ಒಂದು ಪಯಣ... ಭರವಸೆಯ ಬೆಳಕಿನತ್ತ !!

ಒಂದು ಪಯಣ... ಭರವಸೆಯ ಬೆಳಕಿನತ್ತ !!

 
 
ರೆಕ್ಕೆ ಇದ್ದರೆ ಸಾಕೆ .....

   
  ಬಾಲ್ಯದಿಂದಲೂ ಮನದಾಳದಲ್ಲಿ ಅಡಗಿದ್ದ ಸುಪ್ತ ಬಯಕೆಯನ್ನು ಸಾಕಾರಗೊಳಿಸಲು ಪ್ರೇರಣೆ ಮತ್ತು ಅವಕಾಶ ಸಿಕ್ಕಾಗ ,ಕಲ್ಲಿನಲ್ಲಿ ಕವಿತೆಯರಳಿಸುವ ಛಾತಿ ನಮ್ಮಲ್ಲಿದ್ದಾಗ ಪ್ರತಿ ಅನುಭವವನ್ನೂ ಗೆಲುವಿನ ಮೆಟ್ಟಿಲಾಗಿಸುವ ಛಲ ಇದ್ದಲ್ಲಿ ಗೆಲುವು ನಮ್ಮದಾಗುತ್ತದೆ. ಸಪ್ತ ಸಾಗರದಾಚೆಯ ಸುಪ್ತಸಾಗರದೆಡೆಗಿನ ಪ್ರಯಾಣ, ನಮ್ಮ ಪ್ರಯಾಸಕ್ಕೆ ಸಂದ ಫಲವಾಗಿರುತ್ತದೆ.

     ಅನಿಶ್ಚಿತತೆಯ ಬಿರುಗಾಳಿಗೆ ಸಿಕ್ಕು ಬೆಳಗಲು ಸೆಣೆಸಾದುತ್ತಿರುವ ದೀಪಗಳ ನಡುವೆ ತನ್ನನ್ನು ತಾನು ರಕ್ಷಿಸಿಕೊಂಡು ಪ್ರಕಾಶಮಾನವಾಗಿ ಉರಿದು ಪ್ರಭೆಯನ್ನು ನೀಡುವುದು ಸುಲಭದ ಮಾತಲ್ಲ. ಒಂದು ಸುಂದರ ಬೆಳಗು ಜನ್ಮಿಸಲು ಲಕ್ಷಲಕ್ಷ ತಾರೆಗಳ ಚಂದ್ರಮನ ಬಲಿಯಾಗಬೇಕಷ್ಟೇ !!

     ಬ್ರಹ್ಮಾಂಡದ ಪ್ರತಿಯೊಂದು ಜೀವಿಯಲ್ಲೂ ಪ್ರತಿಭೆ, ಸಾಮರ್ಥ್ಯ ಇದ್ದೇ ಇರುತ್ತದೆ. ಸಾಮರ್ಥ್ಯ ಅನ್ನುವುದು ನಮ್ಮ ಇಚ್ಚೆಯ ಮತ್ತೊಂದು ಹೆಸರಷ್ಟೇ, ಎಲ್ಲರಲ್ಲೂ ಅವರವರ ಇಚ್ಚೆಗೆ ಅನುಗುಣವಾಗಿ ಇರುತ್ತದೆ . ಸಾಗರದ ಆಳ ,ಆಕಾಶದೆತ್ತರ , ಜಗದಗಲ ... ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪ್ರತಿಭೆ ಅನ್ನುವುದು ಹೂವಿನಲ್ಲಿರುವ ಪರಿಮಳದಂತೆ. ಕೆಲವು ಘಾಡ. ಮತ್ತೆ ಕೆಲವು ಮಂದ ಮೋಹಕ. ತಂಗಾಳಿ ಬೀಸಿದಾಗ ಮಾತ್ರ ನಮ್ಮ ಅನುಭವಕ್ಕೆ ಬರುವಂತಹವು.
ಬಹಳಷ್ಟು ಸಾಧಕರು ತಮ್ಮ ಬಾಲ್ಯದಲಿನ  
ಕಟು ಅನುಭವಗಳಿಂದ ಪಾಠ ಕಲಿತಿದ್ದಾರೆ. ಥಾಮಸ್ ಆಳ್ವ ಎಡಿಸನ್ ಚಿಕ್ಕಂದಿನಲ್ಲಿ ಯಾವ ಪ್ರಾಬ್ಲಂ ಅನ್ನೂ ಸಾಲ್ವ್ ಮಾಡಲಾಗದವನು , ನಿದಾನ ಕಲಿಕೆಯವನು ಎಂದು ಅವನ ಟೀಚರ  ಟೀಕಿಸಿದ್ದರು. ಗ್ರೆಟ್ ಚಾರ್ಲ್ಸ್ ಡಾರ್ವಿನ್ ನ ತಂದೆ ಅವನನ್ನು 'ಬಹಳ ಆರ್ಡಿನರಿ'  ಎಂದು  ಅಭಿಪ್ರಾಯಪಟ್ಟಿದ್ದರು.  ಹೆಸರಾಂತ ಸಿನಿಮ ನಿರ್ದೇಶಕ 'ಸ್ಟೀವನ್ ಸ್ಟೀಲಬರ್ಗ್ ' ಕಲಿತದ್ದು 'ಲರ್ನಿಂಗ್ ಡಿಸ್ಯಬಲ್ದ್' ಕ್ಲಾಸಿನಲ್ಲಿ.      
     ಜ್ಞಾನದ ಅರಿವಿನೆಡೆಗೆ ಸಾಗಲು, ನಮ್ಮ ಕಲ್ಪನೆಗೆ ಸಾಕಾರ ರೂಪ ಕೊಡಲು ತಕ್ಕುದಾದ ಪರಿಸರ, ಶ್ರಮ ಬೇಕಷ್ಟೇ. ಆಗಲೇ ಸುಂದರ ಬೆಳಗಿನ ಸುಂದರ ನಗುವಿನ ಅನುಭವ, ಅರಿವು ನಮಗಾಗುತ್ತದೆ . 
ಕಮಲಬೆಲಗೂರ್.

Rating
No votes yet

Comments