ಔಟ್ ಬ್ರೇಕ್ -1995 ಚಿತ್ರ- ಕೋತಿ ಚೇಷ್ಟೆ! ಸಾಂಕ್ರಾಮಿಕ ರೋಗವೊಂದರ ಸುತ್ತ...

ಔಟ್ ಬ್ರೇಕ್ -1995 ಚಿತ್ರ- ಕೋತಿ ಚೇಷ್ಟೆ! ಸಾಂಕ್ರಾಮಿಕ ರೋಗವೊಂದರ ಸುತ್ತ...

ಚಿತ್ರ

ಔಟ್ ಬ್ರೇಕ್ -1995 ಚಿತ್ರ- ಮಂಗನ ಹಿಂದೆ ಮಾನವ..

ಕೆಲ ವರ್ಷಗಳ ಹಿಂದೆ ಹಕ್ಕಿ ಜ್ವರ-ಆಮೇಲೆ ಹಂದಿ ಜ್ವರ ಬಂದು ಹಲವು  ಜನ   ಜನ ಮರಣಿಸಿ -ಬದುಕುಳಿಯಲು    ಮುಖಕ್ಕೆ ಮಾಸ್ಕ್ ಹಾಕಿಕೊಂಡು ಎ ಸಿ ಬಸ್ಸು ಬಿಟ್ಟು ಮಾಮೂಲಿ ಬಸ್ಸು ಹತ್ತಿ   ಆಫೀಸಿಗೆ ಹೊರಟಿದ್ದು -ಮನೆಯಿಂದ  ಹೊರಗೆ ಬಂದಿದ್ದು ಗೊತ್ತಲ್ಲ...!!
 
ವರ್ಷಕ್ಕೊಮ್ಮೆ  ಬರುವ   ವಾಂತಿ ಬೇಧಿ -ಕಾಲರ-ತರಹದ ಸಾಂಕ್ರಾಮಿಕ  ರೋಗಗಳನ್ನು  ಹತೋಟಿಗೆ  ತರಲು ಆಗದೆ  ಕೈ ಹಿಸುಕಿಕೊಳ್ಳುವ  ಡಾಕ್ಟರುಗಳು -ಸರಕಾರದ  ಕ್ರಮ ಆಗಾಗ್ಗೆ ಟೀಕೆಗೆ ಒಳಗಾಗುವುದು ಗೊತ್ತಲ್ಲ -ಪರಿಸ್ಥಿತಿ ಹೀಗಿರುವಾಗ  ಕ್ಷಣ ಮಾತ್ರದಲ್ಲಿ  ಸಾವಿರಾರು ಜನರಿಗೆ ಹಬ್ಬುವ  'ಎಬೋಲ' ತರಹದ ಅಥವಾ ಇನ್ಯಾವುದೇ  ವೈರಸ್ನ  ಸಾಂಕ್ರಾಮಿಕ ರೋಗ  ಕಾಣಿಸಿದರೆ ಅದರ ಹತೋಟಿ ಹೇಗೆ? 
ಅದಕ್ಕೆ  ಆ ತರಹದ್ದಕ್ಕೆ ಅದನ್ನು ಎದುರಿಸಲು  ನಾವೆಷ್ಟು  ಸನ್ನದ್ಧ?
ಈ ಭಾವ  ಆಗ ಎಲ್ಲರಿಗೂ ಬಂದಿರಬಹುದು..!!
 
ನಾವು ಸನ್ನದ್ಧ -ಸಾಕಾಗುವಷ್ಟು
ಹೆಚ್ಚಿಗೆನೇ  ಔಷಧಿ ಸ್ಟಾಕ್ ಇದೆ -ಭಯ ಪಡಬೇಡಿ -ನಿಶ್ಚಿಂತೆಯಿಂದ ಇರಿ ಎಂದು ಹೇಳುವ ಡಾಕ್ಟರುಗಳು -ಸರಕಾರದ ಅಭಯದ ನಂತರವೂ ನೈಜ ಪರಿಸ್ಥಿತಿಯ -ಅವರ ಸನ್ನದ್ಧತೆಯ ಬಗ್ಗೆ ಅರಿವಿರುವ ನಾವ್ -ನಾವ್ ಸುರಕ್ಷಿತ ಎಂದು ಭಾವಿಸಿ  ಕೂಲಾಗಿ ಇರಬಹುದೇ?
 
ಈ ತರಹದ  ರೋಗ ಒಂದರ (ಆ ಕಲ್ಪಿತ ರೋಗದ -ವೈರಸ್-ಹೆಸರು ಮೊಟಾಬ )-ಮತ್ತು ಅದನ್ನು  ಡಾಕ್ಟರುಗಳು -ಸರಕಾರ ಎದುರಿಸುವ -ಜನರಿಗೆ  ಅಭಯ ನೀಡಿ  ಚಿಕಿತ್ಸೆ  ಕೊಟ್ಟು  ಉಳಿಸಿಕೊಳ್ಳುವ  ಯತ್ನದಲ್ಲಿ  ಆಗುವ ಅವಘಡಗಳು-ಅನಿರೀಕ್ಷಿತ ಘಟನೆಗಳು -ಸುತ್ತಲಿನ  ಕಥೆಯ  ಚಿತ್ರವೇ  ಈ ಔಟ್ ಬ್ರೇಕ್ -1995 ಚಲನ ಚಿತ್ರ.
ಕಥೆ:
 
ಅಂದಿನ   ರಿಪಬ್ಲಿಕ್ ಆಫ್ ಜೈರೆ (1971-1997)-ಇಂದಿನ ಡೆಮೊಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ  ದೇಶದಲ್ಲಿ ನೆಲೆ ನಿಂತ  ಯೋಧರ  ಕ್ಯಾಂಪ್ನಲ್ಲಿ  1967ರಲ್ಲಿ    ಬೆಳಕಿಗೆ ಬರುವ ರೋಗವನ್ನು ನಿಯಂತ್ರಿಸಲು ಆಗದೆ  ಈ ವಿಷ್ಯ ಹೊರಗಿನ ಜಗತ್ತಿಗೆ  ಗೊತ್ತಾಗದೆ ಇರಲಿ ಎಂದು  ಮತ್ತು  ಸುದ್ಧಿ  ಹಬ್ಬದೆ ಬಿಡಲು -ಆ ಯೋಧರ ಬಿಡಾರದ ಮೇಲೆ ಬಾಂಬು  ಹಾಕಿ  ಆ ವಿಷಯವನ್ನು ಗುಟ್ಟಾಗಿ ಇಡುವರು.
 
ಸರಿಯಾಗಿ 28 ವರ್ಷಗಳ ತರುವಾಯ 1995ರಲ್ಲಿ ಈ ರೋಗ ಮತ್ತೆ ಜೈರೆಯಲ್ಲಿ ಕಾಣಿಸುವುದು-ಆ ಬಗ್ಗೆ ಗೊತ್ತಾಗಿ  ಅದರ ಬಗ್ಗೆ ಮಾಹಿತಿ -ಮತ್ತು ವೈರಸ್  ಸ್ಯಾಂಪಲ್ ತರಲು ನ್ಯೂಯಾರ್ಕ್ನ USAMRIID
(ಯುನೈಟೆಡ್ ಸ್ಟೇಟ್ಸ್ ಆರ್ಮಿ ಮೆಡಿಕಲ್ ರೀಸರ್ಚ್ ಇನ್ಸ್ಟಿಟ್ಯುಟ್ ಆಫ್ ಇನ್ಫೆಕ್ಚಿಯಸ್ ಡಿಸೀಸಸ್ ) ನ ವೈರಾಣು  ತಜ್ಞ  ಕರ್ನಲ್  ಸ್ಯಾಮ್  ಡೆನಿಯಲ್ಸ್  ನಾಯಕತ್ವದಲ್ಲಿ  ಇನ್ನು ಇಬ್ಬರ ಜೊತೆ ಜೈರೆಗೆ  ಬಂದು  ಈ ವೈರಸ್ ಮಾಡಿದ ವಿನಾಶವನ್ನು ಕಣ್ಣಾರೆ ಕಂಡು  ಇದು ಶೀಘ್ರದಲ್ಲಿ ಎಲ್ಲೆಡೆ ಹಬ್ಬಬಹುದು ಎಂದು ಚಿಂತಿಸಿ  ಆ ಬಗ್ಗೆ  ತನ್ನ ಮೇಲಾಧಿಕಾರಿ  ಬ್ರಿಗೇಡಿಯರ್ ಜೆನರಲ್  ಬಿಲ್ ಫೋರ್ಡ್ ಗೆ ಹೇಳುವನು-ಈ ಮೊದಲೇ  ಆ ವೈರಸ್ ಬಗ್ಗೆ ಗೊತ್ತಿರುವ  ಆ  ಬ್ರಿಗೇಡಿಯರ್  ಜೆನರಲ್  ಈ ವಿಷಯವನ್ನು ತಾತ್ಸಾರ ಮಾಡಿ-ಅದೇನೂ ಅಷ್ಟು ಗಂಭೀರ  ವಿಷಯವಲ್ಲ-ಅದೇನೂ ಮತ್ತೆ ಹಬ್ಬಲಿಕ್ಕಿಲ್ಲ- ತಾನಾಗೆ ಮುಂಚೆ ಆದ ಹಾಗೆ ಮರೆ ಆಗುವುದು -ಸುಮ್ಮನಿರಿ ಆ ಬಗ್ಗೆ ಮರೆತುಬಿಡಿ ಎಂದು ಹೇಳುವನು.
 
ಈ ಮಧ್ಯೆ  ಜೈರೆಯಲ್ಲಿನ  ವೈರಾಣು  ಪ್ರಯೋಗಾಲಯದ ಈ  ಸೋಂಕು ಪೀಡಿತ  ಮಂಗ ಒಂದನ್ನು -ಪ್ರಾಣಿಗಳ  ಕಳ್ಳ   ಸಾಗಾಣೆ -  ಮಾರಾಟ ಮಾಡುವ ವ್ಯಕ್ತಿ ಒಬ್ಬ ಕೊಂಡುಕೊಂಡು ಅದನ್ನು ನ್ಯೂಯಾರ್ಕ್ ಸಿಟಿಯಲ್ಲಿ ಒಬ್ಬರಿಗೆ ಮಾರುವನು. ( ಅಷ್ಟರೊಳಗೆ ಅವನಿಗೂ ಆ ಸೋಂಕು ತಗುಲಿರುವುದು.
ಅದನ್ನು ಮಾರಲು ಹೋದರೆ  ಅದು ತೆಗೆದುಕೊಳ್ಳದ  ಸಾಕು ಪ್ರಾಣಿಗಳನ್ನು ಮಾರುವ   ವ್ಯಕ್ತಿ ಅದಕ್ಕೆ ಏನೋ ತಿನ್ನಿಸಲು ಹೋಗಿ  ಕೈಗೆ ಗಾಯವಾಗಿ ಅವನಿಗೂ ಆ ವೈರಸ್ ಸೋಂಕು ತಗುಲುವುದು.
 
ಅದನ್ನು ಸಾಗಾಣೆ ಮಾಡಿದವ  ಎಲ್ಲೂ  ಅದನ್ನು ಮಾರಲು ಆಗದೆ  ಅದನು ನ್ಯೂಯಾರ್ಕ್ ಸಿಟಿಯ ಪ್ರಾಂತ್ಯದ  ಅಡವಿಗೆ ಒಯ್ದು ಬಿಡುವನು. ಆಮೇಲೆ ವಿದೇಶಕ್ಕೆ  ಹೊರಡುವನು. ವಿದೇಶಕ್ಕೆ ಬಂದು ಇಳಿದು ಅವನನ್ನು ಕರೆದೊಯ್ಯಲು   ಬಂದ  ಪ್ರೇಯಸಿಗೆ ಮುತ್ತು ಕೊಟ್ಟು ಅವಳಿಗೂ ವೈರಸ್ ಸೋಂಕು ಸೋಕುವುದು . ಇಬ್ಬರೂ  ವಿಪರೀತ  ಜ್ವರ -ರಕ್ತಹೀನತೆ -ವಾಂತಿ ನಿಶ್ಯಕ್ತಿಯಿಂದ  ನರಳಿ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಿ ಪರೀಕ್ಷಿಸಲು ಇಬ್ಬರಿಗೂ ಯಾವುದೋ ರೋಗ ಬಂದಿದೆ ಎಂದು   CDC (ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಯಾಂಡ್  ಪ್ರಿವೆಂಶನ್ ) ಯ ವೈದ್ಯೆ -ತಜ್ಞೆ-
(ವೈರಾಣು  ತಜ್ಞ  ಕರ್ನಲ್  ಸ್ಯಾಮ್  ಡೆನಿಯಲ್ಸ್ನ ಮಾಜಿ ಹೆಂಡತಿ)ಆದ್ರೆ ಇದು ಇನ್ನು ಬೇರೆ ಯಾರಿಗೂ  ಸೋಕಿಲ್ಲ ಎಂದು ಅಂದುಕೊಂಡು  ಆ ಬಗ್ಗೆ  ಮೇಲಾಧಿಕಾರಿಗಳಿಗೆ  ವರದಿ ಮಾಡುವಳು. ಈ ಮಧ್ಯೆ  ಸಾಕು ಪ್ರಾಣಿ ಮಾರಾಟ ಮಾಡುವ  ಮಾಲೀಕನ  ರೋಗದ ತಪಾಸಣೆ ಮಾಡಿ  ರಕ್ತ ಪರೀಕ್ಷೆ ಗೆ  ತೆಗೆದ  ಸ್ಯಾಮ್ಪಲ್ನ  ಆಕಸ್ಮಿಕವಾಗಿ  ಕೆಳಗೆ ಬೀಳಿಸುವ  ಆಸ್ಪತ್ರೆ ಸಿಬ್ಬಂದಿ ಒಬ್ಬ  ತ್ವರಿತವಾಗಿ  ಸತ್ತು ಆ ರೋಗ  ಇಡೀ  ಸೀಡರ್  ಕ್ರೀಕ್ ಪ್ರಾಂತ್ಯಕ್ಕೆ ಹಬ್ಬಿ  ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟು  ಜನಗಳಿಂದ ಆಸ್ಪತ್ರೆ ತುಂಬಿ ತುಳುಕುವುದು . ಈ ವಿಷ್ಯ  ಗೊತ್ತಾಗಿ ಆ ಬಗ್ಗೆ ಅಲ್ಲಿಗೆ ಹೋಗಲು  ತಯಾರಾದ  ವೈರಾಣು  ತಜ್ಞ  ಕರ್ನಲ್  ಸ್ಯಾಮ್  ಡೆನಿಯಲ್ಸ್ನಿಗೆ ಅಲ್ಲಿಗೆ ಹೋಗಬಾರದು ಎಂಬ ಆಜ್ಞೆ ಇದ್ದರೂ  ಧಿಕ್ಕರಿಸಿ  ಅಲ್ಲಿಗೆ ಬಂದು  ಆ ವೈರಸ್ ಪೀಡಿತರನ್ನು ನೋಡಿ  ಅವರ ಕಥೆ  ಕೇಳಿ  ಅದು  ತಾ ಜೈರೆಯಲ್ಲಿ ನೋಡಿದ  ಕಂಡು ಹಿಡಿದ ವೈರಸ್ ಎಂದು ಖಚಿತವಾಗಿ ರೋಗ ಹೇಗೆ  ನ್ಯೂಯಾರ್ಕ್ ಗೆ ಬಂತು ಎಂದು ತಿಳಿಯಲು  ದಾಖಲಾದ  ಸಾಕು ಪ್ರಾಣಿಗಳ ಮಾರಾಟಗಾರನ ವಿಚಾರಿಸಿದಾಗ   ಅದರ ರೋಗ ಪ್ರಸಾರಕ  ಆ ಮಂಗ ಎಂದು ಖಚಿತವಾಗಿ  ಅದನ್ನು ಹುಡುಕುವ -ಮತ್ತು ಈ ರೋಗ ನಿಯಂತ್ರಿಸುವ  ಬಗೆ ಆಲೋಚಿಸಿ  ತನ್ನ ಮೇಲಾಧಿಕಾರಿಗಳಿಗೆ  ತುರ್ತು ಪರಿಸ್ಥಿತಿ ಘೋಷಿಸಲು ಹೇಳುವನು.
 
ಈ ಮಧ್ಯೆ ವೈರಸ್ ತನ್ನ  ಸ್ವಭಾವ  ಚಹರೆ ಬದಲಿಸಿದ  ಕಾರಣ-ಈ ಮುಂಚೆ ಮಿಲಿಟರಿಯವರು  ಕಂಡು ಹಿಡಿದಿದ್ದ  ಪ್ರತ್ತ್ಯೌಷಧ  ಕೆಲಸ ಮಾಡದೆ  ಇರಲು ಈ ಬಗ್ಗೆ  ಮೊದಲೇ ಗೊತ್ತಿದ್ದರೂ  ದೇಶದ ಸುರಕ್ಷತೆ  ಮತ್ತು ಈ ವೈರಸ್ ಅನ್ನು ಅನ್ಯ ದೇಶಗಳವರು -ಉಗ್ರಗಾಮಿಗಳು  ಸಮೂಹ ವಿನಾಶಕ ಸಾಧನವಾಗಿ ಬಳಸಿಕೊಳ್ಳದೆ ಇರಲಿ  ಎಂದು ಸುಮ್ಮನಿದ್ದೆ ಎಂದು ಮೇಲಾಧಿಕಾರಿ  ಬ್ರಿಗೇಡಿಯರ್ ಜೆನರಲ್ ಹೇಳಿದ್ದು ಕೇಳಿ  ವೈರಾಣು  ತಜ್ಞ  ಕರ್ನಲ್  ಸ್ಯಾಮ್  ಡೆನಿಯಲ್ಸ್ಗೆ ಶಾಕ್ ಆಗುವುದು-ಆಮೇಲೆ ಆ ಪ್ರಾಣಿಯನ್ನು ಹುಡುಕುವ -ಈ ವೈರಸ್ ನಿಯಂತ್ರಿಸುವ  ಯತ್ನದಲ್ಲಿ  ವೈರಾಣು  ತಜ್ಞ  ಕರ್ನಲ್  ಸ್ಯಾಮ್  ಡೆನಿಯಲ್ಸ್ ಮಗ್ನ .
 
ತನ್ನ ತಪ್ಪು ಒಂದನ್ನು ಮುಚ್ಚಿ ಹಾಕಲು  ಆಗದ  ಬ್ರಿಗೇಡಿಯರ್ ಜೆನರಲ್  ತನಗೆ ಕಂಟಕ ಆಗಿರುವ ಈ ವೈರಾಣು  ತಜ್ಞ  ಕರ್ನಲ್  ಸ್ಯಾಮ್  ಡೆನಿಯಲ್ಸ್ನನ್ನು  ಅವನ ಸೇವೆಯಿಂದ ವಜಾಗೊಳಿಸಿ  ಆಗಲೂ ಬಗ್ಗದೆ  ಆ ಪ್ರಾಣಿ ಕಂಡು ಹಿಡಿದು  ಪ್ರತ್ತ್ಯೌಷಧಿ  ಸಂಶೋಧಿಸಿಯೇ   ತೀರುವೆ ಎಂದು  ಹೊರಡಲು ಅವನನ್ನು ಹಿಡಿಯಲು  -ವೈರಾಣು  ತಜ್ಞ  ಕರ್ನಲ್  ಸ್ಯಾಮ್  ಡೆನಿಯಲ್ಸ್ಗೆ  ಈ ವೈರಸ್ ಹತ್ತಿದೆ  ಸಿಕ್ಕರೆ ಹೇಳಿ-ಹುಡುಕಿ ಕೊಡಿ ಎಂದು ಘೋಷಣೆ ಮಾಡಿಸುವನು.
ವಿದೇಶದಿಂದ  ಬಂದ  ಆ ಮಂಗವನ್ನು  ಹುಡುಕಲು  ತಮ್ಮದೇ ಮಿಲಿಟರಿಯ ಹೆಲಿಕ್ಯಾಪ್ಟರ್ ಒಂದನ್ನು ಅಪಹರಿಸಿ  ಅದರಲ್ಲಿ ಪ್ರಯಾಣಿಸಿ  ಆ ಮಂಗವನ್ನು ಸಾಗಿಸಿದ ಹಡಗು  ಕಾಣದು ಹಿಡಿದು ಅಲ್ಲಿನವರನ್ನು ಕೇಳಿ -ಆ ಬಗ್ಗೆ  ಹೇಳಿದಾಗ  ಆ ಮಂಗದ  ಭಾವ ಚಿತ್ರವನ್ನು  ಕೊಡುವರು-ಅದನ್ನು ತಂದು ನ್ಯೂಯಾರ್ಕ್ನ ಎಲ್ಲ ಟೀ  ವಿ ಚಾನೆಲ್ಲು -ರೇಡಿಯೋಗಳಲ್ಲಿ  ಬಿತ್ತರಿಸಿ-ಆ ತರಹದ ಮಂಗ ಎಲ್ಲಿಯಾದರೂ ಕಾಣಿಸಿದರೆ  ತಿಳಿಸುವಂತೆ ಕೊರುವರು..
 
ಆ ಮಂಗ  ಊರಿಂದ ಆಚೆ ಇರುವ ಒಂದೇ ಮನೆಯತ್ತ ಸಾಗಿ  ಅಲ್ಲಿ ಆಟವಾಡುವ  ಒಬ್ಬ ಹುಡುಗಿಯ ನೋಡಿ  ಅವಳೂ ಅದನ್ನು ಇಷ್ಟ ಪಟ್ಟು ಅದರ ಜೊತೆ ಆಟ ಆಡುವಳು..ಹೀಗೆ 1-2 ದಿನಗಳು ಕಳೆದು  ತನ್ನ ಮಗಳನ್ನು ಏನು ಮಾಡುತ್ತಿರುವಳು ನೋಡುವ ಎಂದು ಒಳ ಬಂದ ತಾಯಿ-ತನ್ನ ಮಗಳು ಮಂಗ ಒಂದರ ಚಿತ್ರ ಬಿಡಿಸುತ್ತಿರುವ್ದು -ಮತ್ತು ಆ ಮಂಗ ಇದೀಗ ತಾನೇ ತಾ ಕೇಳಿದ  ನೋಡಿದ  ವೈರಸ್ ಪ್ರಸಾರಿಸುವ  ಕಿಡಿಗೇಡಿ ಮಂಗ ಎಂದು ತಿಳಿದು ಆ ಮಂಗ ಎಲ್ಲಿ  ಎಂದು ಕೇಳುವಳು-ಆ ಮಂಗ ಸಿಕ್ಕ ಬಗ್ಗೆ  ತಾ ಅದರ ಜೊತೆ ಆಟವಾಡಿದ ಬಗ್ಗೆ ಮಗಳು ಹೇಳಿದ್ದು ಕೇಳಿ ತಾಯಿಗೆ  ಇರುವ ತನ್ನೊಬ್ಬಳೇ  ಮಗಳು  ಆ ವೈರಸ್ಗೆ ಬಲಿ ಆಗುವಳು ಎಂಬ ದುಖ. ಆ ಮಂಗ ತಮ್ಮ ಮನೆ ಹತ್ತಿರವಿದೆ  ತನ್ನ ಮಗಳು ಕರೆದರೆ ಆ ಮಂಗ  ಬರುವದು ಎಂದು ಹೇಳಿದಾಗ- ವೈರಾಣು  ತಜ್ಞ  ಕರ್ನಲ್  ಸ್ಯಾಮ್  ಡೆನಿಯಲ್ಸ್ ಮತ್ತು ಅವನ  ಒಬ್ಬ ಸಹಚರ  ಆ ಮಂಗವನ್ನು ಸೆರೆ ಹಿಡಿಯಲು  ಹೆಲಿಕ್ಯಾಪ್ಟರ್ನಲ್ಲಿ  ಆ ಮನೆಯತ್ತ ಧಾವಿಸುವರು. ಈ ಮಧ್ಯೆ  ಈ ರೋಗಕೆ ಚಿಕತ್ಸೆ ಕೊಡುತ್ತಿರುವ -ಆಗಾಗ ವೈರಸ್ ನಿರೋಧಕ -ನಾಶಕ  ರೂಂ ಒಳ ಹೊಕ್ಕು  ಶುಚಿ ಆಗಿ ಹೊರ ಬರುವ  ತಜ್ಞ ವೈದ್ಯರೊಬ್ಬರ  ವಸ್ತ್ರ ಹರಿದು ಅವರಿಗೂ ರೋಗ ಹಬ್ಬುವ್ದು-ಆಮೇಲೆ ವೈರಾಣು  ತಜ್ಞ  ಕರ್ನಲ್  ಸ್ಯಾಮ್  ಡೆನಿಯಲ್ಸ್ನ ಮಾಜಿ ಪತ್ನಿಗೂ ಹಬ್ಬಿ -ವೈದ್ಯರೇ -ತಜ್ನರೆ ದಿಕ್ಕುಗೆಟ್ಟು ಕೂರಲು  ಜನ ರ ದಿಗಿಲು -ಆಕ್ರಂದನ- ರೋದನ -ಅಸಹನೀಯತೆ -ಧಿಕ್ಕಾರದ ಕೂಗು  ಮುಗಿಲು ಮುಟ್ಟುವುದು.
 
ಆ ಮಂಗದಿಂದ  ನ್ಯೂಯಾರ್ಕ್  ಸಿಟಿಯ  ಈ  ಪ್ರಾಂತ್ಯಕ್ಕೆ ಹಬ್ಬಿದ   ಈ  'ಮೊಟಾಬ'  ವೈರಸ್  ನಿಯಂತ್ರಿಸಲು  ಮಿಲಿಟರಿ ಮತ್ತು  ಸರಕಾರ ತಗೆದುಕೊಳ್ಳುವ  ಕ್ರಮಗಳು   ಒಂದೆರಡಲ್ಲ ..ಆ ವೈರಸ್ ನಿಯಂತ್ರಿಸಲು  ಸಾಧ್ಯವಾಗುವ ಎಲ್ಲ ವಿಧಾನಗಳನ್ನು  ನಿರ್ದ್ಯಾಕ್ಷಿಣ್ಯ ವಾಗಿ  ಕಟೋರವಾಗಿ ಜಾರಿಗೊಳಿಸುವರು .
ಅವರ  ಆ  ಎಲ್ಲ  ವಿಧಾನಗಳು ನಿಷ್ಫಲವಾಗಿ ಈ ರೋಗ ನಿಯಂತ್ರಿಸಲು ಆಗದೆ  ಕೊನೆಗೆ    ಎಂಥಾ ಘೋರ ನಿರ್ಣಯಕ್ಕೆ  ಬರುವರು ಗೊತ್ತೇ?
ಮೊದಲು ಜೈರೆಯಲ್ಲಿ  ಬಾಂಬ್ ಹಾಕಿ  ಆ ವೈರಸ್ ಪೀಡಿತರು ಮತ್ತು ಆ ಬಗ್ಗೆ ಗೊತ್ತಿರುವವರನ್ನು  ನಿರ್ನಾಮ ಮಾಡಿದ ಹಾಗೆ  ಈ ಪ್ರಾಂತ್ಯದಲ್ಲೂ ಬಾಂಬ್ ಹಾಕಿ  ವೈರಸ್ ಮತ್ತು ಪೀಡಿತರನ್ನು  ನಿರ್ನಾಮ ಮಾಡುವ ಎಂದು ಸ್ವತಹ  ಅಮೇರಿಕ ಅದ್ಯಕ್ಷರೆ  ಆ ಆದೇಶಕ್ಕೆ  ಸಹಿ ಹಾಕುವರು-ಮತ್ತು ಇಡೀ ಪ್ರಾಂತ್ಯಕ್ಕೆ  ಬಾಂಬ್ ಹಾಕಲು ಎರಡು  ವಿಮಾನಗಳು  ಹೊರಡುವವು .
 
ಮುಂದೇನು?
 
ಆ ತುಂಟ-ರೋಗ ಪೀಡಿತ-ಪ್ರಸಾರಕ   ಮಂಗ ಹಿಡಿಯಲು ಸಾಧ್ಯವಾಯ್ತೆ?
ರೋಗ ಹಬ್ಬಿದ  ಪ್ರಾಂತ್ಯವನ್ನು  ಬಾಂಬ್ ಹಾಕಿ ವೈರಸ್ ಮತ್ತು ರೋಗ ಪೀಡಿತರ  ನಿರ್ನಾಮಕ್ಕೆ  ದೇಶದ ಅದ್ಯಕ್ಷರು ಸಹಿ ಹಾಕಿದ್ದರಿಂದ  ಅಲ್ಲಿ ಬಾಂಬ್  ಹಾಕುವರೆ? ಎಂಬ ಕುತೂಹಲ ನಿಮ್ಮ ಮನದಲ್ಲಿ  ಮೂಡಿದ್ದರೆ ...
ಆ ಸಿನೆಮ ನೋಡಿ...
 
ಇಡೀ ಚಿತ್ರವನ್ನು ತೆಗೆದ ರೀತಿ-ನಟವರ್ಗ -ತಂತ್ರಜ್ನರ  ಶ್ರಮ  -ಚಿತ್ರದಲ್ಲಿ  ಪ್ರತಿ  ಹಂತದಲ್ಲೂ ಕಾಣಿಸುವುದು-ಅನುಭವಕ್ಕೆ ಬರುವದು.
ಶುರುವಿನಿಂದ ಕೊನೆವರೆಗೆ  ಮುಂದೇನು? ಮುಂದೇನು?ಎಂದು ಕುತೂಹಲ ಮೂಡಿಸಿ  ಆ ಹಾಳು  ಮಂಗ  ಸಿಗಲಿ ಎಂದು ನಾವ್ ಬಯಸದೆ ಇರೆವು...!!
ಪ್ರಾರ್ಥನೆ ಫಲ ನೀಡುವುದೇ?
ಸಿನೆಮ ನೋಡಿ..
ಇಡೀ ಚಿತ್ರವೇ ವಿಶೇಷವಾಗಿದ್ದು  ಅದ್ಭುತವಾಗಿದೆ ..
 ಆದರೂ ಕೆಲ ಗಮನ ಸೆಳೆವ ಸನ್ನಿವೇಶಗಳು.
 
1. ಈ ವೈರಸ್ ಮೊದಲು ಬಯಲಿಗೆ ಬಂದಾಗ  ಅಲ್ಲಿನವರಿಗೆ ಆಗುವ  ಭಯ -ಅವರ ನರಳಿಕೆ -ಆ ಬಿಡಾರದ  ಮೇಲೆ ಬಾಂಬು ಹಾಕುವ ದೃಶ್ಯ.
2. ಈ ವೈರಸ್ ಮತ್ತೆ ಅದೇ ಪ್ರಾಂತ್ಯದಲ್ಲಿ (ಜೈರೆ ದೇಶದ ) ವ್ಯಾಪಿಸಿ  ಆ ಬಗ್ಗೆ ವರಧಿ ತರಲು  ಹೋಗುವ  ವೈರಾಣು  ತಜ್ಞರಿಗೆ ಅಲ್ಲಿ ಕಾಣಿಸುವ  ದೃಶ್ಯಗಳು-ಮಿಲಿಟರಿಯ  ಅಟ್ಟಹಾಸ.
3. ವೈರಸ್ ಪೀಡಿತ  ಪ್ರದೇಶದ ವರದಿ ಮತ್ತು ಆ ವೈರಸ್ ಇಲ್ಲಿಗೂ (ನ್ಯೂಯಾರ್ಕ್-ಅಮೇರಿಕ )ವ್ಯಾಪಿಸಬಹುದು. ಇಡೀ ಜಗತ್ತಿಗೆ ಹಬ್ಬಬಹುದು ಎಂದ ವೈರಾಣು  ತಜ್ಞ ನ ಮಾತು ಅಲಕ್ಷ್ಯ ಮಾಡಿ ಬಯ್ದು - ಈ ವಿಸ್ಮಯದ ಬಗ್ಗೆ  ಎಲ್ಲೂ ಬಾಯ್ ಬಿಡಬೇಡ   ಎಂದು ಹೇಳುವ ದೃಶ್ಯ.
4. ವೈರಸ್ ಪೀಡಿತ ಪ್ರಯೋಗಾಲಯದ  ಪ್ರಾಣಿ-ಮಂಗವನ್ನು ಕದ್ದು  ಹೊತ್ತೊಯ್ದು  ಅದನ್ನು ಗಡಿ ದಾಟಿಸುವ  ದೃಶ್ಯ 
5. ಸಾಕು ಪ್ರಾಣಿಗಳನ್ನು ಮಾರುವ -ಕೊಳ್ಳುವ  ವ್ಯಕ್ತಿ ತಾ ಆ ಕೀಟಲೆಯ-ಕ್ರೂರವಾಗಿ ವರ್ತಿಸುವ  ಮಂಗವನ್ನು  ಕೊಲ್ಲುವುದಿಲ್ಲ -ಇದನ್ನು ಬೇರೆ ಕಡೆ ಒಯ್ದು ಮಾರು ಎಂದು ಹೇಳುವ ಅದು ತಂದ  ಕೇಳಿ ಆ ವ್ಯಕ್ತಿ ಹತಾಶೆಯಿಂದ  ಅದನ್ನು  ಆದಷ್ಟು ಬೇಗ ಎಲ್ಲಿಯಾದರೂ ಬಿಟ್ಟು ಅದರಿಂದ ಕಳಚಿಕೊಳ್ಳಬೇಕು ಎಂದು ನ್ಯೂಯಾರ್ಕ್ನ  ಪ್ರಾಂತ್ಯವೊಂದರ ಅಡವಿಯಲಿ ಬಿಡುವ -ಆ ಪ್ರಾಣಿ ಒಮ್ಮೆ ಹಿಂತಿರುಗಿ ನೋಡುವ ದೃಶ್ಯ.
6. ಅದು ತಂದ ವ್ಯಕ್ತಿಗೆ ಅವನ ಪ್ರೇಯಸಿಗೆ- ಅದು ಮಾರಲು ಒಯ್ದ ಅಂಗಡಿಯ ಮಾಲೀಕನಿಗೆ  ವೈರಸ್ ವ್ಯಾಪಿಸಿ  ಆಸ್ಪತ್ರೆಯಲಿ  ಈ ವೈರಸ್ ಬಗ್ಗೆ  ಅಧಿಕ್ರತವಾಗಿ ಗೊತ್ತಾಗಿ ಆಗ  ವೈದ್ಯರು-ತಜ್ಞರು-ಮಿಲಿಟರಿ-ಸರಕಾರಕ್ಕೆ ಆಗುವ ಆಘಾತ.
7. ಇಡೀ ಪ್ರಾಂತ್ಯಕ್ಕೆ  ರೋಗ ಹಬ್ಬಿ-ನಿಯಂತ್ರಿಸಲು ಆಗದೆ -ಈ ಮೊದಲೇ ಕಂಡು ಹಿಡಿದ ಔಷಧಿಯೂ  ಪರಿಣಾಮಕಾರಿ ಆಗದೆ ವೈದ್ಯರು  ಹತಾಶೆಯಿಂದ  ಕೈ ಚೆಲ್ಲುವ -ವೈದ್ಯರು-ತಜ್ಞರಿಗೇ  ವೈರಸ್ ವ್ಯಾಪಿಸಿ  ಅಸ್ವಸ್ಥರಾಗಿ  ಇನ್ಯಾರು ನಮಗೆ ದಿಕ್ಕು ಎಂದು ಸಾಮಾನ್ಯ ಜನ  ಯೋಚಿಸುವ  -ಆ ಧಿಕ್ಕೆಟ್ಟ  ಸ್ಥಿತಿಯ ದೃಶ್ಯಗಳು.
8.ಈ ವೈರಸ್ ರಹಸ್ಯ-ಅದಕ್ಕೆ ಔಷಧಿ ಗೊತ್ತಿದ್ದೂ-ಹಿಂದೊಮ್ಮೆ  ಈ ರಹಸ್ಯ ಬಯಲಾಗದೆ ಇರಲಿ ಎಂದು  ಬಾಂಬ್ ಹಾಕಿಸಿದೆ ಎಂದು  ಬ್ರಿಗೇಡಿಯರ್ ಹೇಳುವ ಅದು ಕೇಳಿ ವೈರಾಣು  ತಜ್ಞಗೆ ಆಗುವ  ಆಘಾತ..
9.ತನ್ನ ಮಗು ಆ ವೈರಸ್ ಪೀಡಿತ  ಪ್ರಸಾರಕ ಮಂಗದ ಸಹವಾಸ ಮಾಡಿರುವಳು ಎಂದು ತಿಳಿದಾಗ ತಾಯಿಗೆ ಆಗುವ ಆಘಾತ..-ಇನೇನು ಸಿಕ್ಕಿತು ಎಂದು ಸ್ವಲ್ಪದರಲ್ಲೇ  ಪಾರಾಗುವ  ಕೀಟಲೆ-ಪೀಡೆ ಮಂಗ ಎಸ್ಕೇಪ್ ಆಗುವ ದೃಶ್ಯಗಳು.
10.ತನ್ನ ಮಾಜಿ ಹೆಂಡತಿ  ಮತ್ತು ತಜ್ಞ ವೈದ್ಯನಿಗೆ ಆ ವೈರಸ್  ವ್ಯಾಪಿಸಿದೆ ಎಂದು -ಮತ್ತು ತನ್ನನ್ನು ಹೇಗಾದರೂ ಮಾಡಿ ಹಿಡಿದು  ಯಮಪುರಿಗೆ ಅಟ್ಟಲು  ಬ್ರಿಗೇಡಿಯರ್ ಸಜ್ಜಾಗಿ  ಕೊನೆಗೆ ಇಡೀ ನಗರವನ್ನು ಬಾಂಬ್ ಹಾಕಲು  ನಿರ್ಧರಿಸಿದ್ದು ಕೇಳಿ  ವೈರಾಣು  ತಜ್ಞ -ತನ್ನ ಆ ಮಂಗ ಹುಡುಕುವ -ಪ್ರತ್ತ್ಯೌಷಧಿ  ಕಂಡು ಹಿಡಿಯುವಲ್ಲಿ ತಾ ಜೀವಂತ  ಬದುಕಲು ಪಡುವ  ಶ್ರಮ..
 
ಕಾಕತಾಳೀಯ ಎನ್ನಬೇಕೆ?
 
ಈ ಚಿತ್ರ ಬಿಡುಗಡೆ ಆಗಿ ಕೆಲ ತಿಂಗಳಲ್ಲಿ ಆ ಜೈರೆಯಲ್ಲಿ ಎಬೋಲ (ಸಾಂಕ್ರಾಮಿಕ ರೋಗದ ವೈರಸ್)ವ್ಯಾಪಿಸಿ ಹಲವರು ಮರಣಿಸಿದರು.
ಈ ಚಿತ್ರದ ಯಶಸ್ಸಿಗೆ -ಪ್ರಚಾರಕ್ಕೆ   ಈ ಘಟನೆಯೂ  ಕಾರಣವಾಯ್ತು.
ಆದ್ರೆ ಆ ವೈರಸ್  ಪ್ರಸಾರಕ್ಕೆ  ಈ ಚಿತ್ರಕ್ಕೆ ಸಂಬಂಧಿಸಿದವರು ಯಾರೂ ಕಾರಣರಾಗಿರಲಿಕ್ಕಿಲ್ಲ  ಅನ್ಸುತ್ತೆ..!
 
ಈ ಚಿತ್ರ ಬಿಡುಗಡೆ ಆಗಿ ಜನರೂ ನೋಡಿ  ಪ್ರಭಾವಿತರಾದ -ಎಚ್ಚೆತ್ತ ಜನ-ಒಂದೊಮ್ಮೆ ಈ ತರಹದ ರೋಗ  ಹಬ್ಬಿದರೆ  ಅದನ್ನು ನಿಯಂತ್ರಿಸಲು  ನಮ್ಮ ದೇಶಕ್ಕೆ-ಜನ ನಾಯಕರಿಗೆ -ತಜ್ಞರಿಗೆ-ವೈದ್ಯರಿಗೆ  ಸಾಧ್ಯವಿದೆಯೇ ?
ಔಷಧಿ  ಸಾಮಾಗ್ರಿ-ಸಲಕರಣೆಗಳು-ಸುಸಜ್ಜಿತ ಆಸ್ಪತ್ರೆಗಳು ಇವೆಯೇ?
ಎಂದು ಸರಕಾರವನ್ನು ಪ್ರಶ್ನಿಸಿ  ಸರಕಾರ ಆ ಬಗ್ಗೆ  ಸ್ಪಷ್ಟೀಕರಣ ನೀಡಬೇಕಾಗಿ ಬಂದದ್ದು
 
ವಿದೇಶಗಳಲ್ಲಿ   ಅದೆಲ್ಲವೂ ಸಾಧ್ಯ- ನಮ್ ದೇಶದಲ್ಲಿ?
 
ಚಿತ್ರದಲ್ಲಿ  ಯಾವುದೇ  ಮುಜುಗರದ ಸನ್ನಿವೇಶಗಳು ಇಲ್ಲ! 
ಶುರುವಿನಿಂದ  ಕೊನೆವರ್ಗೆ  ಮುಂದೇನು? ಎಂದು ಚಡಪಡಿಸುತ್ತಾ  ಆ ಹಾಳು ಮಂಗ -ಪೀಡೆ  ಸಿಗಲಿ ಎನ್ನುತ್ತಾ ನೋಡಿ..
 
ಚಿತ್ರಮೂಲ:
 
ವಿಕಿಪೀಡಿಯ:
 
ಅಯ್ .ಎಂ.ಡಿ .ಬಿ ನನ್ನ ಬರಹ:
 
ಅಯ್ .ಎಂ.ಡಿ .ಬಿ:
 
ವೀಡಿಯೊ ಟ್ರೇಲರ್ :
 
 
 
 
 
 
 
 
 
 
 
Rating
No votes yet

Comments

Submitted by partha1059 Mon, 01/07/2013 - 20:30

ಸಪ್ಗಗಿರಿಯವರೆ
ಅ0ಗ್ಲಬಾಷೆಯಲ್ಲಿ ಅವರು ಆರಿಸಿಕೊಳ್ಳುವ‌ ವಸ್ತು ವೈವಿದ್ಯ ಇಷ್ಟವಾಗುತ್ತೆ. ಕನ್ನಡದಲ್ಲಿ ಈ ರೀತಿ ವಿಷ್ಯವನ್ನು ಆದರಿಸಿ ಸಿನಿಮಾ ತೆಗೆಯಲು ಸಾದ್ಯವೆ ??? ಅದು ಪ್ರಶ್ನೆಯೆ , ಇಲ್ಲಿ ಇನ್ನು ಪ್ರೀತಿ ಪ್ರಣಯ‌ ಕೊಲೆ ದ್ವೇಷವನ್ನು ಹೊರತುಪಡಿಸಿ ಯಾವ‌ ವಿಷಯವು ಸಿಗಲ್ಲ ಅನ್ನುವುದು ಆಶ್ಚರ್ಯ‌.
ಹಾಗೆ ನೀವು ಆರಿಸಿಕೊಳ್ಳುವ‌ ಸಿನಿಮಾಗಳು ವೈವಿದ್ಯತೆಯಿ0ದ‌ ಕೂಡಿದೆ

Submitted by sathishnasa Tue, 01/08/2013 - 10:49

ವೆಂಕಟೇಶ್ ರವರೇ ನಿಮ್ಮ ವಿಶ್ಲೇಷಣೆ ಎದುರಿಗೆ ಸಿನಿಮಾ ನೋಡಿದಂತೆ ಭಾಸವಾಗುತ್ತದೆ ಆದರೆ ಕಡೆಯಲ್ಲಿ ಏನಾಗುತ್ತೆ ತಿಳಿಸಿದ್ದರೆ ಚನ್ನಾಗಿತ್ತು. ಧನ್ಯವಾದಗಳೊಂದಿಗೆ ....ಸತೀಶ್

Submitted by venkatb83 Tue, 01/08/2013 - 19:36

In reply to by sathishnasa

ಸತೀಶ್ ಜೀ..
ಆ ಚಿತ್ರದ ಕಥೆಯ ಅಂತ್ಯ ನಮ್ಮ(ನಿಮ್ಮ) ಊಹೆಗೆ ಹತ್ತಿರದಲ್ಲಿದೆ..!!
ಆದರೂ ನೀವು ಒಮ್ಮೆಯಾದರೂ ಆ ಸಿನೆಮ ನೋಡಬೇಕು ಎಂದು ನಾ ಹೇಳುವೆ..!
ಪ್ರತಿಕ್ರಿಯೆಗೆ ನನ್ನಿ

ಶುಭವಾಗಲಿ..

\|

Submitted by venkatb83 Tue, 01/08/2013 - 19:35

ಗುರುಗಳೇ -
ಭಾರತದ ಚಿತ್ರರಂಗದಲ್ಲಿ ನಮ್ಮ ಕನ್ನಡ ಭಾಷೆಯ ಚಿತ್ರರಂಗ ಮಾತ್ರ ಈ ಚೂರಿ -ಚಾಕು-ಮಚ್ಚು-ಲಾಂಗ್....
ಅಣ್ಣ ತಂಗಿ-ಕಣ್ಣೀರು ಸುತ್ತಮುತ್ತ.......ಸುತ್ತುತ್ತಿದೆ.....:(((
ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ...

\|