ಒಂದು ಮೊರೆ

ಒಂದು ಮೊರೆ

ಕಾಣುವುದೋ ಎರಡು ಕಣ್ಣುಗಳಲಿ

ಕೇಳುವುದೋ ಎರಡು ಕಿವಿಗಳಲಿ

ಹೌದು, ಇಲ್ಲಿ ಎರಡರಷ್ಟು ಕಂಡು ಕೇಳಿದ್ದೇ

ಯಾವಾಗಲೂ ಒಂದು ನಾಲಿಗೆ ನುಡಿಯೊಳಗಣ ರೀತಿ-ನೀತಿ ಪಾಠ;

ಆದರೆ, ಎತ್ತಲೂ ಹೊರಳುವ ನಾಲಿಗೆಗಳ

ಹಿಂಡಿನಲಿ ಸುಖದ ಕನಸುಗಳೆಲ್ಲ ಜಾರಿ

ಬೀಳುವಾಗ ಯಾವುದೂ ದಿಟವಲ್ಲ

ನೆಲೆ ಇಲ್ಲವೆಂದು ವೈರಾಗ್ಯವೇ....?

ಆಂತರ್ಯಕೆ ಮಣಿಯುವವರೇ

ಆಶ್ವಾಸನೆ ಕೊಟ್ಟು ಕೈಬಿಟ್ಟವರ ಹೆಡೆ ಮುರಿ

ಕಟ್ಟಲು ಹೆಣಗುವವರೇ...

ಹೌದು, ನೀವು ಕಾಣಿರೇ ಹೇಳಿ-

ಹಾಗೇ ನಿಮ್ಮೊಳಗೇ ಹುಡುಕಲಾರಿರಾ ಕೇಳಿ,

ಕಣ್ಣು ಎರಡು ಆದರೂ ನೋಟ ಒಂದೇ

ಕಿವಿ ಎರಡು ಆದರೂ ಸ್ಪಂದನ ಒಂದೇ

ನಾಲಿಗೆ ಹೊರಳುವುದಾದರೂ ಮಾತು ಒಂದೇ

ಈ ಸತ್ಯ-ಪಾತ್ರ ಮರೆತವರಿಗೆ

ಬರೀ ಸ್ವಾರ್ಥ ಸಾಧನೆಯೊಂದೇ

ತಮ್ಮದೇ ರಂಗುಗುಂಗಿನಲಿ, ಹೊನ್ನಹಡಗಿನಲಿ

ಅಂತಸ್ತು-ಆಧಿಕಾರದಾಟಾಟೋಪದಲಿ ತೇಲುವುದೊಂದೇ...

ಬದುಕೋ ಏಳು ಬೀಳಿನ ಕಡಲು;

ಜಗ್ಗದೇ ಕುಗ್ಗದೇ ಈಜುವವರಿಗೇ ತೊರುಗಾಲು

ಶ್ರೀಸಾಮಾನ್ಯನಿಗೆ ದಡ ಹತ್ತಿಸುವವರು ಯಾರು...?

-ಎಚ್.ಶಿವರಾಂ 

*ಮಂಗಳ ವಾರಪತ್ರಿಕೆಯಲ್ಲಿ ಪ್ರಕಟಿತ

Rating
No votes yet

Comments