ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
ಒಂದು ವರ್ಷ... ಕಾಲಪುರುಷನಿಗೆ ಲೆಕ್ಕವೆ ಇಲ್ಲದ ಚಿಕ್ಕ ಕಾಲಪ್ರಮಾಣ ಆದರೆ ಮನುಷ್ಯರಾದ ನಮಗೆ ಅಮೂಲ್ಯ ಹಾಗು ಸಾಕಷ್ಟು ದೀರ್ಘವೆ. ಇಂತಹ ಒಂದು ವರ್ಷವನ್ನು ಸಂಪದಿಗರ ಜೊತೆ ಕಳೆದ ಸಂಭ್ರಮ ನನ್ನದು. ಸರಿಯಾಗಿ ಇಂದಿಗೆ ಒಂದು ವರ್ಷ ಹಿಂದೆ ,13 - ಸೆಪ್ಟೆಂಬರ್- 2010 ರಂದು ಸಂಪದದ ಅಂಗಳದಲ್ಲಿ ಅದಿಕೃತವಾಗಿ ಕಾಲಿಟ್ಟ ನಾನು , ಇಂದು ಓಹೊ ... ಆಗಲೆ ಒಂದು ವರ್ಷ ಕಳೆಯಿತೇನು ಅನ್ನುವಂತಾಗಿದೆ.
ಕಳೆದ ಒಂದು ವರ್ಷದಲ್ಲಿ ನಾನು ಸಂಪದದಿಂದ ಪಡೆದುದ್ದು ಅಪಾರ. ನನ್ನ ತಮ್ಮನ ಮಗಳಿಗಾಗಿ ದೆವ್ವದ ಕಥೆಯನ್ನು ಹುಡುಕುತ್ತ, ಗೂಗಲ್ ಎಂಬ ರೈಲು ಹತ್ತಿದ ನಾನು, ಎಲ್ಲೊ ತಪ್ಪಿ ಸಂಪದ ನಿಲ್ದಾಣದಲ್ಲಿ ಇಳಿದಾಗ, ಒಮ್ಮೆಗೆ ಇದು ತಪ್ಪು ನಿಲ್ದಾಣ ಅನ್ನಿಸಲೆ ಇಲ್ಲ. ಸುತ್ತಲಿರುವುದನ್ನು ಅಚ್ಚರಿಯಿಂದ ನೋಡುತ್ತ, ಇದು ನಾನು ನಿಜವಾಗಿ ಇಳಿಯಲೆ ಬೇಕಿದ್ದ ಸ್ಥಳ ಅನ್ನುವಂತೆ ಇಲ್ಲಿಯೆ ನೆಲೆಸಿದೆ. ಹಲವರು ಗೆಳೆಯರಾದರು, ಆತ್ಮೀಯರಾದರು, ಎದುರಿಗೆ ನೋಡದಿದ್ದರು ಅಕ್ಷರ-ಪರಿಚಯದ ಕೆಲವರು ನನ್ನವರಾದರು , ಸಂಪದ ಎನ್ನುವುದು ಆತ್ಮೀಯ ಗೆಳೆಯನಂತಾಯಿತು.
ನನ್ನ ನಿಜ ಜೀವನದ ಮೇಲು ಸಂಪದದ ಪರಿಣಾಮ ಅದ್ಭುತ. ಹಿಂದೆಲ್ಲ ದಿನಗಳು ನಿಸ್ಸಾರ ಅನ್ನಿವುವಂತಿದ್ದು, ಸಂಪದದ ಗೆಳೆತನದ ಹಿನ್ನಲೆಯಲ್ಲಿ ಪ್ರತಿ ದಿನಗಳು ಒಂದು ಹೊಸತೆ, ಸುತ್ತಲು ದಿನ ನಿತ್ಯವು ನೋಡುತ್ತಿದ್ದ ನಮ್ಮ ನೋಟದಲ್ಲಿ ಏನೊ ವೆತ್ಯಾಸವಾದಂತಿತ್ತು, ಮನೆಯ ನಂಜಬಟ್ಟಲಿನ ಗಿಡದಲ್ಲಿ ಯಾವುದೊ ಚಿಕ್ಕ ಹಕ್ಕಿಯೊಂದು ಬಂದು ಕುಳಿತರೆ, ಕಲ್ಲ ಸಂದಿನಲ್ಲಿ ಯಾವು ಹಾವುರಾಣಿ ಕಂಡರೆ, ಬೆಕ್ಕು ಏನನ್ನೊ ಹೊಂಚು ಹಾಕುತ್ತಿದ್ದರೆ, ನಮಗೆ ಅದೊಂದು ಹೊಸ ವಿಸ್ಮಯ ಹೇಗಾದರು ಅದನ್ನು ಚಿತ್ರದಲ್ಲಿ ಸೆರೆಹಿಡಿದು ಸಂಪದಿಗರ ಜೊತೆ ಹಂಚಿಕೊಳ್ಳಬೇಕೆಂಬ ಆತುರ.
ನಡುರಸ್ತೆಯಲ್ಲಿ ಹೋಗುವಾಗ ಮಳೆ ಬಂದರೆ, ಅಥವ ಇನ್ನೆಲ್ಲೊ ಬಸ್ ಕಂಡಕ್ಟರ್ ಇನ್ನಾರದೊ ಜೊತೆ ವಾದಕ್ಕಿಳಿದರೆ ಹೀಗೆ ಪ್ರತಿ ಘಟನೆಯನ್ನು ಬರಹ ರೂಪದಿಂದ ಸಂಪದ ಗೆಳೆಯರಿಗೆ ತಲುಪಿಸುವ ತುಡಿತ. ಇದನ್ನೆಲ್ಲ ನೋಡುವಾಗ ಸಂಪದ ಹಾಗು ನನ್ನ ಒಡನಾಟ ಕೇವಲ ಅಕ್ಷರಗಳಿಗಷ್ಟೆ ಸೀಮಿತವ ಅದಕ್ಕೆ ಮೀರಿದ್ದ ಅಂತ ಅನುಮಾನದಿಂದ ಚಿಂತಿಸುವಂತೆ ಮಾಡುತ್ತದೆ.
ಕಳೆದ ವರ್ಷ ಇದೆ ದಿನ "ರಾಂಗ್ ನಂಬರ್" ಎಂಬ ಸಣ್ಣ ಬರಹದಿಂದ ಸಂಪದಕ್ಕೆ ಅಡಿಯಿಟ್ಟ ನನಗೆ , ಮೊದಲ ಬರಹಕ್ಕೆ ಮೊದಲ ಪ್ರತಿಕ್ರಿಯೆ ದೊರೆತಿದ್ದು ಶ್ರೀ ಆತ್ರಾಡಿ ಸುರೇಶರಿಂದ ಹೊಸಬರಿಗೆ ಉತ್ತೇಜನನೀಡುವಲ್ಲಿ ಅವರು ಎಂದು ಮುಂದೆ, ಹಾಗೆಯೆ ಸುನಿಲ ,ಗೋಪಿನಾಥರಾಯರು, ಹಾಗು ಮಂಜುರವರಿಂದ ಆ ಬರಹಕ್ಕೆ ಪ್ರತಿಕ್ರಿಯೆ ದೊರೆಯಿತು. ನಾಲ್ವರಿಗು ನಾನು ಉತ್ತರಿಸಲಿಲ್ಲ ಏಕೆಂದರೆ ಪ್ರತಿಕ್ರಿಯೆಗಳಿಗೆ ಉತ್ತರಿಸಬೇಕೆಂದು ನನಗೆ ತಿಳಿದಿರಲಿಲ್ಲ !!! -:)).
ಒಂದು ವರ್ಷದಲ್ಲಿ ಸಂಪದಲ್ಲಿ ಸಾಕಷ್ಟು ಕಲಿತೆ ಅರಿತೆ. ನನ್ನ ಪ್ರತಿಬರಹಕ್ಕು ಪ್ರತಿಕ್ರಿಯೆ ವ್ಯಕ್ತಪಡಿಸಿ, ವಿಮರ್ಷಿಸಿ, ಕೆಲವೊಮ್ಮೆ ಕಾಗುಣಿತವನ್ನು ತಿದ್ದುವ ಸಹನೆ ಸಹ ತೋರಿ, ಬರಹ ವೆಂದರೆ ಹೀಗೆ ಬರೆಯಬಹುದು ಎಂಬ ಕಲ್ಪನೆ ನನ್ನಲ್ಲಿ ಮೂಡಿಸಿದ, ನನ್ನ ಕಥೆಗಳನ್ನು ಬರಹಗಳನ್ನು ಕವಿತೆಗಳನ್ನು ಎಷ್ಟೆ ಬಾಲಿಶವಾಗಿದ್ದರು ಓದಿದ ಎಲ್ಲ ಸಂಪದಿಗರಿಗು ನನ್ನ ಕೃತಜ್ಞತೆಗಳನ್ನು , ಹಾಗು ನಮನಗಳನ್ನು ಈ ಬರಹದ ಮೂಲಕ ವ್ಯಕ್ತಪಡಿಸಲು ನನಗೆ ಸಂತೋಷವೆನಿಸುತ್ತಿದೆ.
ಕನ್ನಡವೆಂದರೆ ಸೇವೆಗೆ ಎಲ್ಲರು ಸಿದ್ದರಿರಬೇಕೆಂದು ಬರಿ ಬಾಯಿಮಾತಿನಲ್ಲಿ ಅರ್ಭಟಿಸುವ ಸಾವಿರ ಸಾವಿರ ಜನರು ಇರುವಾಗ, ಕನ್ನಡಕ್ಕೊಂದು "ಸಂಪದ" ದಂತಹ ಬಹುಮಖದ "ಪೋರ್ಟಲ್" ಅನ್ನು ಒದಗಿಸಿ , ಕನ್ನಡಾಂಬೆಯ ಸೇವೆಯನ್ನು ಯಾವುದೆ ಡಂಗೂರವಿಲ್ಲದೆ ನಿಸ್ವಾರ್ಥದಿಂದ ಮಾಡುತ್ತಿರುವ ಹರಿಪ್ರಸಾದ ನಾಡಿಗರು ಹಾಗು ಎಲ್ಲ ಸಂಪದ ಬಳಗಕ್ಕು ಸಹ ನನ್ನ ನಮನ.
...
ಈ ಒಂದು ವರ್ಷಕಾಲದಲ್ಲಿ ಬರೆದ ೧೩೦ ಲೇಖನಗಳಲ್ಲಿ ನನಗೆ ಖುಷಿಕೊಟ್ಟ ನನ್ನ ಬರಹಗಳು
ನನ್ನ ಬಾಲ್ಯದ ನೆನಪುಗಳು ಸರಣಿಯ <ಅವಳುಯಾರು> <ಹಾವುತುಳಿದೆನಾ> <ಬೆಳಕು ಕತ್ತಲೆಯ ಆಟ> <ಭಯವೆಂಬ ಭ್ರಮೆ> <ತಾಯಿ ಹೃದಯ>
ಹೀಗೊಂದು ಕನಸು ಕಾಲ ಕೂಡಿಬರಬೇಕು -೧ ಹೀಗೊಂದು ಕನಸು ಕಾಲ ಕೂಡಿಬರಬೇಕು - ೨
ವಿಕ್ಷಿಪ್ತ ಪ್ರಮಥಿನಿ ಲೌಕಿಕ ಅಲೌಕಿಕ ತಿಂಗಳಿಗೊಂದು ದೆವ್ವದ ಕಥೆ ಬೆಳ್ಳೀಲೋಟ ಕಂಸ
ಗೂಳಿಗೊಂದು ಓಡಿತಿದೆ ಅನಂತ ಎಂಬ... ತುಂಗಾತೀರದಲ್ಲಿ...
ನಮಸ್ಕಾರದೊಂದಿಗೆ
ನಿಮ್ಮೆಲ್ಲರ ಆತ್ಮೀಯ
ಪಾರ್ಥಸಾರಥಿ
=============================================================================
ನನ್ನ ಮೊದಲ ಬರಹವನ್ನು ಪುನಃ ಇಲ್ಲಿ ಅಂಟಿಸುತ್ತಿದ್ದೇನೆ , ಕೇವಲ ನನ್ನ ಆನಂದಕ್ಕೆ :
ರಾಂಗ್ ನಂಬರ್
ಟ್ರಿಂಗ್....ಟ್ರಿಂಗ್...
ದೂರವಾಣಿ ಒಂದೇ ಸಮ ರಿಂಗಣಿಸಿತು, ಬೆಳಗಿನ ಉಪಾಹಾರ ಸೇವಿಸುತ್ತಿದ್ದ ಕೆ.ಎಸ್.ರಾವ್ ಹುಬ್ಬುಗಂಟಿಕ್ಕಿ ಎದ್ದು ಫೋನ್ ತೆಗೆದು "ಹೆಲೋ..." ಎಂದ
ಆ ತುದಿಯಿಂದ ಎಂತದೊ ಬಿಟ್ಟು ಬಿಟ್ಟು ಬರುತ್ತಿರುವ ರೀತಿಯಲ್ಲಿ , ಸಹಜವಲ್ಲದ ದ್ವನಿಯಲ್ಲಿ " ಹೆಲೋ ಇದು ಅಂಡ್ರೋಮಿಡ ಗಲಾಕ್ಸಿಯ , ಆಲ್ಫ-ಎ ನಕ್ಷತ್ರಲೋಕದ ೫ನೆ ಗ್ರಹ ಭೂಮಿಕದಿಂದ, ನಾನು ಪೆನಿಲಿಯ ಆಕಾಶದರ್ಷಕ ಕೇಂದ್ರದಿಂದ ಮಾತನಾದೋದು, ನನ್ನ ಪರಿಚಯ ರೆತಿಯ-೫೪೩೬ , ನಿಮ್ಮ ಪರಿಚಯ ಹೇಳಿ ಪ್ಲೀಸ್..."
ಯಾವುದೋ ಯಂತ್ರವೊಂದು ಮಾತನಾದಿದಂತೆ ಬರುತ್ತಿರುವ ಶಬ್ದ.ಆಶ್ಚರ್ಯಪಟ್ಟ ರಾವ್, ದೂರದ ಗ್ರಹದಿಂದ ಬಂದ ಕರೆಗೆ ಈ ಭೂಮಿಯಿಂದ ಮೊದಲು ಮಾತಾನಾಡುವ ಅವಕಾಶ ನನಗೆ. ತಕ್ಷಣ ಅವರ ಅನುಮಾನದ ಸಹಜ ಸ್ವಭಾವ ತಲೆ ಎತ್ತಿತು. ಖಂಡಿತ ಇದರಲ್ಲೇನೊ ಮೋಸವಿದೆ. ನೆನೆಪಿಸಿಕೊಂಡರು, ಸಂದೇಹವಿಲ್ಲ ಇದು ಅವನದೆ ಕೆಲಸ . ಅವರ ಬಾವಮೈದುನ ರವಿ ನೆನಪಿಗೆ ಬಂದ , ಈ ರೀತಿ ಏನೊ ಮಾಡೋದು ನಂತರ ತನ್ನ ಅಕ್ಕನ ಬಳಿ ಕುಳಿತು ಅಟ್ಟಹಾಸದಿಂದ ನಗುತ ತಾನು ಹೇಗೆ ಬಾವನನ್ನು ಕಿಚಾಯಿಸಿದೆ ಎಂದು ವಿವರಿಸುವುದು, ಎಷ್ಟೋ ಬಾರಿ ನಡೆದಿದೆ. ಈ ಬಾರಿ ಮೊದಲೆ ಎಚ್ಚರಗೊಂಡರು ರಾವ್, ಮಾಡಲು ಏನು ಕೆಲಸವಿಲ್ಲದಿದ್ದರು ಈ ರೀತಿಯ ಕುಚೇಷ್ಟೆಯಲ್ಲಿ ಪ್ರವೀಣ ಎನಿಸಿ ಕೋಪ ಬಂತು,
" ನೋಡು ರವಿ , ನನಗೆ ನಿನ್ನ ಈ ರೀತಿಯ ವರ್ತನೆ ಹಿಡಿಸುವುದಿಲ್ಲ, ಕಳೆದವಾರ ನೀನು ತೆಗೆದುಕೊಂದಿರುವ ೨೦,೦೦೦ ರೂ ಸಾಲ ಮೊದಲು ತಂದು ಕೊಡು, ನಿನ್ನ ಈ ಹುಡುಗಾಟ ಬಿಟ್ಟು ಜವಾಬ್ದಾರಿ ಕಲಿತುಕೋ" ಎಂದರು.
ಆ ಕಡೆಯಿಂದ ಪುನ: ಅದೆ ದ್ವನಿ " ಹಲೋ ಇದು ಮಿಲ್ಕೀವೇಯ ಭೂಮಿಯ, ದಯವಿಟ್ಟು ನಿಮ್ಮ ಪರಿಚಯ ಹೇಳಿ, ದಯವಿಟ್ಟು ಸಹಕರಿಸಿ" ಅದೆ ಯಂತ್ರದ್ವನಿ,
ಕೋಪಗೊಡರು ರಾವ್ " ನೋಡು ರವಿ , ಹೇಳಿದರೆ ಕೇಳಬೇಕು , ನಿನ್ನ ಹುಡುಗಾಟ ನನ್ನ ಬಳಿ ಬೇಡ , ನಿನ್ನ ಬಳಿ ಆಡುತ್ತ ಕುಳಿತಿರಲು ನನ್ನ ಬಳಿ ಸಮಯವಿಲ್ಲ ಆಫೀಸ್ ಗೆ ತಡವಾಯಿತು" ಎನ್ನುತ್ತ ಪೋನ್ ಕುಕ್ಕಿ, "ಈಡಿಯೆಟ್ "ಎಂದು ಮನಸಿನಲ್ಲೆ ಶಪಿಸುತ್ತ ಪುನ: ಟೇಬಲ್ ಕಡೆ ನಡೆದರು.
***********.......
ಅತ್ತ ದೂರ ದೂರ ದ ಅಂಡ್ರೋಮಿಡ ಗಲಕ್ಸಿಯ ಅಲ್ಫ-ಎ ನಕ್ಷತ್ರ ಲೋಕದ ೫ ನೆ ಗ್ರಹದ ಜೀವಿ, ರೆತಿಯ-೫೪೩೬ ತಲೆ ಮೇಲೆ ಕೈ ಹೊತ್ತು ಕುಳಿತ, ತನ್ನ ಹಲವು ಕಾಲದ ಪ್ರಯೋಗ ದೂರ ಗ್ರಹದ ಸಂಪರ್ಕ ಪ್ರಯತ್ನ ಈ ರೀತಿ ವಿಪಲವಾಗಿದಕ್ಕೆ ಅವನಿಗೆ ಅತೀವ ಸಂತಾಪವಾಗಿತ್ತು. ಮತ್ತೆ ಇದನ್ನೆ ಸಾದಿಸಲು ತಾನು ಪುನಃ ಪ್ರಯತ್ನಪಡಬೇಕು ಎಂಬ ವ್ಯಾಕುಲ ಅವನಿಗೆ .
-------------------------------------------------------------------------------------
ಪ್ರತಿಕ್ರಿಯೆಗಳು:
ಆಸು ಹೆಗ್ಡೆ:
ಸತ್ಯಲೋಕವಲ್ಲವಿದು, ನಂಬುವುದಿಲ್ಲ ಸುಲಭದಲ್ಲಿ, ಯಾವ ಮಾತನ್ನೂ ಇಲ್ಲಿ ಸತ್ಯವೆಂದು!
ನನ್ನಿಸುನಿಲ :
ಆಮೇಲೇನಾಯ್ತು. ರಾವ್ ಅವರ ತಲೆಯೊಳಗೆ ಹುಳ ಹೊಕ್ಕಂತಾಗಲಿಲ್ಲವೇ ?
ಆಸು ಹೆಗ್ಡೆ : ನನಗಂತೂ ಗೊತ್ತಿಲ್ಲ. ಪಾರ್ಥಸಾರಥಿಯವರನ್ನೇ ಕೇಳಿನೋಡ್ಬೇಕು.
ಗೋಪಿನಾಥರಾಯರು: ಶ್ರೀ ಶ್ರೀ ಡಾ ಸ್ವರೂಪಾಧೀಶ ಜ್ಯೋತಿಷ್ಯ ಚಕ್ರವರ್ತಿಯನ್ನು ಕೇಳಿದರೆ...?
ಹೊಳೆನರಸಿಪುರ ಮಂಜುನಾಥರವರು:
ಅಯ್ಯೋ ಪಾಪ! ಆ ಅನ್ಯಗ್ರಹ ಜೀವಿಗೆ ಈ ರೀತಿ ಆಗಬಾರದಿತ್ತು ಕಣ್ರೀ!
Comments
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
In reply to ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ by bhalle
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
In reply to ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ by prasannasp
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
In reply to ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ by partha1059
ಉ: quote ಮಾಡುವ ವಿಧಾನ
In reply to ಉ: quote ಮಾಡುವ ವಿಧಾನ by prasannasp
ಉ: quote ಮಾಡುವ ವಿಧಾನ
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
In reply to ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ by Jayanth Ramachar
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
In reply to ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ by ksraghavendranavada
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
In reply to ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ by asuhegde
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
In reply to ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ by kamath_kumble
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
In reply to ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ by Chikku123
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
In reply to ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ by ambika
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
In reply to ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ by sathishnasa
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
In reply to ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ by kavinagaraj
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
In reply to ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ by kavinagaraj
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
In reply to ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ by venkatb83
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
In reply to ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ by venkatb83
ಅಸು ಹೆಗ್ಡೆ ಅವ್ರು ಹೇಳಿದ್ದಾರೆ ಕೆಲ ಜನರನ್ನ ಓಡಿಸಿದ ಕು-ಖ್ಯಾತಿಯೂ!...
In reply to ಅಸು ಹೆಗ್ಡೆ ಅವ್ರು ಹೇಳಿದ್ದಾರೆ ಕೆಲ ಜನರನ್ನ ಓಡಿಸಿದ ಕು-ಖ್ಯಾತಿಯೂ!... by sm.sathyacharana
ಉ: ಅಸು ಹೆಗ್ಡೆ ಅವ್ರು ಹೇಳಿದ್ದಾರೆ ಕೆಲ ಜನರನ್ನ ಓಡಿಸಿದ ಕು-ಖ್ಯಾತಿಯೂ!...
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
In reply to ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ by sm.sathyacharana
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
In reply to ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ by makara
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
In reply to ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ by partha1059
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
In reply to ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ by ಗಣೇಶ
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
In reply to ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ by manju787
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
In reply to ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ by partha1059
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
In reply to ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ by partha1059
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
In reply to ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ by sumangala badami
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ
In reply to ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ by Prabhu Murthy
ಉ: ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ