ಕಂಪ್ಯೂಟರ್/ಐಟಿ - ಪ್ರಮೋಶನ್ ಪರೀಕ್ಷೆಗೆ ತಯಾರಿ - ಒಳ್ಳೇ ಸೈಟು ಹೇಳಿ ಪುಣ್ಯ ಕಟ್ಕೊಳ್ಳಿ !!

ಕಂಪ್ಯೂಟರ್/ಐಟಿ - ಪ್ರಮೋಶನ್ ಪರೀಕ್ಷೆಗೆ ತಯಾರಿ - ಒಳ್ಳೇ ಸೈಟು ಹೇಳಿ ಪುಣ್ಯ ಕಟ್ಕೊಳ್ಳಿ !!

ನಾನು ಸ್ಟೇಟ್ ಬ್ಯಾಂಕಿನಲ್ಲಿ ಇದ್ದೀನಿ . ಇಪ್ಪತ್ತೈದು ವರ್ಷದ ಹಿಂದೆ ಬಿ.ಎಸ್ಸಿ ಡಿಗ್ರಿ ಮುಗಿಸ್ಕೊಂಡು ಕೋಬಾಲ್ ಕಲಿತ್ಕೊಂಡು ( ಹೌದ್ರೀ , ಕಂಪ್ಯೂಟರ್ ಜತೇಲಿ ಕಾಲು ಶತಮಾನ ಮುಗ್ಸಿದೀನಿ), ಕ್ಲಾರ್ಕ್ ಅಂತ ಸೇರಿಕೊಂಡು , ಅದ್ಯಾವ್ದೋ ಗಾಳೀಲಿ ತೂರಿಕೊಂಡು , ಹದಿನೇಳು ವರ್ಷದ ಹಿಂದೆ , ಕಂಪ್ಯೂಟರ್ ಸಂಬಂಧೀ ಆಫಿಸರ್ ಅಂತ ಆಗಿ , ಬೇಕಿದ್ದು ಬೇಡದ್ದು ಎಲ್ಲ ಕಲ್ತು ,( C , Unix , COBOL , AWK, PERL , FOXPRO , Lotus smartsuite , MS OFFICE , PARADOX ) ಏನೇನೋ ಪ್ರೋಗ್ರಾಂ ಬರ್ಕಂಡು ಪೀಸೀ ಪ್ಯಾಕೇಜುಗಳನ್ನು ಮಾಡಿಕೊಂಡು ಇದ್ದೋನು ಕಲಿಯೋದು ಬೇಜಾರಾಗಿ ಒಂದು ದೋಡ್ಡ ಸರ್ಟಿಫಿಕೇಟು ತಕಂಡು ಕಲಿಯೋದಕ್ಕೆ ಮಂಗಳ ಹೇಳೋಣಂತ ಓರ್ಯಾಕಲ್ ಕಲ್ತು ಆ ಕಾರಣಕ್ಕೆ , ಈಗ ಆರು ವರ್ಷದ ಹಿಂದೆ ನಮ್ಮ ಹೆಡ್ಡಾಫೀಸಿಗೆ - ಅಂದ್ರೆ ಮುಂಬೈಗೆ ವರ್ಗ ಆಗಿ ಇಲ್ಲಿ ತಳ ಊರಿದೀನಿ. ಆವಾಗ್ಲೇ ಅಂದ್ರೆ ಆರು ವರ್ಷದ ಹಿಂದೆ , ನನ್ನನ್ನ ಡೆಪ್ಯೂಟಿ ಮ್ಯಾನೇಜರ್ ಅಂತ ಮಾಡಿದ್ರು .
ಈಗ ಇನ್ನೊಂದು ಹದಿನೈದು ದಿನಕ್ಕೆ ಒಂದು ಪರೀಕ್ಷೆ ಇದೆ . ಕಂಪ್ಯೂಟರ್/ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಸಂಬಂಧದ ವಿಷಯಗಳು , ಬೆಳವಣಿಗೆಗಳು ಇತ್ಯಾದಿ ಪ್ರಶ್ನೆ ಇರುತ್ತವೆ ಅಲ್ಲಿ . ಅದಕ್ಕೆ ತಯಾರಿ ಮಾಡಲು ನೆಟ್ಟಿನಲ್ಲಿ ಒಳ್ಳೇ ಸೈಟು , ಲಿಂಕ್ ಕೊಡ್ತೀರಾ ದಯವಿಟ್ಟು ? ಈ ಪರೀಕ್ಷೆ ಅನ್ನೋ ಪೀಡೆ ತಪ್ಪಿದ್ರೆ ಮುಂದೆ ಯಾವ ಪರೀಕ್ಷೆ ನೂ ಇಲ್ಲ ;
ಆಮೇಲೆ ದಿನಾ ಪುಸ್ತಕಾ ಓದ್ತಾ ಕೂತು ಒಳ್ಳೇ ವಿಷ್ಯ , ಉಪಯುಕ್ತ ವಿಷ್ಯ ಏನಾದ್ರೂ ಇದ್ರೆ ನಿಮಗೆಲ್ಲಾ ಹೇಳ್ತಾ ಕೂಡ್ತೀನಿ ! ಮತ್ತೆ www.haridasa.in ಗೆ ಎಲ್ಲಾ ಪುರಂದರದಾಸರ ಹಾಡು ಸೇರಿಸಿದಂಥ ಕನ್ನಡದ ಕೆಲ್ಸ ಏನಾದ್ರೂ ಮಾಡ್ತಾ ಕೂಡ್ತೀನಿ !!

ದಯಮಾಡಿ ಸಹಾಯ ಮಾಡಿ, ಕಂಪ್ಯೂಟರ್/ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಸಂಬಂಧದ ವಿಷಯಗಳು , ಬೆಳವಣಿಗೆಗಳು ಕುರಿತಾದ ಪ್ರಶ್ನೋತ್ತರಗಳ / ಸಂಕ್ಷಿಪ್ತ ಮಾಹಿತಿಯ ಸೈಟುಗಳ ಲಿಂಕ್ ನಿಮಗೆ ಗೊತ್ತಿದ್ದರೆ ಕೊಟ್ಟು ಪುಣ್ಯ ಕಟ್ಕೊಳ್ಳಿ !! .

Rating
No votes yet