ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)
ಕಷ್ಟಗಳು ಬಂದರೆ ಬಿ.ಟಿ.ಎಸ್. ಬಸ್ಸು ಬಂದ ಹಾಗೆ ಬಂದರೆ ಎಲ್ಲಾ ಒಟ್ಟಿಗೇ ಬಂದು ಬಿಡುತ್ವೆ ಇಲ್ಲಾಂದ್ರೆ ಒಂದೂ ಬರೋಲ್ಲ ಅಂತಾ ಬೀchi ಅವರು ಈ ಆಧುನಿಕ ಕಾಲಕ್ಕೆ ಸೂಟ್ ಆಗುವ ಹಾಗೆ ಹೇಳಿದ್ದರು. ಆದರೆ ಇದು ಸಾರ್ವಕಾಲಿಕ ಸತ್ಯ ಅನ್ನುವುದೇ ವಿಪರ್ಯಾಸ! ಇರಲಿ ಈಗ ಮೂಲ ವಿಷಯಕ್ಕೆ ಬರೋಣ, ಕಷ್ಟಗಳು ಒಬ್ಬ ವ್ಯಕ್ತಿಗೆ ಹೇಗೆ ಸಾಲಾಗಿ ಬಂದವು ಮತ್ತು ಅವು ಹೇಗೆ ಪರಿಹಾರವಾದವು ಎಂದು ತಿಳಿಸಿ ಹೇಳುವ ಒಂದು ಜಾನಪದ ಕತೆ ಆಂಧ್ರ ಪ್ರದೇಶದ ರಾಯಲಸೀಮೆಯಲ್ಲಿ ಪ್ರಚಲಿತದಲ್ಲಿದೆ. ಅದು ಇರುವುದು ಆಂಧ್ರ ಪ್ರದೇಶದಲ್ಲಾದರೂ ಅಲ್ಲಿ ಕರ್ನಾಟಕದ ಸಾಂಸ್ಕೃತಿಕ ಛಾಪು ಮತ್ತು ಅಲ್ಲಿಯ ಭಾಷೆಯಲ್ಲಿ ಅನೇಕ ಕನ್ನಡ ಪದಗಳು ಹಾಸುಹೊಕ್ಕಾಗಿವೆ ಎನ್ನುವುದೂ ಒಂದು ಸೋಜಿಗದ ಸಂಗತಿ. ಕನ್ನಡ ಪದಗಳೂ ಅಲ್ಲಿ ಹಾಸುಹೊಕ್ಕಾಗಿರುವುದನ್ನು ಈ ನೀತಿ ಕಥೆಯ ಘೋಷ ವಾಕ್ಯ “ಕಂಠಮುದಾಕಾ ವಚ್ಚಿಂದಿ, ಶಂ.....ಲಾಗ ವೆಳ್ಳಿಂದಿ” ತಿಳಿಸಿಕೊಡುತ್ತದೆ. ಕತೆಯ ಮೂಲಕ್ಕೆ ಹೋಗುವ ಮುನ್ನ ಇದು ಜ್ಞಾಪಕಕ್ಕೆ ಬಂದದ್ದು ಶ್ರೀಯುತ ಸಪ್ತಗಿರಿವಾಸಿಯವರು ಇತ್ತೀಚೆಗೆ ಸಂಪದದಲ್ಲಿ ಹಂಚಿಕೊಂಡ ಚಿತ್ರವೊಂದನ್ನು ನೋಡಿದ ಮೇಲೆ. ಅ ಚಿತ್ರಕ್ಕಾಗಿ ಈ ಕೊಂಡಿಯನ್ನು ನೋಡಿ: http://sampada.net/image/38220
ಒಬ್ಬ ರೈತನಿದ್ದ ಅವನ ಬೆಳೆಗಳೆಲ್ಲಾ ಒಣಗುವ ಹಂತಕ್ಕೆ ಮುಟ್ಟಿದ್ದವು. ಅದಕ್ಕೆ ತುರ್ತಾಗಿ ನೀರುಣಿಸಬೇಕಾಗಿತ್ತು ಮತ್ತು ಅದಕ್ಕಾಗಿ ದೂರದ ಕೆರೆಯಿಂದ ನೀರನ್ನು ಕಾಲುವೆಗಳನ್ನು ಸರಿಪಡಿಸುವುದರ ಮೂಲಕ ತರಬೇಕಾಗಿತ್ತು. ಏನು ಮಾಡಬೇಕೆಂದು ಆಲೋಚಿಸುತ್ತಿರುವುದರಲ್ಲಿ ನಿನ್ನನ್ನು ನೋಡಲು ಪರಸ್ಥಳದಿಂದ ಯಾರೋ ಇಬ್ಬರು ವ್ಯಕ್ತಿಗಳು ಬಂದಿದ್ದಾರಂತೆ, ಅವರು ನಿನ್ನೊಡನೆ ಜರೂರಾಗಿ ಮಾತನಾಡಬೇಕಂತೆ ಎನ್ನುವ ಸುದ್ದಿ ಹೊತ್ತು ಅವನ ಪಕ್ಕದ ಮನೆಯಾತ ಅವನಿರುವ ಹೊಲಕ್ಕೆ ಬಂದ. ಸಧ್ಯಕ್ಕೆ ತನ್ನ ಬೆಳೆಯ ಬಗ್ಗೆ ಚಿಂತಿಸುವುದನ್ನು ಬಿಟ್ಟು ತನ್ನ ಮನೆಯ ಕಡೆಗೆ ನಡೆದ, ನೋಡಿದರೆ ಅವರು ಬೇರೆ ಯಾರೂ ಆಗಿರದೆ ತನಗೆ ಹಿಂದೆ ಸಾಲಕೊಟ್ಟ ವ್ಯಕ್ತಿಗಳಾಗಿದ್ದರು ಮತ್ತು ಸಾಲ ವಸೂಲಿಗಾಗಿ ಬಂದಿದ್ದರು. ಅವರು ಇವನನ್ನು ಈ ಕುರಿತಾಗಿ ಕೇಳಿದಾಗ, ಬಹಳ ದೂರದಿಂದ ದಣಿದು ಬಂದಿದ್ದೀರ, ಮೊದಲು ನಮ್ಮ ಮನೆಯಲ್ಲಿ ಊಟ ಮಾಡಿ ಸುಧಾರಿಸಿಕೊಳ್ಳಿ ನೋಡೋಣ ಎಂದು ಅವರಿಗೆ ಹೇಳಿದ. ಅಷ್ಟರಲ್ಲಿ ಅವನ ಮಗಳಿಗೆ ಹೆರಿಗೆ ನೋವು ಕಾಣಿಸಿಕೊಂಡಿತು, ಸರಿಯೆಂದು ಸೂಲಗಿತ್ತಿಯನ್ನು ಕರೆದುಕೊಂಡು ಬರಲು ಊರೊಳಗೆ ಹೋದ. ಬೇರೊಂದು ಹೆರಿಗೆಗೆ ಹೋಗಿದ್ದ ಸೂಲಗಿತ್ತಿಗಾಗಿ ಕಾಯ್ದು ಅವಳನ್ನು ಕಷ್ಟಪಟ್ಟು ಜೊತೆಮಾಡಿ ಕರೆದುಕೊಂಡು ಬಂದ. ಮನೆಗೆ ಬಂದು ನೋಡುತ್ತಾನೆ ಎಂದೂ ಮನೆಗೆ ಬಾರದ ಅಳೀಮಯ್ಯ ಬಂದು ಕುಳಿತಿದ್ದಾನೆ, ವಿಷಯವೇನೆಂದು ಕೇಳಿದಾಗ ಅವನಿಗೆ ಮದುವೆಯಲ್ಲಿ ಮಾತುಕೊಟ್ಟಂತೆ ಯಾವುದೋ ಒಂದು ಚಿನ್ನದ ಸರವನ್ನು ಈ ಮಾವಯ್ಯ ಅವನಿಗೆ ಇನ್ನೂ ಕೊಟ್ಟಿರಲಿಲ್ಲ, ಅದರ ವಸೂಲಿಗಾಗಿ ಈ ಅಳೀಮಯ್ಯ ಬಂದಿದ್ದ. ತನಗೆ ಆ ಸರವನ್ನು ಕೊಟ್ಟರೆ ಸರಿ ಇಲ್ಲದಿದ್ದರೆ ನಿಮ್ಮ ಮಗಳನ್ನು ಇಲ್ಲೇ ಬಿಟ್ಟು ಹೋಗಲು ನಿರ್ಧರಿಸಿದ್ದೇನೆ ಎಂದು ಧಮಕಿ ಬೇರೆ ಹಾಕಿದ. ಇಷ್ಟರಲ್ಲಿ ಒಳಗೆ ಹೋದ ಸೂಲಗಿತ್ತಿ ಮಗು ಸ್ವಲ್ಪ ದೊಡ್ಡದಿರುವಂತೆ ಈ ಪರಿಸ್ಥಿತಿಯಲ್ಲಿ ಮಾಮೂಲಿ ಹೆರೆಗೆಯಾಗುವುದು ಕಷ್ಟ, ಆದ್ದರಿಂದ ಇದಕ್ಕೆ ಪರಿಹಾರ ಅಲ್ಲಿಂದ ಏಳೆಂಟು ಮೈಲಿ ದೂರದ ಹಳ್ಳಿಯಲ್ಲಿರುವ ಪಂಡಿತನ ಅವಶ್ಯಕತೆ ಇದೆ ಎಂದು ತಿಳಿಸಿದಳು. ಸರಿ ಎಂದು ಅಳಿಯನನ್ನು ಮನೆಯಲ್ಲಿ ಇರುವಂತೆ ತಿಳಿಸಿ, ತಾನು ದೂರದೂರಿಗೆ ಆ ಪಂಡಿತನನ್ನು ಕರೆತರಲು ಹೊರಟ.
ನೋಡಿ ಅದಕ್ಕೇ ಹೇಳುವುದು ಕಷ್ಟಗಳು ಬಂದರೆ ಸಾಲು ಸಾಲಾಗಿ ಬರುತ್ತವೆ ಎಂದು. ಮೊದಲು ಆ ರೈತನ ಹೊಲಕ್ಕೆ ಕಾಲುವೆಗಳನ್ನು ತೋಡಿ ತನ್ನ ಬೆಳೆಗಳಿಗೆ ನೀರುಣಿಸ ಬೇಕಾಗಿತ್ತು. ತದನಂತರ ಆ ಸಾಲಗಾರರು ಬಾಕಿ ವಸೂಲಿಗಾಗಿ ಬಂದರೆ ಇದು ಸಾಲದೆಂಬಂತೆ ತನ್ನ ಅಳಿಯನೂ ಈಗಲೇ ಬಂದು ವಕ್ರಿಸಿಕೊಂಡಿದ್ದಾನೆ. ಮತ್ತೊಂದು ಕಡೆ ನೋಡಿದರೆ ಮಗಳಿಗೆ ಹೆರಿಗೆ ನೋವು ಉಂಟಾಗಿ ಅವಳಿಗೆ ತ್ವರಿತವಾಗಿ ದೂರದೂರಿನಲ್ಲಿರುವ ಪಂಡಿತನ ಚಿಕಿತ್ಸೆ ಕೊಡಿಸಬೇಕಾಗಿದೆ. ಮೊದಲು ತನ್ನ ಮಗಳಿಗೆ ಅರ್ಜೆಂಟಾಗಿ ಜರುಗ ಬೇಕಾಗಿರುವುದುರ ಕಡೆ ಗಮನ ಕೊಡೋಣವೆಂದುಕೊಂಡು ಆ ಪಂಡಿತನನ್ನು ಕರೆತರಲು ದೂರದ ಊರಿಗೆ ಕಾಲ್ನಡಿಗೆಯಲ್ಲಿ ಹೊರಟ. ಅ ಪಂಡಿತನ ಊರು ಮುಟ್ಟುವ ಹೊತ್ತಿಗೆ ಮಧ್ಯಾಹ್ನ ನಾಲ್ಕು ಘಂಟೆಯಾಗಿತ್ತು. ಅವರ ಮನೆಗೆ ಹೋಗಿ ಸ್ವಲ್ಪ ನೀರು ಕುಡಿದು ಪಂಡಿತರ ಬಗ್ಗೆ ವಿಚಾರಿಸಿದ; ಆಗ ಅವರು ಹೇಳಿದ್ದನ್ನು ಕೇಳಿ ಇವನಿಗೆ ನೆಲ ಬಾಯ್ಬಿಟ್ಟಂತಾಯಿತು. ಅದೇನೆಂದರೆ ಪಂಡಿತನು ದೂರದಲ್ಲಿರುವ ತನ್ನ ಸಂಭಂದಿಕರ ಮದುವೆಗೆ ಕುಟುಂಬ ಸಮೇತ ಹೋಗಿರುವುದಾಗಿಯೂ ಅವನು ಬರುವುದು ಇನ್ನೂ ನಾಲ್ಕಾರು ದಿವಸಗಳಾಗುತ್ತದೆಂದೂ ತಿಳಿಸಿದರು. ಆ ರೈತ ಸ್ವಲ್ಪ ಹೊತ್ತು ತಲೆಮೇಲೆ ಕೈಹೊತ್ತುಕೊಂಡು ಕುಳಿತುಕೊಂಡ. ಆಮೇಲೆ ದೇವರು ಇಟ್ಟಂತಾಗಲಿ ಎಂದುಕೊಂಡು ತನ್ನ ಊರಿನ ದಾರಿ ಹಿಡಿದು ಹೊರಟ. ಊರಿಗೆ ಇನ್ನೇನು ಒಂದೆರಡು ಮೈಲು ದೂರವಿರಬೇಕು ಅಷ್ಟರಲ್ಲಿ ವಾತಾವರಣದಲ್ಲಿ ವಿಪರೀತ ಶಾಖವಿದ್ದದ್ದರಿಂದ ದಟ್ಟನೆ ಕಾರ್ಮೋಡ ಕವಿಯಲು ಪ್ರಾರಂಭವಾಯಿತು. ಮಳೆ ಹುಯ್ಯುವುದರೊಳಗೆ ತನ್ನ ಊರನ್ನು ಸೇರಿಕೊಳ್ಳಬೇಕೆಂದು ಊರಿನ ಕಡೆ ದುಡುದುಡು ಹೆಜ್ಜೆ ಹಾಕಿದ.
ಇತ್ತ ಪಂಡಿತನನ್ನು ಕರೆಯಲು ಹೋದ ರೈತ ಇಷ್ಟು ಹೊತ್ತಾದರೂ ಬರಲಿಲ್ಲ, ಅದರಲ್ಲಿ ಅವನ ಮನೆಗೆ ಅಳೀಮಯ್ಯ ಬೇರೆ ಬಂದಿದ್ದಾನೆ ಮತ್ತು ಅವನ ಮಗಳಿಗೆ ಹೆರಿಗೆ ಕಷ್ಟವಾಗಿ ಹೋಗಿದೆ ಅದರ ಸಲುವಾಗಿ ಅವನು ಪಂಡಿತನನ್ನು ಕರೆದುಕೊಂಡು ಬಂದನಂತರ ಹೆರೆಗೆ ಸುಸೂತ್ರವಾಗಿ ನಡೆಯುವ ಕಡೆ ಅವನ ಗಮನವಿರುತ್ತದೆ. ಆದ್ದರಿಂದ ಅವನಿಗಾಗಿ ಕಾಯುವುದರಲ್ಲಿ ಅರ್ಥವಿಲ್ಲವೆಂದುಕೊಂಡು, ಜೊತೆಗೆ ಮಳೆ ಬರುವ ಲಕ್ಷಣ ಕಂಡು ಬಂದಿದ್ದರಿಂದ ಆ ಸಾಲಗಾರರು ತಮ್ಮ ದಾರಿ ಹಿಡಿದು ಹೊರಟರು. ಅವರು ಹೊರಟ ಸ್ವಲ್ಪ ಹೊತ್ತಿಗೆ ಮಿಂಚು, ಗುಡುಗು ಸಹಿತ ಭಾರೀ ಮಳೆಯಾಗಲು ಪ್ರಾರಂಭವಾಯಿತು. ಆ ಗುಡುಗಿನ ಆರ್ಭಟಕ್ಕೆ ಹೆರಿಗೆಯಾಗಬೇಕಾಗಿದ್ದ ರೈತನ ಮಗಳಿಗೆ ಗಾಬರಿಯಾಗಿ ಅವಳ ಮೈಯ್ಯಲ್ಲಿನ ನರಗಳು ಸಡಲಿ ಹೆರಿಗೆ ಸುಸೂತ್ರವಾಗಿ ಆಯಿತು. ರೈತ ಮಳೆಯಿಂದ ಅರ್ಧಂಬರ್ದ ತೋಯ್ದು ತನ್ನ ಮನೆಯನ್ನು ಸೇರುತ್ತಿದ್ದಂತೆ ಮಗುವಿನ ಅಳು ಕೇಳಿಸಿತು. ಏನಾಯಿತೆಂದು ತಿಳಿದುಕೊಳ್ಳೋಣವೆಂದು ಆ ರೈತ ಅಂದುಕೊಳ್ಳುತ್ತಿರುವಷ್ಟರಲ್ಲಿ ಸೂಲಗಿತ್ತಿಯು ಪ್ರಸವದ ಕೋಣೆಯಿಂದ ಹೊರಬಂದು ಅವನಿಗೆ ಮೊಮ್ಮಗ ಹುಟ್ಟಿದ್ದಾನೆಂದು ತಿಳಿಸಿದಳು. ಮಗ ಹುಟ್ಟಿದ ಸಂತಸದಲ್ಲಿ ಅವನ ಅಳೀಮಯ್ಯ ತನ್ನ ಬಂಗಾರದ ಸರದ ಬಗ್ಗೆ ಮರೆತೇ ಹೋದ. ಆಗ ಪುಷ್ಕಳವಾಗಿ ಮಳೆ ಬಂದದ್ದರಿಂದ ರೈತನ ಹೊಲವೂ ಸಂಪೂರ್ಣ ಹಸಿಯಾಗಿ ಅವನಿಗೆ ನೀರು ಕಟ್ಟಬೇಕಾದ ಕಷ್ಟವೂ ತಪ್ಪಿ ಅವನ ಬೆಳೆ ಒಣಗುವ ಸಮಸ್ಯೆಯೂ ಪರಿಹಾರವಾಗಿತ್ತು. ಹೀಗೆ ಆ ರೈತನಿಗೆ ಕುತ್ತಿಗೆವರೆಗೆ ಬಂದ ಕಷ್ಟಗಳು ಹೇಳ ಹೆಸರಿಲ್ಲದಂತೆ ಮಂಗಮಾಯವಾಗಿದ್ದವು. ಆಗ ಹುಟ್ಟಿಕೊಂಡದ್ದೇ ಈ ಗಾದೆ “ಕಂಠಮುದಾಕ ವಚ್ಚಿಂದಿ ಶಂ.....ಲಾಗ ವೆಳ್ಳಿಂದಿ” (ಕಂಠದವರೆಗೆ ಬಂದದ್ದು, .....ಠದಂತೆ ಹೋಯಿತು). ಜಾನಪದ ಭಾಷೆಯೇ ಹಾಗೆ ಸ್ವಲ್ಪ ಅನಾಗರೀಕವೆನಿಸಿದರೂ ಅದರಲ್ಲಿ ಖಡಕ್ಕಾದ ಸ್ವಾರಸ್ಯವಿರುತ್ತದೆ.
Rating
Comments
ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)
In reply to ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ) by Chikku123
ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)
ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)
In reply to ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ) by modmani
ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)
ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)
In reply to ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ) by sathishnasa
ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)
ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)
In reply to ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ) by Jayanth Ramachar
ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)
ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)
In reply to ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ) by kavinagaraj
ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)
In reply to ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ) by Prakash Narasimhaiya
ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)
In reply to ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ) by kavinagaraj
ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)
ಉ: ಕಂಠದವರೆಗೆ ಬಂದದ್ದು........@ ಜೀ
In reply to ಉ: ಕಂಠದವರೆಗೆ ಬಂದದ್ದು........@ ಜೀ by venkatb83
ಉ: ಕಂಠದವರೆಗೆ ಬಂದದ್ದು........@ ಜೀ
ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)
In reply to ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ) by partha1059
ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)
In reply to ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ) by ಗಣೇಶ
ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)
In reply to ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ) by partha1059
ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)
ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)
In reply to ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ) by ksraghavendranavada
ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)
ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)
In reply to ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ) by ಭಾಗ್ವತ
ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)
ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)
In reply to ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ) by RAMAMOHANA
ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)
In reply to ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ) by Premashri
ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)
In reply to ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ) by RAMAMOHANA
ಉ: ಕಂಠದವರೆಗೆ ಬಂದದ್ದು......... (ರಾಯಲಸೀಮೆಯ ಜಾನಪದ ಕತೆ)