚಾ ಶಕ್ತಿಯ ಕೊರತೆ ಇದೆ, ಇಲ್ಲಿ ಒಬ್ಬ ರಾಜಕಾರಣಿಯೂ ತನ್ನ ರಾಜ್ಯ, ಭಾಷೆ ಬಗ್ಗೆ ನಮ್ಮ ಸದನದಲ್ಲಿ ಧ್ವನಿ ಎತ್ತಲ್ಲ. ಯಾಕಂದ್ರೆ ನಾವುಗಳು ಆರಿಸಿ ಕಳಿಸಿದ ಸಂಸದರನ್ನು ಮತ್ತೆ ನಾವು ಮಾತನಾಡಿಸೋದು ತಿರುಗಿ ಓಟು ಕೇಳಲು ಬಂದಾಗ. ನೀನು ೫ ವರ್ಷದಲ್ಲಿ ಏನು ಕಿಸಿದಿದಿಯ ಹೇಳು ಅಂತ ಕೊರಳಪಟ್ಟಿ ಹಿಡಿದು ಒಬ್ರು ಕೇಳಲ್ಲ.
ಇದು ಒಂದೇ ಅಂತ ಅಲ್ಲ. ಇವತ್ತು ಕಾವೇರಿ ನೀರಿನ ವಿಷಯ ನಿಮಗೆ ಗೊತ್ತಿದೆ, ಮಾಹಾರಷ್ಟ್ರಕ್ಕೆ ನೀರು ಹೆಚ್ಚಾದರೆ ನಮ್ಮ ಕರ್ನಾಟಕದಲ್ಲಿ ಪ್ರವಾಹ ಆಗುವಂತೆ ನೋಡ್ಕೊಳ್ತಾರೆ, ಅದ್ರು ನಮ್ಮ ರಾಜ್ಯದವರು ಏನು ಅನ್ನಲ್ಲ, ತುಂಗಭದ್ರ ನೀರನ್ನು ನಾವು ಉಪಯೋಗಿಸಿ ಕೊಳ್ಳಬೇಕು ಅಂದ್ರೆ ಆಂಧ್ರದವರ ತಗಾದೆ, ಆದ್ರೆ ಅವ್ರು ಮಾತ್ರ ಎಷ್ಟು ಬೇಕಾದರು ನೀರಾವರಿ ಯೋಜನೆ ಮಾಡ್ಕೋಬಹುದು. ಇನ್ನು ಮಹದಾಯಿ ಯೋಜನೆ ಬಗ್ಗೆ ಕೇಳಲೇ ಬೇಡಿ, ಕಳಸಾ ಬಂಡೂರಿ ನಾಲೆ ಯೋಜನೆ ಇನ್ನು ಅನುಷ್ಠಾನಕ್ಕೆ ಬಂದಿಲ್ಲ ೩೦ ವರ್ಷದಿಂದ ಹೋರಾಟ ನಡೀತಾ ಇದೆ.
ಹಿಂದಿ ನಮ್ಮ ರಾಷ್ಟ್ರ ಭಾಷೆ ಅನ್ನೋ ದೊಡ್ಡ ಸುಳ್ಳನ್ನ ನಮಗೆ ೩ನೆ ಭಾಷೆಯಾಗಿ ಕಲಿಸುತ್ತಾರೆ. ನಮ್ಮ ಶಿಕ್ಷಣ ತಜ್ಞರ ವಿರೋಧ ಇದ್ರೂ ಕೂಡ ಇದನ್ನ ಸರ್ಕಾರ ಏನು ಮಾಡೋಕಾಗಲ್ಲ, ಕರ್ನಾಟಕದಲ್ಲಿ ಕನ್ನಡದಲ್ಲಿ ಮಕ್ಕಳು ಕಲಿಬಾರ್ದು ಅನ್ನೋ ಹೊಸ ಕಾನೂನು.
ಅನಿಯಂತ್ರಿತ ವಲಸೆಯಿಂದ ನಾವು ಕರ್ನಾಟಕದಲ್ಲಿದಿವೋ ಅಥವಾ ಇನ್ನಾವುದೋ ರಾಜ್ಯದಲ್ಲಿದಿವೋ ಅನ್ನೋದು ಕೂಡ ಗೊತ್ತಾಗಲ್ಲ. ದಿಲ್ಲಿಯ ಪಾರ್ಲಿಮೆಂಟಿನಲ್ಲಿ ಬಸವಣ್ಣ ನವರ ಮೂರ್ತಿ ಸ್ಥಾಪಿಸಬೇಕು ಅಂದ್ರೆ ಹೋರಾಟ,
ಹೀಗೆ ನಮ್ಮ ಕನ್ನಡ ನಾಡಿನವರ ಸಂಕಟ ಹನುಮಂತನ ಬಾಲದ ತರಹ ಬೆಳೆಯುತ್ತಾ ಹೋಗುತ್ತೆ. ತುಂಬಾ ನೋವಾಗುತ್ತೆ ಇದನೆಲ್ಲ ಬರೀಬೇಕು ಅಂದ್ರೆ. ಅದ್ರು ನಮ್ಮ ದುಃಖ ೧೦೦ ಜನರದ್ದಾಗಿ, ಅದು ಹೋರಾಟದ ರೂಪ ಪಡೆದಾಗ ತಾನೆ ನ್ಯಾಯ ಸಿಗೋದು. ಕಾರ್ಮಿಕ ಹೋರಾಟಗಳು ಶುರುವಾಗಿದ್ದೆ ಹೀಗೆ. industrial revolution ಆಗಿದ್ದೆ ಇದೆ ತಳಹದಿಯ ಮೇಲೆ, ಎಲ್ಲೇ ಹೋದ್ರು ಅನ್ಯಾಯ, ಇದಕ್ಕೆ ಬೇಸತ್ತು ತಾನೆ ಜನ ರೋಚ್ಚಿಗೆದ್ದಿದ್ದು.

ನಮ್ಮ ಕನ್ನಡಿಗರ ಸ್ಥಿತಿ ಇಷ್ಟು ಕೆಟ್ಟು ಹೋಗಿಲ್ಲ, ಆದ್ರೆ ಇವಾಗ ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಸ್ಥಿತಿ ಕೂಡ ಇದಕ್ಕೆ ಭಿನ್ನವಾಗಿರುವುದಿಲ್ಲ. ಅರೆ ಸ್ವಾಮೀ ನಮಗಿರುವ ಹಕ್ಕು ನಮಗೆ ಕೊಡಿ ಅನ್ನೋದಕ್ಕೂ ನಾವುಗಳು ಹೋರಾಟ ಮಾಡಲೇಬೇಕಾದ ಪರಿಸ್ಥಿತಿ ಬಂದಿದೆ ಇವತ್ತು.
ಇದಕ್ಕೆ ಪರಿಹಾರ ಕನ್ನಡಿಗರಲ್ಲಿ ಜಾಗೃತಿ, ಬೇರೆಯವರು ಏನು ಅಂದುಕೊಳ್ತಾರೋ ಅನ್ನೋ ಹೇಡಿತನ ಬಿಡಬೇಕು, ನಮಗೆ ಬರಬೇಕಾದದ್ದು ನಮಗೆ ಕೊಡಿ ಅನ್ನೋ ಎದೆಗಾರಿಕೆ. ಮತ್ತು ನಮ್ಮ ರಾಜ್ಯಕ್ಕೆ ತನ್ನದೇ ಆದ ಒಂದು ಕನ್ನಡ ಪರ ಚಿಂತನೆಉಳ್ಳ, ದೂರದೃಷ್ಟಿ ಇರುವ, ಪ್ರಾದೇಶಿಕ ಪಕ್ಷದ ಅತ್ಯಗತ್ಯ. ಇವತ್ತು ತಮಿಳರು ಕೇಂದ್ರವನ್ನು ಹೆದರಿಸೋದಕ್ಕೆ ಕಾರಣ ಅವರ ಪ್ರಾದೇಶಿಕತೆಗೆ ಕೊಟ್ಟಿರೋ ಒತ್ತು. ಈ ತರಹ ಪ್ರಾದೇಶಿಕತೆ ನಮ್ಮ ನೆಲದಲ್ಲಿ ಬೆಳೆಯಬೇಕು ಆವಾಗಲೇ ನಾವು ಬೆಳೆದು ನಿಲ್ಲೋಕೆ ಸಾಧ್ಯ.
ಏನಂತೀರಾ?

Rating
No votes yet

Comments