ಒಳ್ಳೆಯ ವ್ಯಂಗ್ಯಚಿತ್ರಗಳು

ಒಳ್ಳೆಯ ವ್ಯಂಗ್ಯಚಿತ್ರಗಳು

ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ , ಒಳ್ಳೆಯ ವ್ಯಂಗಚಿತ್ರಗಳ ಸಮೃದ್ಧಿಯಿತ್ತು. ಆಗ ಸುಧಾ , ಮಯೂರ , ತುಷಾರಗಳಲ್ಲಿ ಕೆ. ಆರ್. ಸ್ವಾಮಿ ,ನಾಡಿಗ್ , ಶ್ರೀಧರ್ , ರಾವ್ ಬೈಲ್ ಮುಂತಾದವರ ಶ್ರೇಷ್ಠ ವ್ಯಂಗ್ಯಚಿತ್ರಗಳು ಕಾಣಸಿಗುತ್ತಿದ್ದವು . ಪ್ರಜಾವಾಣಿಯಲ್ಲಿ ಆರ್‍.ಕೆ. ಮೂರ್ತಿಯವರ ರಾಜಕೀಯ ವ್ಯಂಗ್ಯಚಿತ್ರಗಳಿರುತ್ತಿದ್ದವು . ಈಗ ಅವರೆಲ್ಲ ಎಲ್ಲಿ ಹೋದರೋ ? ಹೊಸಬರು ಏಕೆ ಬರಲಿಲ್ಲವೋ ? ಈಗ ವ್ಯಂಗ್ಯಚಿತ್ರಗಳಲ್ಲಿ ಸಾಧಾರಣ ಎಂಬ ಮಟ್ಟದ್ದೂ ಕಾಣುವದಿಲ್ಲ.
ನಮ್ಮ ಮನೆಯಲ್ಲಿ ವರ್ಷಗಟ್ಟಲೆಯ ಮಯೂರ / ತುಷಾರ ಸಂಚಿಕೆಗಳಿದ್ದವು . ಆದರೆ ಒಂದು ಸಲ ನಾನು ಬೇರೆ ಊರಿಗೆ ಹೋದಾಗ ಎಲ್ಲವನ್ನೂ ಮನೆಯವರು ರದ್ದಿ ಹಾಕಿಬಿಟ್ಟಿದ್ದರು. ಒಂದು ಥರ ನನಗೆ 'ತುಂಬಲಾಗದ ನಷ್ಟ' ಉಂಟಾಯಿತು.
ಆದರೆ ನಾಡಿಗರ ವ್ಯಂಗ್ಯಚಿತ್ರಗಳ ಸಂಗ್ರಹವೊಂದು 'ನಾಡಿಗರ ನಗೆ ಕಾರಂಜಿ' ಎಂಬ ಹೆಸರಿನಲ್ಲಿ ಮಾರಾಟಕ್ಕೆ ಲಭ್ಯವಿದೆ . ಚೆನ್ನಾಗಿದೆ. ನೀವೂ ಕೊಂಡು ಸಂತಸಪಡಿರಿ.
ಇಂಗ್ಲೀಷಿನಲ್ಲಿ ಆರ್.ಕೆ.ಲಕ್ಷ್ಮಣರ ವ್ಯಂಗ್ಯಚಿತ್ರಗಳ ಬಹಳಷ್ಟು ಪುಸ್ತಕಗಳು ಲಭ್ಯ ಇವೆ.

Rating
No votes yet

Comments