ಕಡೇಹುಟ್ಟು

ಕಡೇಹುಟ್ಟು

ಸಂಪದದಲ್ಲಿ ಚರ್ಚೆ ಒಂದು ನಡೆದಿದೆ. ಚರ್ಚೆಯನ್ನು ಪ್ರಾರಂಬಿಸಿದವರು ಅವರ ಮಿತ್ರರ ಪರವಾಗಿ ಒಂದು ಪ್ರಶ್ನೆಯನ್ನು ತೇಲಿಬಿಟ್ಟದ್ದಾರೆ. ಪ್ರಶ್ನೆ ಹೀಗಿತ್ತು ’ಕಿರಿಮಗ, ಕೊನೆಮಗ ಇದಕ್ಕೆ ಸಂಸ್ಕ್ರುತದಲ್ಲಿ ಏನು? ಆಗ ನನಗೆ  ನೆನಪಿಗೆ ಬಂದದ್ದು ಕಡೇಹುಟ್ಟು.  ಇಲ್ಲಿ ಅದರ ಬಗ್ಗೆ ಬರೆಯುತ್ತಿದ್ದೇನೆ.

ಚರ್ಚೆಯಲ್ಲಿ ಬಹಳ ತರಹದ ಸಂಸ್ಕೃತ ಭಾಷಾಂತರದ ಹೊಸ ಸೃಷ್ಟಿಯೇ ನಡೆಯಿತು. ಅಂತಿಮ ಪುತ್ರ, ಕೊನೆಯ ಸೂನು ಟರ್ಮಿನೇಟರ್ ಇತ್ಯಾದಿ.

ಕನ್ನಡದಿಂದ ಸಂಸ್ಕೃತಕ್ಕೆ ಭಾಷಾಂತರಗೊಂಡು ಪದಗಳವು.   ಸಾಮಾನ್ಯವಾಗಿ ಮದುವೆ ಮುಂಜಿ  ಇತ್ಯಾದಿಗಳಲ್ಲಿ ಕನಿಷ್ಟಪುತ್ರ ಎಂದು ಬರೆಯುವುದೇ ವಾಡಿಕೆ. ಆದರೆ, ಅವರು ಹೊಸ ಮಾದರಿಯಲ್ಲಿ ತಮ್ಮ ಪತ್ರಿಕೆ ಇರಬೇಕೆಂದು ಇಷ್ಠಪಟ್ಟಲ್ಲಿ  ಶುದ್ಧ ಕನ್ನಡದಲ್ಲಿ ಕಡೇಹುಟ್ಟು  ಎಂದು ಬರೆಯ ಬಹುದಾಗಿದೆ.

ಇದು ಉತ್ತರ ಕರ್ನಾಟಕದಲ್ಲಿ ಬಳಕೆಯಲ್ಲಿ ಇರುವ ಪದ ಹಾಗೂ ನಡೆದುಬಂದ ಸಂಪ್ರದಾಯ. ಆದರೆ ಇದುವರೆಗೂ ಬರವಣಿಗೆಯಲ್ಲಿ ಬಂದದ್ದನ್ನು ನಾನು ಕಂಡಿಲ್ಲ. ಉತ್ತರಕರ್ನಾಟಕದಲ್ಲಿ  ಇದು ಮ್ಯಾಡೇಟರಿ. ಇದನ್ನು  ಯಾವ ಜಾತಿ ಯಾವ ಧರ್ವದವರೂ ಮೀರುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಇದು ನಿಯಮ.

ಸಾಮನ್ಯವಾಗಿ  ನಮಗೆ ಗೊತ್ತಿದ್ದಂತೆ ಜಗತ್ತಿನ ಎಲ್ಲಾ ಜನಾಂಗಗಳಲ್ಲೂ, ಮನೆಯಲ್ಲಿ ಮದುವೆಯು ಸರತಿಯಲ್ಲಿ ಇಳಿಕೆ ಕೃಮದಲ್ಲಿ ಜರುಗುತ್ತವೆ. ನಾಲ್ಕನೇ ಮಗನ ಮದುವೆ ಆಗುವವರೆಗೆ ಐದನೇಮಗನ ಮದುವು ಮಾಡುವುದಿಲ್ಲ ಇತ್ಯಾದಿ. ಅನಿವಾರ್ಯಕಾರಣಗಳಿಂದ / ಅನುಕೂಲದ ಕಾರಣದಿಂದ ಕೆಲವು ಸಾರೆ ಈ ಸರತಿಯಲ್ಲಿ ಏರುಪೇರಾಗುವುದು ಸಹಜ ಸಾಧ್ಯ. ಆದರೆ ಈ ಐದನೇ ಮಗ ಕೊನೆಯವನಾಗಿ ಹುಟ್ಟಿದವನಾಗಿದ್ದರೆ,ಅಂದರೆ ಐದನೆಯವನು ಕಡೇಹುಟ್ಟು ಆಗಿದ್ದಲ್ಲಿ, ಐದನೆಯವನ ಮದುವೆ ಆಗುವವರೆಗೂ ನಾಲ್ಕನೆಯವನಿಗೆ ಮದುವೆಯನ್ನು ಕಂಡಿತ ಮಾಡುವುದಿಲ್ಲ. ಕಡೇಹುಟ್ಟಿನ ಮದುವೆ ಆಗುವವರೆಗೂ ಮದುವೆಯ ಸರತಿ ಮುಕ್ತಾಯವಾಗುವುದಿಲ್ಲ. (ಜಗತ್ತಿನ್ನಲ್ಲಿ ಬೇರೆಲ್ಲಾದರೂ ಈ ಪದ್ದತಿ ಇದ್ದರೆ ತಿಳಿದವರು  ತಿಳಿಸಿ.).
ನಾಲ್ಕನೆಯವನಿಗೆ ಮದುವೆ ಮಾಡುವುದು ಅನಿವಾರ್ಯವಾದಲ್ಲಿ  ಐದನೆಯವನು ಬಾಲಕನಾಗಿದ್ದಾಗ್ಯೂ ಇಬ್ಬರಿಗೂ ಒಂದೇ ಮಂಟಪದಲ್ಲಿ  ಮದುವೆ ಮಾಡುತ್ತಾರೆ. ಅದರಲ್ಲಿ ಕೊನೆಯವನ ಮದುವೆ ಮೊದಲನೆಯದಾಗಿರುತ್ತದೆ. ಬಾಲ್ಯ ವಿವಾಹಕ್ಕೆ ಇದೂ ಒಂದು ಕಾರಣ.

ಕಡೇಹುಟ್ಟು ಸಂಪ್ರದಾಯ ಹೇಗೆ ಯಾಕಾಗಿ ರೂಢಿಯಲ್ಲಿ ಬಂತೆಂದು ಹಿರಿಯರನ್ನು ವಿಚಾರಿಸಿದಾಗ ಮೆಚ್ಚುವಂತ ಒಂದು ವಿಷಯ ತಿಳಿದು ಬಂದಿತು.;-  ’ ಮದುವೆಯಾಗಿ ಒಂದು ವರಸದಾಗ ಮಗಾಬೇರೆ ಆದ. ಮಾರಿ ಚಂದಕೆ ಮರುಳಾಗಿ ತನ್ನ ತಾಯಿ ಕೊರಳ ಕೊಯ್ದಾ’  ಇದು ಉತ್ತರ ಕರ್ನಾಟಕದ ಪ್ರಸಿದ್ಧ ಜಾನಪದ ಗೀತೆ. ಇದು ಸತ್ಯವೂ ಹೌದು. ಮದುವೆ ಆದಹಾಗೆ ಒಬ್ಬೊಬ್ಬರೇ ಮನೆಯ ಜವಾಬ್ದಾರಿಯನ್ನು ಕಳಚಿಕೊಳ್ಳಲಾರಂಭಿಸುತ್ತಾರೆ. ಹೀಗೆ ಎಲ್ಲರೂ ಕಳಚಿಕೊಂಡರೆ ಕೊನೆ ಮಗ ಪ್ರಾಯಕ್ಕೆ ಬರುವುದರೊಳಗೆ ಅಪ್ಪಾ ಅಮ್ಮಾ ಗೊಟಕ್ ಅಂದಿದ್ದರೆ ಕೊನೆಯ ಮಗ ಬ್ರಹ್ಮಚಾರಿ ಅಥವಾ ಪೋಲಿ ಆಗುವ ಅಪಾಯವಿದೆ. ಹೀಗಾಗಿ ಹಿರಿಯರು ತಮ್ಮ ಅಂತಿಮ ಕರ್ತವ್ಯವನ್ನು ಮಾಡಿ ಮುಗಿಸಲು ಆತರರಾಗಿರುತ್ತಾರೆ.
 
ಮತ್ತೊಂದು ವಿಷಯ;- ಕನಿಷ್ಟಪುತ್ರ ಎಂಬುದು ಅವನ ಯೋಗ್ಯತೆಯನ್ನು ಸಾರುವುದಿಲ್ಲ!. ಸರತಿಯ ಸಾಲಿನಲ್ಲಿ  ಅವನ ಸ್ಥಾನವನ್ನು ಸೂಚಿಸುತ್ತದೆ!!    ಅಭ್ಯಂತರ ಏನೂ ಇಲ್ಲದಿದ್ದಲ್ಲಿ ಕೊನೆಮಗನನ್ನು ಅಂತ್ಯಜ ಎಂದೂ ಸಂಸ್ಕೃತದಲ್ಲಿ ಕರೆಯಬಹುದು. ;)

Rating
No votes yet