ಓ ಹೆಣ್ಣೆ ನೀನು ಹೀಗೇಕೆ?!

ಓ ಹೆಣ್ಣೆ ನೀನು ಹೀಗೇಕೆ?!

ರಾರಾಜಿಸುವ ಅದೆಷ್ಟು ಸಾಹಿತ್ಯ
ಕಲೆ ಪ್ರತಿಭೆಗಳು ಚಿತ್ರಿಸಿದ್ದವು
ಅವು ನನ್ನ ಕುರಿತವು ನನ್ನ;
ಜೀವನದ ನಗ್ನ ಸತ್ಯದದ ಪುಟ್ಟಗಳು. ||
ರಾಜ್ಯ-ಸಾಮ್ರಾಜ್ಯಗಳು
ಗೆಜ್ಜೆ ಧ್ವನಿಗಳಿಂದಲೇ ವಿಜಯದ
ಸುಖ ಅನುಭವಿಸಿದ್ದವು;
ಹಲವು ಬಾರಿ ಅನಾಥ
ಸಿಂಹಾಸನದ ವೀರ ಕಥೆಯಾಗಿದ್ದವು. ||
ಅದೆಷ್ಟು ರಣ ಕಹಳೆಗಳು
ನನ್ನ ಎದುರು ಗರ್ಜಿಸಿದ್ದರೂ,
ಕತ್ತಿಯ ಎದುರು ಜೀವ ಕಳೆದುಕೊಂಡು;
ಅಟ್ಟ ಸೇರಿದ್ದವು ಕಾಲಕ್ಕೆ
ಮೂಕ ಸಾಕ್ಷಿಯಾಗಿದ್ದವು. ||
ಗತ ಕಾಲದ ಪುಟದಲ್ಲಿ ನನ್ನ
ಬಿಂಬದಲ್ಲಿನ ಪ್ರತಿಬಿಂಬವು
ಪ್ರಕಾಶಿಸುತ್ತಿದ್ದರೂ ಇಂದು ನಾನೇಕೆ
ಇನ್ನೂ ಬೆಳೆದಿಲ್ಲ, ಬೆಳೆಯುತ್ತಿಲ್ಲ;
ನೆರಳಿನಲ್ಲಿ ನರಳಿ ಪಾತಾಳ ಸೇರುತ್ತೀರುವೆ?. ||
ಇಂದೇಕೆ ನಾನು ಗೋಳಿನ ವೀಣೆಯ ನಾದವಾದೆ?,
ಸಾಗರದಲ್ಲಿನ ತೆರೆಗಳ ತಿಕ್ಕಾಟವಾದೆ?,
ದಡ ಸೇರದ ನೌಕೆಯಾದೆ?.
ಕನಸು-ವಾಸ್ತವದ ಮದ್ಯ ನಾನೇಕೆ ಕಳವಾದೆ.? ||
ಬಲಾಡ್ಯನ ನೆರಳಿನ ಕಣವಾಗಿ
ಬಡವಾಗಿ, ಬಾಡುತ್ತೀರುವೆ?
ಭವ್ಯ ಕನಸಿನ ಮೇಲಿನ ಗೂಡು
ದೀಪದ ಬಣ್ಣದ ಕಾಗದದ ಸ್ಥಿತಿಯಲ್ಲಿ
ಲೋಕಕ್ಕೆ ಬಣ್ಣದ ಬೆಳಕು ನೀವುತ್ತೀದ್ದರೂ
ನನ್ನ ಬದುಕಿನಲ್ಲಿ ಬಣ್ಣವಿಲ್ಲ!.
ಹೊತ್ತು ಮುಳುಗುವ ಮುನ್ನ ನನ್ನ
ನಾನೇ ದುಡಿಸಿಕೊಂಡು, ಹೊತ್ತು
ಕುಂದಿದ ನಂತರ ಹಾಸಿಗೆಯಲ್ಲಿ
ಹೊಸ ಲೋಕದ ಕನಸು ಪರಿಚಯಿಸಿದರೂ
ನಾನೇಕೆ ಲೋಕದ ಕಣ್ಣಿಗೆ
ಉಪಯೋಗದ, ಉಪಯೋಗಿಸುವ ವಸ್ತುವಾದೆ. ?||
ಜಗತ್ತು ನೋಡುವ ಮೊದಲೇ
ನನ್ನ ಗುರುತಿಸಿದ ಕಣ್ಣುಗಳು;
ಚಿಗುರು ಚಿವುಟಿದಂತೆ ಕಿತ್ತು
ಕಸದ ತೊಟ್ಟಿಯಲ್ಲಿ ಎಸೆದು
ಕಾಗೆ, ನಾಯಿಗಳಿಗೆ ಬೋಜನವಾದೆ?. ||
ಒಂದು ವೇಳೆ ಈ ನೋಟ
ಕಣ್ಣು ತಪ್ಪಿಸಿ ಈ ಲೋಕ ನೋಡಲು
ಹೊರಬಂದರೂ; ಅದು ಎಷ್ಟೊಂದು ಭೀಕರ?
ಕಾಲ ಕಳೆದಂತೆ ನಾನೇ ಕಾಲದ
ಸುಳಿಯಲ್ಲಿ ಸಿಕ್ಕು ಎದ್ದು ಬಿದ್ದು ಅರೆ ಜೀವವಾದೆ. ||
ಸಿಡಿಯಬೇಕೆಂದರೂ ಸಿಡಿಯುತ್ತಿಲ್ಲ ;
ಸಿಡಿದರೂ ಪರಿಣಾಮವಿಲ್ಲ;
ಎಲ್ಲವೂ ಕರಿ ನೆರಳಿನ ಹಿಂದಿನ ಆಟ,
ಅಲ್ಲ ಇತರರ ಗಮನ ಸೆಳೆಯುವ ದೊಂಬರಾಟ!
ಎಲ್ಲರು ಹೇಳುವರು ನೀನು ಹಿಂದಿನ ಹಾಗಿಲ್ಲ;
ನಾವು ನಿನ್ನ ಬೆಳೆಯಲು ಬಿಟ್ಟಿದ್ದೇವೆ, ಅವಕಾಶ ಕೊಟ್ಟಿದ್ದೇವೆ ಎಂದು!
ನನ್ನ ಬದುಕಿಗೆ ಇವರು ಸೂತ್ರದಾರರೇ!?

Rating
No votes yet