ಒಮ್ಮೆ ನಕ್ಕು ಬಿಡಿ _ ೧೪
ಚಿಕ್ಕ ವಯಸ್ಸಿನಲ್ಲಿ ಕೇಳಿದ್ದ ಹಾಸ್ಯ
ಪತ್ರಿಕೆಯಲ್ಲಿ ಒಂದು ಪ್ರಕಟಣೆ ಬಂದಿತ್ತು , ಹೊಸದಾಗಿ ಅವಿಷ್ಕಾರ ತಿಗಣೆಗಳನ್ನು ವೈಜ್ಙ್ಜಾನಿಕ ವಿದಾನದಿಂದ ನಾಶ ಪಡಿಸಲು ಯಾಂತ್ರಿಕೃತ ವ್ಯವಸ್ತೆಯೊಮ್ದನ್ನು ಕಂಡು ಹಿಡಿದಿದ್ದೇವೆ ಇದರಿಂದ ಎಷ್ಟು ತಗಣೆಗಳನ್ನು ಬೇಕಾದರು ಕೊಲ್ಲ ಬಹುದು ಒಮ್ಮೆ ಮಾತ್ರ ಖರ್ಚು ನಂತರ ಎಲ್ಲ ಉಳಿತಾಯ. ಈ ಯಂತ್ರವನ್ನು ಅಂಚೆಯ ಮೂಲಕವು ನಿಮಗೆ ತಲುಪಿಸುತ್ತೇವೆ. ಆಸಕ್ತಿ ಇರುವವರು ನಿಮ್ಮ ವಿಳಾಸದೊಂದಿಗೆ ಕೆಳಗಿನ ವಿಳಾಸಕ್ಕೆ ಒಂದು ಕಾರ್ಡ ಹಾಕಿದರೆ ಸಾಕು ವಿ.ಪಿ.ಪಿ. ಮೂಲಕ ನಿಮಗೆ ತಲುಪಿಸುತ್ತೇವೆ. ಹೆಚ್ಚು ಶ್ರಮವಿಲ್ಲದ ಸುಲುಭವಾದ ವಿದಾನ !!!!
ಇದನ್ನು ನೋಡಿದ ಸಿದ್ದಲಿಂಗ ತಕ್ಷಣವೆ ಒಂದು ಕಾರ್ಡ ಬರೆದು ಹಾಕಿ ಉತ್ಸಾಹದಿಂದ ಕಾಯುತ್ತಿದ್ದ , ಕಡೆಗೆ ವಾರದ ನಂತರ ಬಂತು ಒಂದು ವಿ.ಪಿ.ಪಿ . ಅಂಚೆ ಅಣ್ಣನಿಗೆ ೮೫ ರೂ ಕೊಟ್ಟು ವಿ.ಪಿ.ಪಿ ಯನ್ನು ಬಿಡಿಸಿಕೊಂಡ. ನಂತರ ಎಚ್ಚರದಿಂದ ಪ್ಯಾಕೆಟ್ ಬಿಡಿಸಿದ. ಪೋಸ್ಟಮನ್ ಸಹ ಕಾಯುತ್ತಿದ್ದ ಏನಿರಬಹುದೆಂಬ ಕುತೂಹಲ.
ನಿದಾನವಾಗಿ ಬಿಡಿಸಿದರೆ ಒಳಗೆ ವೃತ್ತಾಕರದ , ಚಪ್ಪಟೆಯ ನುಣುಪಾದ ಒಂದು ಕಲ್ಲು , ಅದರೆ ಮೇಲೆ ಸರಿಯಾಗಿ ಕೂಡುವಂತೆ ಮತ್ತೊಂದು ಕಲ್ಲು. ಸಿದ್ದಲಿಂಗನಿಗೆ ಗಲಿಬಿಲಿ ಇದೆಂತದು ಬರೀ ಎರಡು ಕಲ್ಲು ಅಂತ. ಒಳಗೆ ಒಂದು ಮುದ್ರಿತ ಕಾಗದ ಏನೆಂದು ತೆಗೆದು ನೋಡಿದ.
"ಮಾನ್ಯರೆ ಇದೊಂದು ತಗಣೆಗಳನ್ನು ಯಾಂತ್ರಿಕವಾಗಿ ಸಾಯಿಸುವ ಅವಿಷ್ಕಾರ, ಉಪಯೋಗಿಸುವ ವಿದಾನ ಹೀಗಿದೆ , ಮೊದಲು ಒಂದು ತಗಣೆಯನ್ನು ನಿದಾನವಾಗಿ ಕೈಯಲ್ಲಿ ಬೆರಳುಗಳ ಮದ್ಯ ಹಿಡಿದು ಕೊಳ್ಳಿ ನಂತರ ಅದನ್ನು ಕೆಳಗಿನ ವೃತ್ತಾಕಾರದ ಕಲ್ಲಿನ ಮೇಲೆ ಇಡಿ ನಂತರ ಮೇಲಿನ ಇನ್ನೊಂದು ಕಲ್ಲಿನಿಂದ ತಗಣೆ ಯನ್ನು ಒತ್ತಿ ಸಾಯಿಸಿ. ನೀವು ಈ ವಿದಾನದಿಂದ ಎಷ್ಟು ತಗಣೆಗಳನ್ನಾದರು ಕೊಲ್ಲಬಹುದು "
ಸಿದ್ದಲಿಂಗ ಸುಸ್ತು , ನಗುತ್ತ ಏನು ಬರೆದಿದ್ದಾರೆ ಎಂದ ಅಂಚೆ ಪೇದೆ ಪಾಪ ಸಿದ್ದಲಿಂಗನಿಂದ ಬೈಸಿಕೊಂಡು ಅಲ್ಲಿಂದ ಹೊರಟ.