ಕಂಪ್ಯುಟರ್ ಭಾಷೆಗಳು ...(ಕ.ಕ.ಕ.-೪)
ಕಂಪ್ಯೂಟರ್ ೦ ಮತ್ತು ೧ ಅನ್ನು ಮಾತ್ರ ಅರ್ಥ ಮಾಡಿಕೊಳ್ಳುತ್ತದೆ . ಎಲ್ಲವನ್ನು ೦ ಮತ್ತು ೧ ಆಗಿಯೇ ಶೇಖರಿಸುತ್ತದೆ ಎಂದು ಕನ್ನಡದಲ್ಲಿ ಕಂಪ್ಯೂಟರ್ ಕಲಿಕೆಯ ಎರಡನೇ ಭಾಗದಲ್ಲಿ ನೋಡಿದೆವು . ಉದಾ. a , b , c, d ,... 1,2,3,.... ಇತ್ಯಾದಿ ಅಕ್ಷರಗಳನ್ನು 10010000, 11110001 , 01010101 ಎಂದೆಲ್ಲ ಆಗಿಯೇ ಅದು ಬಯಸುವದು.
೦ ಮತ್ತು 1 ರ ಭಾಷೆಯೇ ಕಂಪ್ಯುಟರ್ ಬಳಸುವ ಭಾಷೆ . ಅದೇ ದ್ವಿಮಾನ ಭಾಷೆ ಅಥವಾ ಬೈನರಿ ಲ್ಯಾಂಗ್ವೇಜು (binary language).
ನಾವು ಕಂಪ್ಯೂಟರ್ ಗೆ ಆದೇಶವನ್ನಾಗಲೀ ಮಾಹಿತಿ ಯನ್ನಾಗಲೀ - ಕೊಡುವದು ೦ ಮತ್ತು 1 ರೂಪದಲ್ಲಿರಲು ಸಾಧ್ಯವೇ ? ಅದಕ್ಕೆ ಒಂದು ಉಪಾಯ ಕಂಡುಕೊಂಡಿದ್ದಾರೆ. ಅದೆಂದರೆ ನಮಗೆ ತಿಳಿಯುವ ಭಾಷೆಯಲ್ಲಿ ( ಸಾಮಾನ್ಯವಾಗಿ ಇಂಗ್ಲೀಷ್) ನಲ್ಲಿ ಬರೆದು ಕಂಪ್ಯುಟರ್ ಗೆ ಕೊಡುವದು .( ಕಂಪ್ಯುಟರ್ ಗೆ ಕೊಡುವದಕ್ಕೆ ಫೀಡ್ ಮಾದುವದು ಎನ್ನುತ್ತಾರೆ - ಕನ್ನಡದಲ್ಲಿ ಊಡಿಕೆ, ಊಡಿಸುವದು ಎನ್ನುತ್ತಾರೆ! )
ಕಂಪ್ಯೂಟರ್ ನ ಪ್ರೊಗ್ರಾಂ ಒಂದು ಇದನ್ನು ಬೈನರಿ ಭಾಷೆಗೆ ಅನುವಾದಿಸಿಕೊಳ್ಳುವದು. ಈ ಪ್ರೊಗ್ರಾಮುಗಳೇ ಅಸೆಂಬ್ಲರ್ ಮತ್ತು ಕಂಪೈಲರ್ ಗಳು.
ಇಷ್ಟೆಲ್ಲ ದ್ರಾವಿಡ ಪ್ರಾಣಾಯಾಮ - ಸರ್ಕಸ್ ಏಕೆ? ( ಇಲ್ಲಿ 'ದ್ರಾವಿಡ ಪ್ರಾಣಾಯಾಮ' ಕುರಿತು ಯಾರಾದರೂ ತಿಳಿಸಿಕೊಡಬಹುದು/ ಚರ್ಚೆ ಶುರು ಮಾಡಬಹುದು! ) ನಾವು ಬಳಸುವ ಭಾಷೆಯನ್ನೇ ಕಂಪ್ಯೂಟರ್ ಗೆ ಏಕೆ ಅಳವಡಿಸಬಾರದು? ಇದಕ್ಕೆ ಸಂಕ್ಷಿಪ್ತ ಉತ್ತರ ಹೀಗೆ- ಬೈನರಿ ಭಾಷೆಗೆ ಒಂದು ಅನುಕೂಲ ಇದೆ. ಅದೇನೆಂದರೆ ಅದರಿಂದಾಗಿ ಕಂಪ್ಯೂಟರ್ ಅದ್ಭುತವೇಗದಲ್ಲಿ ಕಾರ್ಯ ನಿರ್ವಹಿಸುವದು.
ಅಸೆಂಬ್ಲಿ ಭಾಷೆ ಗಣಕಕ್ಕೆ ಹತ್ತಿರದ ಭಾಷೆ .( ಇನ್ನು 'ಗಣಕ'ವನ್ನು - ಕಂಪ್ಯೂಟರ್ ಶಬ್ದಕ್ಕೆ ಬದಲಾಗಿ ಬಳಸುವೆ. ಬರೆಯುವದು ಸುಲಭವಾಗುವದು.)
ಇದಕ್ಕೆ ಮೇಲ್ಮಟ್ಟದ ಭಾಷೆಗಳನ್ನು higher level languages ಎನ್ನುವರು . ಈ ವರ್ಗದಲ್ಲಿ C , COBOL , fortran , pascal, c++ ಮುಂತಾದವು ಬರುವವು . ಮೂರನೇ ಪೀಳಿಗೆಯ ಭಾಷೆ (3GL - third generation language ) ಎಂದೂ ಎನ್ನುವರು.
ಈ ಭಾಷೆಗಳಲ್ಲಿನ ಶಬ್ದ ಭಾಂಡಾರ ನಿಯಮಿತವಾದದ್ದು. ನಮ್ಮ ಬಳಕೆಯ ಭಾಷೆಗಳ ಹಾಗಲ್ಲ. ಅಷ್ಟನ್ನೇ ಬಳಸಿ ನಮ್ಮ ಕೆಲಸ ಸಾಧಿಸಿಕೊಳ್ಳಬಹುದು. ಪ್ರತಿ 3GL ಭಾಷೆಯ ವೈಶಿಷ್ಟ್ಯಗಳನ್ನು ಮುಂದೆಂದಾದರೂ ನೋಡೋಣ.
ಆಮೇಲೆ 4GL ಕರೆಸಿಕೊಳ್ಳುವ ಭಾಷೆಗಳೂ ಇವೆ. ಇವು ನಮ್ಮ ಕೆಲಸವನ್ನು ಬಹಳಷ್ಟು ಸುಲಭ ಮಾಡುವವು . wordstar ,D-Base/foxpro , lotus-123 ಕೇಳಿರಬಹುದು. ( ಇವೆಲ್ಲ ಹಳತಾಗಿವೆ. ವಿಂಡೋಸ್ ನಲ್ಲಿನ word , access , execel ಇವೇ ಕೆಲಸಗಳನ್ನು ಬಳಕೆದಾರರಿಗೆ ಇನ್ನೂ ಸುಲಭ ಮಾಡಿವೆ- ಆದರೆ ಇವು ವಿಶಿಷ್ಟ ಉದ್ದೇಶಕ್ಕೆ ಮತ್ರ ಸೀಮಿತವಾಗಿರುವವು).
ಇನ್ನು ನಾವು ಒಂದು ಪ್ರೊಗ್ರಾಮಿಂಗ್ ಭಾಶೆಯನ್ನೇ ನೋಡೋಣ. ಹೇಗೂ ನಿಮಗೆ ಕಲಿಯಲಿಕ್ಕಿದೆ ಅಥವಾ ಕುತೂಹಲವಾದರೂ ಇದೆ . ಅಲ್ಲವೇ?
ಸಿಗೋಣ .
ಸ್ವಲ್ಪ ತಾಳ್ಮೆ ಇರಲಿ . ಸ್ವಲ್ಪ ದಿನಗಳ ನಂತರ ಮುಂದಿನ ಭಾಗ ಬರೆಯುವೆ.
ಈ ಭಾಗ ಹೇಗಿದೆ? ಮುಂದುವರೆಸಬೇಕೇ ? ತಿಳಿಸಿ.
Comments
ಉ: ಕಂಪ್ಯುಟರ್ ಭಾಷೆಗಳು ...(ಕ.ಕ.ಕ.-೪)
ಉ: ಕಂಪ್ಯುಟರ್ ಭಾಷೆಗಳು ...(ಕ.ಕ.ಕ.-೪)
ಉ: ಕಂಪ್ಯುಟರ್ ಭಾಷೆಗಳು ...(ಕ.ಕ.ಕ.-೪)
ಉ: ಕಂಪ್ಯುಟರ್ ಭಾಷೆಗಳು ...(ಕ.ಕ.ಕ.-೪)