ಒಂದು ದಿನದ ಸಕಲೇಶಪುರ ಟ್ರೆಕ್...... ಮುಂದುವರೆದ ಭಾಗ...
ಹಿಂದಿನ ಭಾಗ
http://sampada.net/article/16725
ಮುಂದುವರೆದ ಭಾಗ...
ನಾನು ಅಲ್ಲಿದ್ದವರಿಗೆ, ನಾನು, ವೆಂಕ ಜೀಪ್ ಇರೋ ಜಾಗಕ್ಕೆ ಹೋಗಿ ಅಲ್ಲಿಂದ ಗುಂಡ್ಯಕ್ಕೆ ಹೋಗಿ ಆಮೇಲೆ ಸುಬ್ರಮಣ್ಯಕ್ಕೆ ಹೋದ್ರೆ ಹೆಂಗೆ ಅಂದೆ. ಅದಕ್ಕೆ ಎಲ್ಲರೂ ಬೇಡ ಅಂದ್ರು, ಸ್ವಲ್ಪ ಹೊತ್ತಾದ ಮೇಲೆ ಸೌಜ, ಸರಿ ಹಾಗೆ ಮಾಡಿ ಅಂದ.
ವೆಂಕ ನಾನು ಹೊರಟ್ವಿ.ಮೊದಲೇ ಸುಸ್ತಾಗಿ ಹೋಗಿದ್ದ ನಾವು ವಿಧಿಯಿಲ್ಲದೆ ನಡೆಯಬೇಕಾಯಿತು. 6.30, ಕತ್ತಲಾಗುತ್ತಾ ಬರುತ್ತಿತ್ತು. ಆನೆ, ಹಾವುಗಳ ಭಯ, ಸರಿ 2 ಕಿ.ಮೀ ಹೋಗಿರಬೇಕು, ಆಗ ಊಟ ತರುತ್ತಿರುವವರು ಸಿಕ್ಕಿದ್ರು, ಅವ್ರನ್ನ ಕೇಳಿದಾಗ, ಸಾರ್ ಅವ್ರು ಬಹುಶಃ ಹೋಗಿರ್ತಾರೆ, ಯಾಕಂದ್ರೆ ಆ ದಾರಿಯಲ್ಲಿ ಆನೆಗಳು ತುಂಬಾ ಇವೆ. ಇಲ್ಲಿವರೆಗೆ ಬಂದಿದ್ದೀರಾ ಅಲ್ಲಿ ತನಕ ಹೋಗಿ ಬನ್ನಿ ಅಂತ ಅಂದ್ರು.
ಈಗ ಇಬ್ಬರಿಗೂ ಮತ್ತೊಂದು ಸಮಸ್ಯೆ ಎದುರಾಯಿತು. ಅಕಸ್ಮಾತ್ ಜೀಪ್ ಅಲ್ಲಿಲ್ಲ ಅಂದ್ರೆ ಏನು ಮಾಡುವುದು???
1) ಗೂಡ್ಸ್ ರೈಲಿಗೆ ಅಡ್ಡ ಹಾಕುವುದು.
2) ಇನ್ನೊಂದು ವಾಪಸ್ ಯಡಕಮುರಿ ರೈಲ್ವೇ ಸ್ಟೇಷನ್ ಹೋಗುವುದು (ಮತ್ತೆ 3.5 ಕಿ.ಮೀ).
ಜೀಪ್ ಇರೋ ಜಾಗದ ಹತ್ತಿರ ಸಮೀಪಿಸುತ್ತಿರುವಾಗ ನಮಗೆ ಅಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುವುದಕ್ಕೆ ಕಾಯುತ್ತಿದ್ದ ರೈಲ್ವೇ ಕಾರ್ಮಿಕರು ಸಿಕ್ಕಿದ್ರು, ಮುಂದೆ ರಸ್ತೆ ಇದೆ ಹೋಗಿ ನೋಡು ಅಂದ್ರು, ಆಗ ಸುಬ್ರಮಣ್ಯಕ್ಕೆ ಬರುವ ಗೂಡ್ಸ್ ರೈಲ್ ಸದ್ದಾಯಿತು. ನಾವು ಜೀಪ್ ಇದೆಯಾ ಅಂತ ನೋಡಲು ಒಂದು ಸಣ್ಣ ಸೇತುವೆ ಮತ್ತೆ ಸುರಂಗವನ್ನು ದಾಟಬೇಕಾಗಿತ್ತು, ಇತ್ತ ಕಡೆ ಗೂಡ್ಸ್ ರೈಲ್ ಅತ್ತ ಕಡೆ ಜೀಪ್....
ಮುಂದುವರೆಯುವುದು....
Comments
ಉ: ಒಂದು ದಿನದ ಸಕಲೇಶಪುರ ಟ್ರೆಕ್...... ಮುಂದುವರೆದ ಭಾಗ...
In reply to ಉ: ಒಂದು ದಿನದ ಸಕಲೇಶಪುರ ಟ್ರೆಕ್...... ಮುಂದುವರೆದ ಭಾಗ... by Rakesh Shetty
ಉ: ಒಂದು ದಿನದ ಸಕಲೇಶಪುರ ಟ್ರೆಕ್...... ಮುಂದುವರೆದ ಭಾಗ...
ಉ: ಒಂದು ದಿನದ ಸಕಲೇಶಪುರ ಟ್ರೆಕ್...... ಮುಂದುವರೆದ ಭಾಗ...