ಒಂದು ಚಿಕ್ಕ ಪ್ರಶ್ನೆ
ಒಬ್ಬ ಬುದ್ದ್ದಿವಂತೆ ಇದ್ದಳು. ಅವಳಿಗೋ ಎಲ್ಲವನ್ನು ಒಗಟಾಗಿ ಹೇಳುವ ಹವ್ಯಾಸ. ಅವಳನ್ನು ಒಬ್ಬ ದಡ್ದ ಮದುವೆಯಾದ . ಒಂದು ರಾತ್ರಿ ಗಂಡ ಎದ್ದು ನೋಡುತ್ತಾನೆ. ಪಕ್ಕದಲ್ಲಿ ಹೆಂಡತಿ ಇಲ್ಲ . ಎಲ್ಲ ಕಡೆ ಹುಡುಕಿ ಸುಸ್ತಾದ. ಸ್ವಲ್ಪ ಹೊತ್ತಾದ ಮೇಲೆ ಹೆಂಡತಿ ಬಂದಳು . ಗಂಡ್ ಏನೂ ಕೇಳಲಿಲ್ಲ . ಹೀಗೆ ತುಂಬ ದಿನ ನಡೆದಾಗ ತಡೆಯಲಾಗದೆ ಗಂಡ ಒಮ್ಮೆ ಕೇಳಿಯೇ ಬಿಟ್ಟ . " ನೀನು ದಿನ ರಾತ್ರಿ ಎಲ್ಲಿಗೆ ಹೋಗ್ತೀಯ" ಹೆಂಡತಿ ಕೂಲ್ ಆಗಿ ಹೇಳಿದಳು " ಕಳೆದುಕೊಂಡವನ ಹೆಂಡತಿಯನ್ನ ಹುಡುಕೋಕೆ ಹೋದವನ ಅಪ್ಪನ ಹತ್ತಿರ ಹೋಗ್ತೀನಿ"
ಗಂಡನಿಗೆ ಕೋಪ ಬಂತು. " ನಾನು ಇಲ್ಲಿರುವಾಗ ಯಾರ ಹತ್ರಾನೋ ಹೊಗ್ತೀಯ . ಎಷ್ಟೇ ಕೊಬ್ಬು ನಿನಗೆ" ಅಂದ . " "ನೀನೂ ಬೇಕಾದರೆ ಹೋಗು . ನಂಗೆನು ಪ್ರಾಬ್ಲಮ್ ಇಲ್ಲ" ಎಂದಳು ಗಂಡ ಅತ್ತೆ ಮಾವನ್ನ ಕರೆಸಿದ " ಆಗಲೂ ಅದೆ ಉತ್ತರ " ಕಳೆದುಕೊಂಡವನ ಹೆಂಡತಿಯನ್ನ ಹುಡುಕೋಕೆ ಹೋದವನ ಅಪ್ಪನ ಹತ್ತಿರ ಹೋಗ್ತೀನಿ" ಹೊಡೆದರೂ ಇಲ್ಲ ಬೈದರೂ ಇಲ್ಲ. ಪಾಪದ ಬಡಪಾಯಿ ಗಂದನಿಗೆ ಉತ್ಥರವನ್ನು ನೀವಾದರೂ ಹೇಳುತ್ತೀರಾ?
Rating
Comments
ಉ: ಒಂದು ಚಿಕ್ಕ ಪ್ರಶ್ನೆ
In reply to ಉ: ಒಂದು ಚಿಕ್ಕ ಪ್ರಶ್ನೆ by shreekant.mishrikoti
ಉ: ಒಂದು ಚಿಕ್ಕ ಪ್ರಶ್ನೆ
In reply to ಉ: ಒಂದು ಚಿಕ್ಕ ಪ್ರಶ್ನೆ by roopablrao
ಉ: ಒಂದು ಚಿಕ್ಕ ಪ್ರಶ್ನೆ