ಕತ್ತಲ ಕನ್ನಿಕೆ

ಕತ್ತಲ ಕನ್ನಿಕೆ

ನೇಸರ ಕೂಡೇನೆ ಬೆಳಕು ಅಡಗಿ
ಜಗವೆಲ್ಲ ಕತ್ತಲಿಗೆ ಶರಣು ಹೋಗಿ
ಚುಕ್ಕಿ ಚಿತ್ತಾರ ಬಿಡಿಸ್ಯಾವೆ ಮುಗಿಲಾಗೆ
ಈ ಹಕ್ಕಿ ಹೆಕ್ಕಿ ಹಾಡ್ಯಾವೆ ಮನದಾಗೆ

ಹಾಡಿಗೆ ರೂಪುಗೊಂಡ ಕಾವ್ಯ ಕನ್ನಿಕೆ
ನರ್ತಿಸತೊಡಗ್ಯಾಳೋ
ಪಕ್ಕವಾದ್ಯಗಳಿಲ್ಲದೆಯೂ
ಹಕ್ಕು ಬಾದ್ಯಗಳಿಲ್ಲದೆಯೂ...

ಈ ನರ್ತನ ಕಂಡ
ನಿಶೆ ಜಗದ ಗಂಡ
ನಿದ್ರಾಪುರುಷ ಬಂದೊಂದು ನಿಮಿಷ
ಈ ಕನ್ನಿಕೆಗಿನಿಲ್ಲದ ಹರುಷ
ಇದು ಹಾರಿ ಹೋಗಿತ್ತು
ಸುಪ್ತ ಸಾಗರ ದಾಟಿ
ಆಗಲೇ
ಹಾಡಿ ಹೋಗಿದ್ದ ಸಪ್ತ ಸ್ವರದ ಧಾಟಿ
ಅನುರಣಿಸುತ್ತಿತ್ತು ರಸ ರುಷಿಯ ಮಂತ್ರ
" ರೂಪ ರೂಪಗಳನು ದಾಟಿ
ನಾಮಕೋಟಿಗಳನು ಮೀಟಿ
ಆಗು ಆಗು ನೀ ಅನಂತ "
ಜಗವಾಗು ನೀ ಪ್ರಶಾಂತ....

- ಪ್ರಶಾಂತ್‌ ಎಂ.ಸಿ.

Rating
No votes yet

Comments