ಒಂದು ವಿಶಿಷ್ಟ ಮತ್ತು ವಿಚಿತ್ರ ಅನುಭವ

ಒಂದು ವಿಶಿಷ್ಟ ಮತ್ತು ವಿಚಿತ್ರ ಅನುಭವ

ಕೆಲ ದಿನಗಳ ಹಿಂದೆ ನನಗೆ ಆದ ವಿಶಿಷ್ಟ ಮತ್ತು ವಿಚಿತ್ರ ಅನುಭವ ಇದು.

ನಿಮಗೆ ಈ ಅನುಭವ ಸಿಗುವುದು ಸಾಧ್ಯವಿಲ್ಲ ಆದ್ದರಿಂದ ಇದನ್ನು ನಿಧಾನವಾಗಿ ಓದಿ, ನಾನು ಸಾಧ್ಯವಿದ್ದಷ್ಟು ಆ ಅನುಭವವನ್ನು ಕಟ್ಟಿ ಕೊಡಲು ಪ್ರಯತ್ನ ಮಾಡುತ್ತೇನಾದರೂ ನೀವೂ ಇದನ್ನು ಓದುತ್ತಿರುವ ಹಾಗೆಯೇ ಕಲ್ಪಿಸಿಕೊಳ್ಳುತ್ತಾ ಹೋಗಿ.

....

ರೆಡೀನಾ ?
….
..

ಮುಂಬೈನಲ್ಲಿ ನಾನು ಕೆಲಸ ಮಾಡುವ ಜಾಗದ ಸುತ್ತಮುತ್ತ ಅನೇಕ ಆರ್ಟ್ ಗ್ಯಾಲರಿಗಳಿವೆ. ಏನೇನೋ ಪ್ರದರ್ಶನಗಳು- ಚಿತ್ರಕಲಾ/ ಶಿಲ್ಪಕಲಾ ಪ್ರದರ್ಶನಗಳು ಅಲ್ಲಿ ಯಾವಾಗಲೂ ನಡೆದೇ ಇರುತ್ತವೆ. ಕೆಲವು ಗ್ಯಾಲರಿಗಳು ಬಹಳ ಜನರಿಗೆ ಗೊತ್ತು. ಸಹಜವಾಗಿಯೇ ಅಲ್ಲಿ ಬರುವ ಜನರು ಬಹಳ. ಇನ್ನು ಕೆಲವೆಡೆ ಯಾರೂ ಅಂದರೆ ಯಾರೂ ಇರುವುದಿಲ್ಲ!!.

ಇಂತಹ ಒಂದು ಕಡೆ ಹಿಂದೊಮ್ಮೆ ಹೋಗಿದ್ದೆ. ಗಾಜಿನ ಬಾಗಿಲನ್ನು ದೂಡಿ ಒಳಹೊಕ್ಕರೆ ಅಲ್ಲಿ ಸ್ವಲ್ಪ ಕತ್ತಲು ಇತ್ತು. ಆದರೆ ಒಂದಿಬ್ಬರು ಮಾತನಾಡುತ್ತ ಕೂತಿದ್ದರು."ಇಲ್ಲಿ ಎಗ್ಜಿಬಿಶನ್… " ಎಂದು ಕೇಳುತ್ತಿದ್ದಂತೆ "ಯಾಕಿಲ್ಲ ? " ಎನ್ನುತ್ತಾ ಎಲ್ಲಾ ಲೈಟುಗಳನ್ನು ಆನ್ ಮಾಡಿದ್ದರು ಅಂದು !.. ನನ್ನೊಬ್ಬನಿಗಾಗಿ !!

ಅದು ಹಳೆಯ ಅನುಭವ. ಬನ್ನಿ , ಈಗಿನದನ್ನು ಅನುಭವಿಸೋಣ.

ಇದು ಮ್ಯಾಕ್ಸ್ ಮುಲ್ಲರ್ ಭವನ. ( ಮ್ಯಾಕ್ಸ್ ಮುಲ್ಲರ್ ನಿಮಗೆ ಗೊತ್ತು ಅಲ್ಲವೇ). ಏರ್ ಕಂಡಿಶನ್ ಇರುವ ಗ್ಯಾಲರಿ ಇದು. ಗಾಜಿನ ಬಾಗಿಲು ಹಾಕಿದೆ. ಆದರೆ ಬಾಗಿಲಿಗೆ " ಪ್ರದರ್ಶನ ನಡೆದಿದೆ" ಎಂಬ ಬೋರ್ಡು. ಸರಿ , ಒಳಗೆ ಹೋದೆ. ಇಲ್ಲೂ ಕತ್ತಲು. ಕತ್ತಲೆಯಲ್ಲೇ ಮೂಲೆಯಲ್ಲಿ ಒಬ್ಬ ಯುವತಿ ಕಂಡಳು. ಜರ್ಮನಿಯವಳು ಎನಿಸಿತು. ಕತ್ತಲು ಹಿಂದಿನ ಅನುಭವ ನೆನಪಿಗೆ ತಂದಿತು. . ಇಲ್ಲೂ ಅದೇ ಕತೆ ಅಂದುಕೊಂಡು , ಹಿಂದಿನಂತೆಯೇ "ಇಲ್ಲಿ ಎಗ್ಜಿಬಿಶನ್…..?" ಎಂದು ಕೇಳಿದೆ. ಆದರೆ ಈಕೆ ಲೈಟು ಹಾಕುವ ಬದಲು , "ಅಲ್ಲಿ ಹೋಗಿ - ಆ ಪರದೆಯ ಹಿಂದೆ" ಎಂದು ಇನ್ನೊಂದು ಮೂಲೆಯನ್ನು ತೋರಿಸಿದಳು . ಅಲ್ಲೋ ಇನ್ನೂ ಕತ್ತಲೆ ! ಸಾಲದ್ದಕ್ಕೆ ಕರಿಯ ಬಣ್ಣದ ತೆರೆ !!. ವಿಚಿತ್ರ ಅನ್ನಿಸಿದರೂ , ಮುಂದಿಟ್ಟ ಹೆಜ್ಜೆ ಹಿಂದಿಡಲಾಗದು ಎನ್ನುತ್ತಾ ಅತ್ತ ನಡೆದು , ತಡವರಿಸಿ ,
ತೆರೆಯನ್ನು ಸರಿಸಿ ಮುಂದೆ ಕಾಲಿಟ್ಟರೆ ……

ಅಲ್ಲೂ ಕತ್ತಲೆ !! ಸ್ವಲ್ಪ ಬೆಳಕು . ಅಲ್ಲಿ ಗೋಡೆಯ ಮೇಲೆ ದೊಡ್ಡ ತೆರೆಯ ಮೇಲೆ .. ಏನೋ ವಿಡಿಯೋ !!!! ಅದರಿಂದ ಅಲ್ಪಸ್ವಲ್ಪ ಬೆಳಕು. .

ನಿಧಾನಕ್ಕೆ ಕಣ್ಣು ಕತ್ತಲಿಗೆ ಹೊಂದಿಕೊಂಡ ಮೇಲೆ ...
ಗೋಡೆಯ ಮೇಲೆ ಪ್ರದರ್ಶಿತಗೊಳ್ಳುತ್ತಿರುವ ದೊಡ್ಡ ಗಾತ್ರದ ವೀಡಿಯೋ…. ಆಗಲೇ ತಕ್ಕ ಮಟ್ಟಿಗೆ ದೊಡ್ಡದಾಗಿರುವ ( 15 ×20 ಅಡಿ ) ಕೋಣೆಯಲ್ಲಿರುವುದೂ, ಅಲ್ಲಿ ಸಮಾನ ಅಂತರಗಳಲ್ಲಿ ಎಂಟು ಸ್ಟೂಲುಗಳಿರುವುದೂ ಗಮನಕ್ಕೆ ಬಂತು. ಅಷ್ಟೇ ಅಲ್ಲ,
ಅಲ್ಲಿ ನನ್ನ ಹೊರತು ಯಾರೂ ಇಲ್ಲ!!. ... ಆ screen ಹೊರತಾಗಿ ಬೇರೆ ಬೆಳಕೇ ಇಲ್ಲ. .
ನಡೆದಿರುವ ವಿಡಿಯೋ ಯಾವುದೋ ಸಾಮಾಜಿಕ ವಿಷಯದ ಕುರಿತಾಗಿ ಇರುವುದೂ ಗಮನಕ್ಕೆ ಬಂತು. ಯಾವಳೋ ಹೆಣ್ಣುಮಗಳು " ಬರ್ರೋ , ನನ್ನನ್ನು ರೇಪ್ ಮಾಡ್ರೋ , ಎಂದು ಆಕ್ರೋಶಿಸುತ್ತಿದ್ದಳು. ಈಶಾನ್ಯ ರಾಜ್ಯಗಳ ಸಂಗತಿ ಅನ್ನಿಸಿತು. ಡಾಕ್ಯುಮೆಂಟರಿ ತೋರಿಸುವುದಾದರೆ ಸ್ಟೂಲ್ ಏಕೋ ? ಕುರ್ಚಿ ಇಡಬಹುದಿತ್ತಲ್ಲ ? ಬೆನ್ನಿಗೆ ಆಧಾರ ಬೇಡವೇ ?
..
..
.. A/C HALL ನಲ್ಲಿ. . Stool ಏಕೆ ಇಟ್ಟಿದ್ದಾರೆ ? ಕುರ್ಚಿ ಏಕೆ ಇಲ್ಲ ? .
...
….

ಆ ಸಂಶಯ ಬೇಗನೇ ಪರಿಹಾರ ಆಯಿತು. . ಅಲ್ಲಿ ಅದೊಂದೇ screen ಇಲ್ಲ !! ಎದುರು ಗೋಡೆ ಯ ಮೇಲೆ ಅದೇ ಅಳತೆಯ ಮೂರು , ಎಡಕ್ಕೆ ಎರಡು . ಬಲಕ್ಕೆ ಎರಡು , ಎಲ್ಲವೂ ಈಗ on ಆಗಿವೆ !!!..
ಎಲ್ಲದರಲ್ಲೂ ಅದೇ ವಿಡಿಯೋ ಬರುತ್ತಿಲ್ಲ .. ಅದೇ ಸ್ವಲ್ಪ ಹಿಂದುಮುಂದು ಆಗಿ ಬರುತ್ತಿದೆಯೇ ? ಅದೂ ಇಲ್ಲ !! ಪೂರ್ತಿ ಬೇರೆ ಬೇರೆ ವಿಡಿಯೊಗಳೇ.. ಸದ್ಯ ಏನೂ sound ಇಲ್ಲ. .ಇದೆಲ್ಲ ಆಗುವಾಗ .. ಕತ್ತಲು ಕೋಣೆ.. ನಾನೊಬ್ಬನೇ. ..ತಲೆ ಮೇಲೆ 8 projector ಗಳು. ಸುತ್ತಲೂ 8 screen ಗಳು. .. Stool ಯಾಕೆ ಅಂತ ಹೊಳೆಯಿತು !! ಯಾವ ಕಡೆಗೆ ಬೇಕಾದರೂ ತಿರುಗಿ ಏನು ಬೇಕಾದರೂ ನೋಡಲು !!!
.....
....
..
...
ಎಲ್ಲಾ ವಿಡಿಯೊಗಳು ಏಕ ಕಾಲದಲ್ಲಿ !!.. sub titleಗಳು ಬೇರೆ...ಯಾವುದು ನೋಡುವುದು ? ಯಾವುದು ಓದುವುದು ? ತಲೆ ಕೆಟ್ಟು ಹೋಗುವ ಆಟ!
....ತಲೆ ಚಿಂದಿ ಚಿತ್ರಾನ್ನ ಅಂತಾರಲ್ಲ , ಹಾಗೆ ಆಯಿತು. .

Theme ಗೊತ್ತಾಯಿತು. ಹೆಂಗಸರ ಮೇಲಿನ ದೌರ್ಜನ್ಯ. ಅತ್ಯಾಚಾರಗಳು. ದೇಶದ ವಿಭಜನೆಯ ಕಾಲದ್ದು , ಬಾಂಗ್ಲಾದೇಶದಲ್ಲಿ ಪಾಕಿಸ್ತಾನ ನಡೆಸಿದ್ದು ,..north east ರಾಜ್ಯಗಳಲ್ಲಿ ಭಾರತೀಯ ಸೇನೆ ನಡೆಸಿದ್ದು , ಗೋಧ್ರಾದಲ್ಲಿ , ಖೈರ್ಲಾಂಜಿಯಲ್ಲಿ ನಡೆದದ್ದು , ಇತ್ಯಾದಿ. ..ಅಷ್ಟೇ ಏಕೆ? ನಮ್ಮ ಕರ್ನಾಟಕ ರಾಜ್ಯ ದ ಬಳ್ಳಾರಿಯ ಒಂದು ಘಟನೆ ಕೂಡ. ( ಈ ಬಗ್ಗೆ ನಾನು ಓದಿಲ್ಲ) ,

...ನಡುವೆ ಯಾವೋಳೋ ಬಂದು ಕೂತು , ತಲೆ ಎತ್ತದೆ , ಮೊಬೈಲ್ ಚೆಕ್ ಮಾಡಿ , ಎರಡು ನಿಮಿಷಕ್ಕೇ ಎದ್ದೂ ಹೋದಳು !!.

ನಾನು 10 ನಿಮಿಷ ಇದ್ದು ಹೊರ ಬಂದೆ...

ಈ ಪ್ರದರ್ಶನ ಇಡೀ ದಿನ ಅನೇಕ ದಿನಗಳ ಕಾಲ ಇರುವುದು ಅಲ್ಲಿನ ಸೂಚನಾಫಲಕದಿಂದ ಗೊತ್ತಾಯಿತು.

ಈಗ ಹೇಳಿ, ಇಂಥ ಅನುಭವ ನಿಮಗೆ ಆಗಿದೆಯೇ ? ಇಂತಹ ಪ್ರದರ್ಶನ ನೋಡಿದ್ದಿರಾ ?

Rating
No votes yet

Comments