ಓ, ಬನ್ನಿ, ಸೋದರರೆ, ಬೇಗ ಬನ್ನಿ!

ಓ, ಬನ್ನಿ, ಸೋದರರೆ, ಬೇಗ ಬನ್ನಿ!

ಯಾಕೋ ಗೊತ್ತಿಲ್ಲ ... ರಾಷ್ಟ್ರಕವಿ ಕುವೆಂಪು ಅವರು ಬಹಳ ನೆನಪಾದರು
ಅವರ ೧೯೩೫ರಲ್ಲಿ ಹೇಳಿದ ’ಮನುಜ ಮತ ವಿಶ್ವಪಥ’ ಇವತ್ತು ಎಷ್ಟು ಪ್ರಸ್ತುತ ಅಲ್ವಾ
ಅವರ ನೆನಪಲಿ ಅವರ ಓ೦ದು ಸೊಗಸದ ರಚನೆ ಇಲ್ಲಿದೆ
ಅವರ ಕೃತಿಯ ಹಾಗೆ ಅವರ ಮನೆಯೂ ಸು೦ದರ

ರಾಷ್ಟ್ರಕವಿ ಕುವೆಂಪುಗಿದೊ ಸಂಪದದ ಓದುಗರ ನಮನ...

ಓ, ಬನ್ನಿ, ಸೋದರರೆ, ಬೇಗ ಬನ್ನಿ!
ಗುಡಿ ಚರ್ಚುಮಸಜೀದಿಗಳ ಬಿಟ್ಟು ಹೊರಬನ್ನಿ,
ಬಡತನವ ಬುಡಮುಟ್ಟ ಕೀಳಬನ್ನಿ,
ಮೌಢ್ಯತೆಯ ಮಾರಿಯನ್ನು ಹೊರದೂಡಲೈ ತನ್ನಿ,
ವಿಜ್ಙಾನ ದೀವಿಗೆಯ ಹಿಡಿಯ ಬನ್ನಿ.
ಓ, ಬನ್ನಿ, ಸೋದರರೆ, ಬೇಗ ಬನ್ನಿ!
ಅದೊ ನೋಡಿ, ರಷ್ಯಾ ಜಪಾನು ತುರ್ಕಿಗಳೆಲ್ಲ
ಪರೆಗಳಚಿ ಹೊರಟಿಹವು ಹೊಸಪಯಣಕೆ,
ಬೆಳಗಿಹರು ನೆತ್ತರೆಣ್ಣೆಯ ತಿಳಿವಿನುರಿಯಲ್ಲಿ
ಕಿಚ್ಚಿಟ್ಟು ಹಳೆಕೊಳಕು ಬಣಗು ತೃಣಕೆ.
ಓ, ಬನ್ನಿ, ಸೋದರರೆ, ರಾಷ್ಟ್ರರಣಕೆ!
ಸಿಲುಕದಿರಿ ಮತವೆಂಬ ಮೋಹದ ಜ್ಙಾನಕ್ಕೆ;
ಮತಿಯಿಂದ ದುಡಿಯಿರೈ ಲೋಕಹಿತಕೆ,
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜ ಮತಕೆ.
ಓ, ಬನ್ನಿ, ಸೋದರರೆ, ವಿಶ್ವಪಥಕೆ!

-ಕುವೆಂಪು
೨೯-೧೦-೧೯೩೫

Rating
No votes yet