ಒಂದು ನಾಯಿ ಕತೆ

ಒಂದು ನಾಯಿ ಕತೆ

ಹೀಗೆ ಒಬ್ಬ ತನ್ನ ಹೆಂಡತಿಯೊಂದಿಗೆ ಜಗಳಾಡಿಕೊಂಡು ಮನೆ ಬಿಟ್ಟು ಹೊರಟ. ಮನೆ ಬಿಟ್ರೆ ಕಚೇರಿ, ಕಚೇರಿ ಬಿಟ್ರೆ ಮನೆ ಅಂತಿದ್ದೋನಿಗೆ ಈಗ ಎಲ್ಲಿಗೆ ಹೋಗಲೂ ತೋಚಲಿಲ್ಲ. ಸುಮ್ಮನೆ ಒಂದು ಪಾರ್ಕಿನಲ್ಲಿ (ಉದ್ಯಾನದಲ್ಲಿ) ಬೆಂಚಿನ ಮೇಲೆ ಕುಳಿತುಕೊಂಡ. ಮನ ಖಾಲಿಯಾಗಿತ್ತು.
ಹೀಗಿರುವಲ್ಲಿ ಪಕ್ಕದ ರಸ್ತೆಯಲ್ಲಿ ಒಂದು ಅಂತಿಮಯಾತ್ರೆ ಸಾಗಿತು. ಮೆರವಣಿಗೆಯಲ್ಲಿ ಎಲ್ಲರಿಗೂ ಮುಂದೆ ಒಂದು ಸಾಲಂಕೃತ ನಾಯಿ ಠೀವಿಯಿಂದ ನಡೆಯುತ್ತಿತ್ತು. ಅದಕ್ಕೆ ಉತ್ತಮ ಪೋಷಾಕು ತೊಡಿಸಿದ್ದರು, ಬಾಲಕ್ಕೆ ಗೆಜ್ಜೆ ಕಟ್ಟಿದ್ದರು.
ಇವನಿಗೆ ಕುತೂಹಲವುಂಟಾಗಿ ಆ ನಾಯಿಯ ಬಗ್ಗೆ ವಿಚಾರಿಸೋಣವೆಂದು ಮೆರವಣಿಗೆ ಹತ್ತಿರ ಸಾರಿದ. ಮೊದಲಿಗೇ ನಾಯಿಯ ಬಗ್ಗೆ ಕೇಳುವುದೆಂತು, ಸೌಜನ್ಯಕ್ಕಾಗಿ ಒಬ್ಬಾತನನ್ನು "ಯಾರು ಹೋದವರು?" ಎಂದ. ಆತ "ನನ್ನ ಹೆಂಡ್ತೀರಿ" ಅಂದ ಮಗುಮ್ಮಾಗಿ.
ಆತ ಸತ್ತವಳು ತನ್ನ ಹೆಂಡತಿ ಅಂದ ಮೇಲೆ ಅಷ್ಟಕ್ಕೇ ಸುಮ್ಮನಾದರೆ ಏನು ಚೆನ್ನ. ಸಂತಾಪ ವ್ಯಕ್ತಪಡಿಸಬೇಕಲ್ಲ.
"ಹೌದಾ ಸರ್‍, ಪಾಪ, ಸಮಾಧಾನ ಮಾಡ್ಕೊಳ್ಳಿ. . . ಅಂದ ಹಾಗೇ ಆ ನಾಯಿ ಆಕೆಗೆ ತುಂಬಾ ಅಚ್ಚುಮೆಚ್ಚಿನದ್ದಾಗಿರಬೇಕಲ್ವೆ?" ಎಂದು ಮಾತು ತಿರುಗಿಸಲೆತ್ನಿಸಿದ.
ಅದಕ್ಕೆ ಆ ಗಂಡ "ಆ ನಾಯಿ ಕಚ್ಚಿದ್ದಕ್ಕೇ ಕಣ್ರೀ ಆಕೆ ಸತ್ತಿದ್ದು, ಅದರಿಂದ ಆ ನಾಯಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದ.
ಇವನ ಕುತೂಹಲ ತಣಿಯಿತು. ಹಾಗೇ ಮನಸ್ಸಿನಲ್ಲಿ ಲೆಕ್ಕಾಚಾರ ಹಾಕಿದ. ಮೆಲ್ಲಗೆ ಆ ಗಂಡನ ಬಳಿ "ಸಾರ್‍, ಒಂದೇ ಒಂದು ಸಾರಿ, ಒಂದು ದಿನದ ಮಟ್ಟಿಗೆ ಆ ನಾಯಿಯನ್ನು ನನಗೆ ಕೊಡುವಿರಾ?" ಎಂದ ಕೇಳಿದ.
ಹಾಗೆ ಆತ ಕೇಳಿದ ಕೂಡಲೇ ಹಿಂದೆ ಇದ್ದ ಎಲ್ಲರೂ ಒಮ್ಮೆಲೇ ಆತನ ಮೇಲೆ ಹರಿಹಾಯ್ದರು. "ಏನಯ್ಯಾ ಬುದ್ದಿಗಿದ್ದಿ ಇದೆಯೇನಯ್ಯ ನಿನಗೆ, ಬಂದ್ಬಿಟ್ಟ ದೊಡ್ಡ ಮನುಷ್ಯ, ನಾವಿಲ್ಲಿ ಇಷ್ಟು ಜನ ಕ್ಯೂ ನಿಂತಿರೋದು ಕಾಣ್ಸೊಲ್ವೇನಯ್ಯ, ಹೋಗಯ್ಯ ಹಿಂದೆ ನಿಂತ್ಕೋ" ಎಂದು ಎಳೆದುಹಾಕಿದರು.

Rating
No votes yet

Comments