ಓದಿದ ಪುಸ್ತಕ- ನೀತಿಚಿಂತಾಮಣಿ

ಓದಿದ ಪುಸ್ತಕ- ನೀತಿಚಿಂತಾಮಣಿ

ಚಿತ್ರ

ಮಕ್ಕಳಿಗೆ ಕಥೆಗಳ ಮೂಲಕ ನೀತಿಯನ್ನು ಬೋಧಿಸುವ ಪುಸ್ತಕ ಇದು. ಇದನ್ನು ಎಂ ಎಸ್ ಪುಟ್ಟಣ್ಣನವರು 135 ವರ್ಷಗಳ ಹಿಂದೆ ಬರೆದರು.ಈ ಪುಸ್ತಕ ಈತನಕ 33 ಮುದ್ರಣಗಳನ್ನು ಕಂಡಿದೆ.ಈ ಪುಸ್ತಕದ ಭಾಷೆಯನ್ನು ಇಂದಿನ ಕನ್ನಡ ತಕ್ಕಂತೆ ಪರಿವರ್ತಿಸಿ ಕಥೆಗಾರ ಎಸ್ ದಿವಾಕರ್ ಅವರು ಹತ್ತು ವರ್ಷಗಳ ಹಿಂದೆ ಬರೆದಿದ್ದಾರೆ.ಸುಮಾರುಸುಮಾರು 200 ಪುಟಗಳ ಪುಸ್ತಕ ಇದು. ಸುಮಾರು ಒಂದು ನೂರು ಕಥೆಗಳು ಇದರಲ್ಲಿ ಇರಬಹುದು. ಈ ಕಥೆಗಳೊಂದಿಗೆ ಸಂಬಂಧಿಸಿದ ನೀತಿಯನ್ನು  (ಕೆಲವೆಡೆ ಅದು ಕಥೆಗೆ ಸೂಕ್ತ ಅನಿಸುವುದಿಲ್ಲ )  ಕುಮಾರವ್ಯಾಸ, ಸರ್ವಜ್ಞ, ಸೋಮೇಶ್ವರ ಶತಕ ಮುಂತಾದವುಗಳ ವಾಕ್ಯಗಳೊಂದಿಗೆ ಕೊಟ್ಟಿದ್ದಾರೆ.

 

 

ಕೆಲವು ಕಥೆಗಳು ಇದರಲ್ಲಿ ನಮಗೆ ಗೊತ್ತಿರಬಹುದು. ಇನ್ನು ಕೆಲವು ಗೊತ್ತಿರಲಿಕ್ಕಿಲ್ಲ. ಆದರೆ ಗೊತ್ತಿರುವ ಕಥೆಗಳಲ್ಲಿಯೂ ಹೊಸ ನೋಟ,  ಹೊಸ ಹೊಳಹುಗಳು ನಮಗೆ ದಕ್ಕುತ್ತವೆ.

 

 

Rating
Average: 4 (1 vote)