ಒಂದು ಭಯಂಕರ ಜೋಕು!!!

ಒಂದು ಭಯಂಕರ ಜೋಕು!!!

ಚಳಿಗಾಲದ ಒಂದು ದಿನ. ಇಬ್ಬರು ಒಂದು ಬೈಕ್ ಮೇಲೆ ಹೋಗುತ್ತಿರುತ್ತಾರೆ. ಎದುರಿನಿಂದ ಚಳಿಗಾಳಿ ಜೋರಾಗಿ ಬೀಸುತ್ತಿದೆ. ಆಗ ಮುಂದೆ ಕುಳಿತವನು ಎದೆಗೆ ತಣ್ಣನೆಯ ಗಾಳಿ ಬಡಿವುದನ್ನು ತಪ್ಪಿಸಲು ಜರ್ಕಿನ್ನನ್ನು ಅದರ ಹಿಂಭಾಗ ಮುಂದೆ ಬರುವಂತೆಯೂ , ಮುಂಭಾಗ ಹಿಂದೆ ಬರುವಂತೆಯೂ ಹಾಕಿಕೊಳ್ಳುತ್ತಾನೆ . (ಸರಿಯಾಗಿ ಓದ್ಕೊಂಡ್ರಿ ತಾನೆ? ;) )
ಮುಂದೆ ಒಂದು ತಿರುವಿನಲ್ಲಿ ಅಪಘಾತವಾಗುತ್ತದೆ .
.
.
ಸ್ವಲ್ಪ ಹೊತ್ತಿನ ನಂತರ ಅಲ್ಲಿ ಒಬ್ಬ ಪೋಲೀಸ್ ಕಾನ್‍ಸ್ಟೇಬಲ್ ಬರುತ್ತಾನೆ .
.
.
ಇನ್ನೂ ಸ್ವಲ್ಪ ಹೊತ್ತಿನ ನಂತರ ಇನ್‍ಸ್ಪೆಕ್ಟರನೂ ಬರುತ್ತಾನೆ. ಅವನು ಕಾನ್‍ಸ್ಟೇಬಲ್ಲಿಗೆ ’ನೀನು ಬಂದಾಗ ಪರಿಸ್ಥಿತಿ ಹೇಗಿತ್ತು?’ ಎಂದು ಕೇಳುತ್ತಾನೆ.
ಆಗ ಅವನು ಹೇಳುವದು ಹೀಗೆ.
’ಬೈಕು ಒಂದೆಡೆ ಬಿದ್ದಿತ್ತು . ಇವರಿಬ್ಬರೂ ಏನೂ ಚಲನೆಯಿಲ್ಲದೆ ಬಿದ್ದಿದ್ದರು.
ನಾನು ಒಬ್ಬನ ಹತ್ತಿರ ಹೋಗಿ ಅವನು ಉಸಿರಾಡುತ್ತಿದ್ದಾನೋ ಎಂದು ನೋಡಿದೆ. ಅವನು ಸತ್ತು ಹೋಗಿದ್ದ.
ಆಮೇಲೆ ಇನ್ನೊಬ್ಬನ ಹತ್ತಿರ ಹೋಗಿ ನೋಡಿದೆ.
ಅವನು ಉಸಿರಾಡುತ್ತಿದ್ದ. ಎಚ್ಚರ ತಪ್ಪಿದ್ದ ಅಷ್ಟೆ . ಆದರೆ ..
..ತಲೆ ಹಿಂದು ಮುಂದಾಗಿತ್ತು.
..
..
.. ನಾನು ಸರಿಪಡಿಸಲು ಪ್ರಯತ್ನಿಸಿದೆ..
.. ಅವನೂ ಸತ್‍ಹೋಗ್ಬಿಟ್ಟ! :)

(ಬರೆದವನಂತು ಖಂಡಿತ ನಾನಲ್ಲ ;) , ಮಿಂಚೆಯಲ್ಲಿ ಬಂದಿದ್ದು.. ಬೈಯ್ಬೇಡಿ :) )

Rating
No votes yet

Comments