ಒಂದು ಸಣ್ಣ ಕೋಟ್

ಒಂದು ಸಣ್ಣ ಕೋಟ್

ಈ ದಿನ ಒಳ್ಳೆಯ ನುಡಿಯೊಂದನ್ನು ಕೇಳಿದೆ.

೧. ಅದೇ ಬೀಸಿನೀರಿನಲ್ಲಿ, ಮೊಟ್ಟೆ ಬೇಯಿಸಲು ಇಟ್ಟರೆ, ತೆಳುವಾದ ಮೊಟ್ಟೆ ಗಟ್ಟಿಯಾಗುತ್ತದೆ.
೨. ಗಟ್ಟಿಯಾದ ಆಲೂಗಡ್ಡೆ, ಮೆತ್ತಗಾಗುತ್ತದೆ.

ಅಂದರೆ, ಅದೇ ಪರಿಸರ ಒಂದೇ, ಆದರೆ ಪ್ರತಿಕ್ರಿಯೆಗಳು ಬೇರೆಬೇರೆ. ಹೀಗೆ, ನಮ್ಮ ಸುತ್ತಲಿನ ಪರಿಸರಕ್ಕೆ ಬದಲಾಗದೆ, ನಮ್ಮತನವನ್ನು ಕಂಡುಕೊಳ್ಳಬೇಕು ಎಂಬುದಾಗಿ. ತುಂಬಾ ಅರ್ಥಗರ್ಭಿತವಾಗಿತ್ತು.

ಇದೇ ರೀತಿಯ ಒಂದು ಸನ್ನಿವೇಶವನ್ನು ನಾನು ಪಿ.ಯು.ಸಿ ಓದುವಾಗ ಒಬ್ಬರು ನಮ್ಮ ಕಾಲೇಜಿಗೆ ಬಂದಿದ್ದ ಮೆಜಿಶಿಯನ್ನು ತೋರಿಸಿಕೊಟ್ಟಿದ್ದರು. ನೀರಿನಲ್ಲಿ ಮರಳನ್ನು ಮುಳುಗಿಸಿ ಸ್ವಲ್ಪ ಹೊತ್ತಿನ ನಂತರ ಒದ್ದೆಯಾಗದ ಮರಳನ್ನು ತೆಗೆದು ತೋರಿಸುತ್ತಾ...
ನೋಡಿ, ನೀರಿಗೆ ಮರಳನ್ನು ಹಾಕಿದರೆ, ಒದ್ದೆಯಾಗಿ ಭಾರವಾಗುತ್ತದೆ. ಆದರೆ, ನೀವು ಹೇಗೆ ಬದುಕಬೇಕೆಂದರೆ, ನಿಮ್ಮ ಸುತ್ತಲಿನ ಪರಿಸರ ನಿಮ್ಮನ್ನು ಕೆಡವಲು ಪ್ರಯತ್ನಸಿದರೂ ಜಗ್ಗದೆ ನಿಮ್ಮತನವನ್ನು ಕಾಪಾಡಿಕೊಳ್ಳಬೇಕು ಆಂತ.

ಎಷ್ಟೋ ವರ್ಷಗಳ ನಂತರ ಮತ್ತೆ ನೆನಪಾಯಿತು.

Rating
Average: 4 (1 vote)