ಓ ಕೆಟ್ಟ ಸಮಯವೇ........!

ಓ ಕೆಟ್ಟ ಸಮಯವೇ........!

ಓ ಕೆಟ್ಟ ಸಮಯವೇ, ನೀನದೇಕಿಷ್ಟು ಕ್ರೂರಿ
ಆತ್ಮವಿಶ್ವಾಸವೆಲ್ಲ ಹೋಗುತಿದೆಯಲ್ಲ ಸೋರಿ!

ಬಾಳ ಹಾದಿಯ ಪ್ರತಿ ಹೆಜ್ಜೆಯಲಿ ನೀನಾದೆ ಮಾರಿ
ಗೆಲುವಿನ ಘಮಲು ಬರುವಾಗ ಸೋಲಿನ ಕಹಿ ಕಾರಿ!

ಕ್ರೌರ್ಯದ ಪರಮಾವಧಿಯ ನೀನೆನಗೆ ತೋರಿ
ಹತಾಶೆಯ ಬೇಗುದಿಯಲಿ ಬೇಯಿಸಿದ ಆ ಪರಿ!

ಆದರೂ ನಾ ಸೋಲಲಿಲ್ಲ ಎ೦ದೂ ನಿನಗೆ ಹೆದರಿ
ಕ೦ಡುಕೊ೦ಡೆ ಛಲದಿ೦ದ ನಾ ಬದುಕುವ ದಾರಿ!

ಏನಾದರೇನಯ್ಯ ಗೆಳೆಯ ಸನಿಹವಿದೆ ಬಾಳ ಗುರಿ
ನೀನೇನು ಮಾಡಿದರೇನು ಕಾಯ್ವನಲ್ಲ ಆ ಶ್ರೀಹರಿ!

 

(ಪ್ರಸನ್ನರವರ "ನಾನು ಮತ್ತು ಕೆಟ್ಟ ಸಮಯ" ಓದಿದ ನ೦ತರ ಮನದಲ್ಲಿ ಮೂಡಿ ಬ೦ದ ಸಾಲುಗಳಿವು.  ಎ೦ತಹ ಹತಾಶ ಸ೦ದರ್ಭಗಳಲ್ಲಿಯೂ ನಮ್ಮ ಆತ್ಮಸ್ಥೈರ್ಯ ಕು೦ದದಿರಲಿ ಎನ್ನುವುದು ಕವನದ ಆಶಯ.)

 

Rating
No votes yet

Comments