ಒಮ್ಮೆ ನಕ್ಕು ಬಿಡಿ _ ೧೮
ಸಿನಿಮಾ ಪ್ರಾರಂಬವಾಗಿ ಕತ್ತಲಾವರಿಸಿದ್ದು. ಸಾಲಿನ ಕೊನೆಯ ಸೀಟಿನಲ್ಲಿ ಕುಳಿತಿದ್ದ ಸಿದ್ದಲಿಂಗ. ಸಾಲಿನ ಮದ್ಯದಿಂದ ಎದ್ದುಹೋದವನೊಬ್ಬ ಇವನ ಕಾಲು ತುಳಿಯುತ್ತ ಹೊರಹೋದ. ಸಿದ್ದಲಿಂಗನಿಗೆ ರೇಗಿ ಹೋಗಿತ್ತು. ಹೊರಹೋಗಿದ್ದ ವ್ಯಕ್ತಿ ಮತ್ತೆ ಕತ್ತಲಲ್ಲಿ ತಡವರಿಸುತ್ತ ಬಂದು ಇವನ ಬಳಿಬಂದು ನಿಂತು ಪ್ರಶ್ನಿಸಿದ
"ಸಾರ್ ನಾನು ಹೋರಹೋಗುವಾಗ ನಿಮ್ಮ ಕಾಲು ತುಳಿದಿದ್ದೆನಾ?"
ಬಹುಷಃ ಕ್ಷಮೆ ಕೇಳಲು ಇರಬಹುದು ಎಂದು ಕೊಂಡು ಸಿದ್ದಲಿಂಗ ಗರಂ ಆಗಿ ಹೌದು ಎಂದ. ಆ ವ್ಯಕ್ತಿ ತಕ್ಷಣ
"ಸರಿ ಬಿಡಿ ಇದೇ ಸಾಲಿನಲ್ಲಿಯೆ ನಾನು ಕುಳಿತ್ತಿದ್ದು " ಎನ್ನುತ್ತ ಅವನನ್ನು ದಾಟಿ ಪುನಃ ಒಳ ಹೋದ.
(ಕೇಳಿದ್ದು)
Rating
Comments
ಉ: ಒಮ್ಮೆ ನಕ್ಕು ಬಿಡಿ _ ೧೮