ಒಂದು ಪುಟ್ಟ ಅನಿಸಿಕೆ

ಒಂದು ಪುಟ್ಟ ಅನಿಸಿಕೆ

ನನ್ನ ಫ್ಲಾಟ್ ನ ಹತ್ತಿರ ಐದಾರು ಸೌದಿ ಹುಡುಗರು ಬೀದಿ ಫುಟ್ ಬಾಲ್ ಆಡುತ್ತಿದ್ದರು. ಆಟದ ಮಧ್ಯೆ ಸುಮಾರು ೧೦-೧೨ ವರ್ಷ ಪ್ರಾಯದ ಹುಡುಗ ಅಲ್ಲೇ ಪಕ್ಕದಲ್ಲಿ ಊರುಗೋಲಿನೊಂದಿಗೆ ನಿಂತಿದ್ದ ವ್ಯಕ್ತಿಯ ಹತ್ತಿರ ಹೋಗಿ ಆತನ ಕಾಲಿಗೆ ಹೇಗೆ ಏಟಾಯಿತು ಎಂದು ಅನುಕಂಪದಿಂದ ವಿಚಾರಿಸಿ, ಆತನಿಗೆ ಹಸ್ತ ಲಾಘವ ನೀಡಿ ಮರಳಿದ ತನ್ನ ಆಟ ಮುಂದುವರೆಸಲು.

ಬದುಕಿನ ನಾಗಾಲೋಟದಲ್ಲಿ ನಮಗೆ ಇಂಥ ದಯೆ ತೋರಿಸಲು ಸಮಯ ಸಿಗೋಲ್ಲ, ಅಥವಾ ಅದರ ಕಡೆ ನಾವು ಗಮನ ಹರಿಸೋಲ್ಲ. ಈ ಪುಟ್ಟ ಹುಡುಗ ಒಂದು ಸುಂದರ ಪಾಠ ನನಗೆ ನೀಡಿದ. ಎಲ್ಲೆಲ್ಲೂ ಹಿಂಸೆ, ಅಸಹನೆ, ಹಗೆ, ಧ್ವೇಷ, ಅವುಗಳ ಮಧ್ಯೆ ಇಂಥ ಅವಿಸ್ಮರಣೀಯ ದೃಶ್ಯ.

ಅರಬ್ ಅಥವಾ ಅರಬೇತರ, ಮಾನವೀಯತೆ ಮಾತ್ರ ನಿರಂತರ, ಅಲ್ವಾ?

Rating
No votes yet