ಕಂದ

ಕಂದ

ಮುದ್ದು ಕ೦ದ ನೀನು,
ನಿನ್ನ ಪ್ರೀತಿ "ಅಮ್ಮ" ನಾನು
ಸಿಹಿ ಮುತ್ತು ನೀಡುವೆ
ಮುನಿಸು ನಿನ್ನ ಮರೆಸುವೆ,


ಚ೦ದ ಮಾಮ ಕೇಳು
ನಗುವು ಇಲ್ಲಿ ನೀಡು,
ಬಾರೂ ಮುದ್ದು ನೀನು
ನಿನ್ನ ನಗುವು ನನಗೆ ಜೇನು,


ಹೆಜ್ಜೆ ಮೇಲೆ ಹೆಜ್ಜೆ
ನಿನ್ನ ಪಾದಕೆ ಪುಟ್ಟ ಗೆಜ್ಜೆ
ಬಾರೂ ತು೦ಟ ನೀನು
ಬಿಟ್ಟು ಏಕೆ ಓಡುವೇ ಏನು


ಚುಕ್ಕಿ ಬಾನ ತು೦ಬ
ಬೆಳಕು ಹರಡುತಿರಲು
ಹಿಡಿದು ನಿನಗೆ ಕೊಡುವೆ
ಅ೦ಗೈಯ ನೀನು ಚಾಚು


ಕೋಪ ಏಕೆ ನಿನಗೆ
ಕೊಡುವೆ ಸಿಹಿಯ ತಿನಿಸು,
ಮುನಿಸು ನಿನ್ನ ಹುಸಿಯು
ನನಗೆ ತಿಳಿಯದೇನು


ಗುಮ್ಮ  ಇಲ್ಲೆ ಇರುವನು
ಹೆದರಿಸಿ ನಿನ್ನ ನಗುವನು,
ಅಳದೆ ನೀನು ಬ೦ದರೆ
ನನ್ನ ತುತ್ತೇ ನಿನಗೆ ಸೊಗಸು


ನಗುತ ನೀನು ಬರಲು
ಶಶಿಯು ಅವಿತು ಕುಳಿತನು
ಲಾಲಿ ನಾನು ಹಾಡುವೆ
ಮಲಗು ನೀನು ಮಗುವೆ

Rating
No votes yet