ಒಂದು ನಿಮಿಷ ನಕ್ಕು ಬಿಡೋಣ!

ಒಂದು ನಿಮಿಷ ನಕ್ಕು ಬಿಡೋಣ!

ಬಿಟ್ಟು ಪೋಗುವೆಯಾ?

ಗೆಳತಿ!

ಒಲವಿನೋಲೆಯನು ನೀನು ಬರೆಯುತಿರಲು

ಮರು ಓಲೆಯ ನಾನು ಬರೆಯುವೆನು

ಈಮೇಲು ಎಸ್ಸೆಮ್ಮೆಸ್ಸುಗಳ ಕಳುಹಲು

ತಪ್ಪದೇ ನಾನೂ ನಿನಗೆ ಕಳುಹುವೆನು

ಮೊಬೈಲಿನಲಿ ನೀನು ನಿಮಿಷ ಮಾತಾಡೆ

ನಾನು ಗಂಟೆಗಟ್ಟಲೆ ಮಾತನಾಡುವೆನು

ಗೆಳತಿ!

ಒಂದುವೇಳೆ ನೀನು ನನ್ನ ಬಿಟ್ಟು ಪೋದೊಡೆ

ಕ್ವಾರ್ಟರ್ ಏರಿಸಿ ನರ್ತನ ಮಾಡುವೆನು!

--------

ಇರುವ ಹಾಗೆ!

ಗೆಳತಿ!

ಪ್ರೀತಿಸಿ ಮದುವೆಯಾಗೋಣ ಎನ್ನುವೆಯಾ?

ಅದು ನೇರ ಆತ್ಮಹತ್ಯೆ!

ಹೆತ್ತವರ ಒಪ್ಪಿಸಿ ಮದುವೆಯಾಗೋಣ ಎನ್ನುವೆಯಾ?

ಅದು ಯೋಜಿತ ಕೊಲೆ!

ಗೆಳತಿ!

ನಾವು ಇರುವ ಹಾಗೆ ಇದ್ದುಬಿಡೋಣ

ಈ ನೆಲ, ಜಲ, ಬಾನು, ಕಾನುವಿನ ಹಾಗೆ!

----------------

ನನ್ನ ಕರೆಸಿಕೋ!

ಬಾಳ ಪಯಣದಲಿ ನೀನು

ಒಂಟಿಯೆಂದೆನಿಸಿಕೊಂಡಾಗ

ನೀನೆಲ್ಲಿ ನಡೆಯುತ್ತಿರುವೆ ಎಂದು

ನಿನಗೆ ತಿಳಿಯದಿದ್ದಾಗ

ನಡೆವ ಹಾದಿ ಮಂಜಿನಿಂದ

ಮುಸುಕಿದಂತೆ ಮಬ್ಬಾದಾಗ

ಜಗವೆಲ್ಲ ಕತ್ತಲೆಯಿಂದ ತುಂಬಿ

ಹೆಜ್ಜೆಯಿಡಲು ಕಷ್ಟವಾದಾಗ

ನೀನು ನನ್ನ ನೆನೆಸಿಕೋ, ಕರೆದುಕೋ

ನೇತ್ರವೈದ್ಯರಲ್ಲಿಗೆ ಕರೆದೊಯ್ಯುವೆ!

----------

Rating
No votes yet

Comments