ಕಂಗ್ಲಿಷ್ ಕಾಮಿಡಿ :)
೧: ನಮ್ಮ ಬಡಾವಣೆಯ ಹತ್ತಿರ ಕಲ್ಕೆರೆ ಅಂತ ಒಂದ್ extension (ಮೊದಲಿಗೆ ಅದೊಂದು ಹಳ್ಳಿ.) ಅಲ್ಲಿ ಪ್ರತಿ ಭಾನುವಾರವೂ ಸಂತೆ ನಡೆಯುತ್ತದೆ.
ಅಲ್ಲಿಗೆ ಹೋದಾಗ ನಡೆದದ್ದು: ಒಬ್ಬ ಹುಡುಗ ಒಂದು ಮೂಟೆ ಹುರಳಿಕಾಯನ್ನು ಕೆಳಗೆ ಹಾಸಿದ್ದ ಕ್ಯಾನ್ವಾಸ್ ಮೇಲೆ ಹಾಕುತ್ತಿದ್ದ. ನಾನು "ಒಂದು kg ಹುರಳಿಕಾಯಿ ಎಷ್ಟು" ಎಂದೆ. ಅದಕ್ಕವನು "ಹುರಳಿಕಾಯಿ ಇಲ್ಲ" ಅಂದ!!
ತಕ್ಷಣ ಹೊಳೆಯಿತು. ಹೋಗ್ಲಿ ಬೀನ್ಸ್ ಹೇಗೆ? ಅಂದೆ. ಕೂಡಲೇ ತಕ್ಕಡಿ ತೊಗೊಂಡು "೨೬ ರುಪಾಯಿ kg , ಎಷ್ಟ್ ಕೊಡಲಿ? "
೨. ನಾನು ನನ್ನ ಗೆಳತಿ ಒಮ್ಮೆ ಆಟೋನಲ್ಲಿ ಹೋಗುತ್ತಿದ್ದೆವು. ಅವಳು "ಸಿಗ್ನಲ್ ನಲ್ಲಿ ಬಲಕ್ಕೆ ಹೋಗಿ" ಅಂದ್ಲು. ಅದಕ್ಕೆ ಡ್ರೈವರ್ "ರೈಟ್ ಆ ಲೆಫ್ತ ಸರಿಯಾಗಿ ಹೇಳಿ" !!
Rating
Comments
ಉ: ಕಂಗ್ಲಿಷ್ ಕಾಮಿಡಿ :)
ಉ: ಕಂಗ್ಲಿಷ್ ಕಾಮಿಡಿ :)