ಒಪೇರಾದಲ್ಲಿ ಫಾಂಟ್ ತೊಂದರೆ

ಒಪೇರಾದಲ್ಲಿ ಫಾಂಟ್ ತೊಂದರೆ

ಉಬುಂಟು(11.04)ನಲ್ಲಿ  ಕನ್ನಡ ಯೂನಿಕೋಡ್ ಅಕ್ಷರಗಳು ಎಲ್ಲ ತಂತ್ರಾಂಶಗಳಲ್ಲಿಯೂ ಸರಿಯಾಗಿ ಕಾಣುತ್ತದೆ ಎಂದುಕೊಂಡಿದ್ದೆ. ಆದರೆ ಮೊನ್ನೆ ಹೊಸದಾಗಿ ಮಾಡಿದ ಒಂದು ಕನ್ನಡ ಸೈಟನ್ನು ಬೇರೆ ಬೇರೆ ಬ್ರೌಸರುಗಳಲ್ಲಿ ಟೆಸ್ಟ್ ಮಾಡಬೇಕಿತ್ತು. ಅದಕ್ಕೆಂದೇ ಒಪೇರಾವನ್ನು ಇನ್ಸ್ಟಾಲ್ ಮಾಡಿಕೊಂಡೆ. ಆದರೆ ಅದರಲ್ಲಿ ಕನ್ನಡ ಅಕ್ಷರಗಳು ಸರಿಯಾಗಿ ಕಾಣುತ್ತಿಲ್ಲ. ಒತ್ತಕ್ಷರಗಳೆಲ್ಲಾ ಒತ್ತೊತ್ತಾಗಿ ಸೇರಿಕೊಂಡು ಓದಲಸಾಧ್ಯವಾಗಿ ಕಾಣುತ್ತಿದೆ. ಅದನ್ನು ಪರಿಶೀಲಿಸುವಷ್ಟು ತಾಳ್ಮೆ ಇಲ್ಲ. ಯಾರಾದರೂ ರೆಡಿಮೇಡ್ ಪರಿಹಾರ ಹೊಂದಿದ್ದರೆ ದಯವಿಟ್ಟು ತಿಳಿಸಿ. :-)

ಧನ್ಯವಾದಗಳು..

ಸ್ಕ್ರೀನ್ ಶಾಟ್‌ಗಳು:

Rating
No votes yet

Comments