ಕಣ್ಣು ಕಣ್ಣೂ ಒಂದಾಯಿತು
ಕಣ್ಣು ಕಣ್ಣೂ ಒಂದಾಯಿತು ... ನನ್ನ ನಿನ್ನ ಮನ ಸೇರಿತು..
ಇದೊಂದು ಹಳೆಯ ಚಲನಚಿತ್ರಗೀತೆ. ಸಾಹಿತಿಗಳಿಗೇಕೊ ಸದಾ ಪ್ರೇಮಿಗಳ ಕಣ್ಣಿನ ಬಗ್ಗೆಯೆ ಒಲವು. ಆದರೆ ನಾವು ದಿನ ನಿತ್ಯದ ವ್ಯವಹಾರಗಳಲ್ಲಿ ಬೆಳಗ್ಗೆಯಿಂದ ರಾತ್ರಿ ಮಲಗುವವರೆಗು ಆತ್ಮೀಯರಿಂದ ಹಿಡಿದು ಅಪರಿಚಿತರವರೆಗು ಎಲ್ಲರನ್ನು ಬೇಟಿ ಮಾಡುತ್ತೇವೆ. ಆಶ್ಚರ್ಯವೆಂದರೆ ಎದುರಿಗೆ ಇದ್ದರು ಮಾತನಾಡುವಾಗ ಕಣ್ಣಿನ ದೃಷ್ಟಿ ಸೇರುವುದು ಕಡಿಮೆಯೆ.
ಬೆಳಗ್ಗೆ ಏಳುವಾಗಲೆ ಮನೆಯ ಒಳಗಿನ ಚಟುವಟಿಕೆ ಗಮನಿಸಿ ಹೆಂಡತಿ ಮಕ್ಕಳು ತಂದೆ ತಾಯಿ ಅಣ್ಣ ತಮ್ಮಂದಿರಿರಬಹುದು ಆದರು ಎದುರಿಗೆ ನಿಂತು ಕಣ್ಣಿಗೆ ಕಣ್ಣು ಸೇರಿಸಿ ಮಾತನಾಡುವುದು ಅಪರೂಪವೆ. ಕಡೆ ಪಕ್ಷ ಜಗಳವಾಡುವಾಗ ? ಊಹೂ ! ಇಲ್ಲ. ಮಕ್ಕಳಾದರೊ ಕೆಲವೊಮ್ಮೆ ನಮ್ಮನ್ನು ದೃಷ್ಟಿ ಇಟ್ಟು ನೋಡಿ ಮಾತನಾಡುತ್ತವೆ ನಾವು ಬೇರೆ ಕಡೆ ನೋಡುವಾಗ ಬಲವಂತವಾಗಿ ನಮ್ಮ ಮುಖವನ್ನು ಅವರ ಕಡೆ ತಿರುವಿಸಿಕೊಳ್ಳುವುದು ಇದೆ. ಆದರೆ ದೊಡ್ಡವರಿಗೇಕೊ ಏನೊ ಒಂದು ಮುಜುಗರ ಕಾಡುತ್ತದೆ. ಬಹುಷಃ ಪರಸ್ಪರ ದೃಷ್ಟಿ ಸೇರಿಸಿ ಮಾತನಾಡಲ್ಲ.
ಮತ್ತು ಒಂದು ಆಶ್ಚರ್ಯವಿದೆ ನೀವು ಪ್ರತಿನಿತ್ಯ ವ್ಯವಹರಿಸುವ ವ್ಯಕ್ತಿಗಳ ಜೊತೆ ಮಾತನಾಡುವಾಗ ಸತತವಾಗಿ ಅವರ ಕಣ್ಣುಗಳನ್ನೆ ದಿಟ್ಟಿಸುತ್ತ ಮಾತನಾಡಲು ಪ್ರಯತ್ನಿಸಿ ಅವರ ತಮ್ಮ ದೃಷ್ಟಿ ಬದಲಿಸಿಬಿಡುತ್ತಾರೆ, ಏನೊ ಮುಜುಗರ ಕಾಡುತ್ತದೆ. ಹೇಗೊ ಇಬ್ಬರು ವ್ಯಕ್ತಿಗಳು ಪರಸ್ಪರ ಕಣ್ಣುಗಳ ಮೂಲಕ ಸಂಭಾಷಣೆ ನಡೆಸುವುದು ಅಪರೂಪವೆ. ಕಣ್ಣುಗಳನ್ನು ದಿಟ್ಟಿಸುವಾಗ ಏಕೊ ವ್ಯಕ್ತಿಗಳ ಮನಸ್ಸಿನ ಆಳಕ್ಕೆ ಇಳಿದು ಅವರ ಬಾವನೆಗಳನ್ನು ಓದುವ ಪ್ರಯತ್ನವೆನಿಸುತ್ತದೆ. ಹೀಗಾಗಿ ಕಣ್ಣುಗಳು ಭಾವನೆಗಳ ಪ್ರತೀಕವೆನಿಸುತ್ತದೆ. ಎದುರಿಗೆ ಇರುವವರನ್ನು ದಿಟ್ಟಿಸುವಾಗ ಕೆಲವೊಮ್ಮೆ ನಮ್ಮನ್ನು ಬೇರೆ ಬೇರೆ ಭಾವನೆಗಳು ಕಾಡುವ ಸಾದ್ಯತೆಗಳಿವೆ. ಉದಾ: ದೊಡ್ಡವರನ್ನು ಕಾಣುವಾಗ ’inferiority complex' , ಅಥವ ಅಪರಾದಿಗಳಿಗೆ ಕಾಡುವ ’ಅಪರಾದ ಪ್ರಜ್ಞೆ’ ಮುಂತಾದವು. ಹಾಗಾಗಿಯೆ ದೊಡ್ಡವರು ಹೇಳುತ್ತಾರೆ ಮಕ್ಕಳನ್ನು ಕುರಿತು "ಅವನು ನನ್ನ ಕಣ್ತಪ್ಪಿಸಿ ಓಡಾಡುತ್ತಿದ್ದಾನೆ’ ಅಂತ.
ಈ ವಾದಕ್ಕೆ ಪ್ರೇಮಿಗಳು ಮಾತ್ರ ಅಪವಾದವೇನೊ ? ಅದಕ್ಕೆ ಎಲ್ಲ ಕವಿಗಳು ಪ್ರೇಮಿಗಳ ಪ್ರೀತಿಯನ್ನು ವರ್ಣಿಸುವಾಗ ಅವರ ಕಣ್ಣುಗಳು ಸೇರಿದ ಬಗ್ಗೆಯೆ ವರ್ಣಿಸುವ ಆತುರ ತೋರುತ್ತಾರೆ.
ನಮ್ಮ ಚಲನಚಿತ್ರಗಳಲ್ಲಿ ಕಣ್ಣಿನ ಸಂಭಾಷಣೆಯ ಬಗ್ಗೆ ಎಷ್ಟೆ ವರ್ಣಿಸಿದರು ನಾಯಕ ನಾಯಕಿಯರು ದೃಷ್ಟಿ ಸೇರಿಸುವುದು ಕಡಿಮೆಯೆ. ಅವರ ದೃಷ್ಟಿ ಸದಾ ಕ್ಯಾಮರ ಕಡೆಯೆ. ಆದರೆ ಆಂಗ್ಲ ಬಾಷ ಚಿತ್ರಗಳಲ್ಲಿ ಗಮನಿಸಿ ಹಲವು ದೃಷ್ಯಗಳಲ್ಲಿ ತೀರ ಹತ್ತಿರದಲ್ಲಿ ಮುಖವಿರುವಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ಮಾತನಾಡುತ್ತಾರೆ.
ಮತ್ತೆ ಪ್ರಾಣಿಗಳ ಬಗ್ಗೆ ಯೋಚಿಸುವಾಗ ಅಷ್ಟೆ ಅವುಗಳು ನಮ್ಮತ್ತ ದೃಷ್ಟಿಯನ್ನು ನೆಟ್ಟು ನೋಡುವುದು ಅಪರೂಪ. ಆದರೆ ಸಾಕು ಪ್ರಾಣಿಗಳು ಕೆಲವೊಮ್ಮೆ ನಾಯಿ ಬೆಕ್ಕುಗಳು ತೀರ ಹತ್ತಿರದಲ್ಲಿದ್ದಾಗ ನಮ್ಮ ಕಣ್ಣುಗಳನ್ನು ದಿಟ್ಟಿಸುವುದು ಉಂಟು.
ಇಷ್ಟೆಲ್ಲ ಅನ್ನಿಸಲು ಕಾರಣ ಉಂಟು. ಮೊನ್ನೆ ಹೀಗೆ ಬಾಯಲ್ಲಿ ಬೋರ್ವೆಲ್ ತೋಡಿಸಲು, ರೂಟ್ ಕೆನಾಲ್ ? , ಹಲ್ಲಿನ ಡಾಕ್ತರ್ ಹತ್ತಿರ ಹೋಗಿದ್ದೆ. ನಾನು ಕಣ್ಣು ಮುಚ್ಚಿದ್ದೆ ಏಕೆಂದರೆ ತೀಕ್ಷ್ಣ ವಾದ ಬೆಳಕು ನನ್ನ ಕಣ್ಣಿನ ಮೇಲೆ ಬೀಳುತ್ತಿತ್ತು.ಆಗ ಏಕೊ ನಡುವೆ ಕಣ್ಣು ತೆರೆದೆ , ಆ ಹಲ್ಲಿನ ಡಾಕ್ಟರ್ ಮುಖ ನನ್ನ ಮುಖದ ಸನಿಹವೆ ಇತ್ತು ಮತ್ತು ಅಚಾನಕ್ಕಾಗಿ ನನ್ನ ಅವರ ಕಣ್ಣು ಸೇರಿದಾಗ ಆಕೆ ತಕ್ಷಣ ತಮ್ಮ ಮುಖವನ್ನು ಪಕ್ಕಕ್ಕೆ ತಿರುಗಿಸಿಬಿಟ್ಟರು. ಹಾಗಾಗಿ ಸಂಪದಿಗರಾಗ ನಿಮ್ಮೆಲ್ಲರಿಗು ಈ ಕೊರೆತ.
ಮತ್ತೆ ಹಾಡು ಕೇಳಿಸುತ್ತಿದೆಯಾ
ನಿನ್ನ ಕಣ್ಣ ನೋಟದಲ್ಲಿ ನೋಟದಲ್ಲಿ ನೂರು ಆಸೆ ಕಂಡೆನು....
Comments
ಉ: ಕಣ್ಣು ಕಣ್ಣೂ ಒಂದಾಯಿತು
In reply to ಉ: ಕಣ್ಣು ಕಣ್ಣೂ ಒಂದಾಯಿತು by Jayanth Ramachar
ಉ: ಕಣ್ಣು ಕಣ್ಣೂ ಒಂದಾಯಿತು
ಉ: ಕಣ್ಣು ಕಣ್ಣೂ ಒಂದಾಯಿತು
In reply to ಉ: ಕಣ್ಣು ಕಣ್ಣೂ ಒಂದಾಯಿತು by vani shetty
ಉ: ಕಣ್ಣು ಕಣ್ಣೂ ಒಂದಾಯಿತು
ಉ: ಕಣ್ಣು ಕಣ್ಣೂ ಒಂದಾಯಿತು
In reply to ಉ: ಕಣ್ಣು ಕಣ್ಣೂ ಒಂದಾಯಿತು by raghumuliya
ಉ: ಕಣ್ಣು ಕಣ್ಣೂ ಒಂದಾಯಿತು
ಉ: ಕಣ್ಣು ಕಣ್ಣೂ ಒಂದಾಯಿತು
In reply to ಉ: ಕಣ್ಣು ಕಣ್ಣೂ ಒಂದಾಯಿತು by asuhegde
ಉ: ಕಣ್ಣು ಕಣ್ಣೂ ಒಂದಾಯಿತು
In reply to ಉ: ಕಣ್ಣು ಕಣ್ಣೂ ಒಂದಾಯಿತು by partha1059
ಉ: ಕಣ್ಣು ಕಣ್ಣೂ ಒಂದಾಯಿತು
In reply to ಉ: ಕಣ್ಣು ಕಣ್ಣೂ ಒಂದಾಯಿತು by asuhegde
ಉ: ಕಣ್ಣು ಕಣ್ಣೂ ಒಂದಾಯಿತು