ಕತ್ತೆಯ ಮೇಲೊಂದು ಕಂಬಾರರ ಹಾಡು

ಕತ್ತೆಯ ಮೇಲೊಂದು ಕಂಬಾರರ ಹಾಡು

ಸಲಾಮಲೇಕುಂ ಡಿಂಗ್ ಡಾಂಗ್ ಸಾಹೇಬರ
ಬಲೆ ಮೋಜುದಾರ
ಯಾರಿಲ್ಲ ಎದುರಿಗೆ ನಿಲ್ಲವರ
ನಿಮ ಸಮಾನರ್ಯಾರ || ಪಲ್ಲವಿ||
ಈ ನಾಡನ್ನಾಳೋ ರಾಜ
ಹುಲಿ ಅಲ್ಲ ಚಿರತೆ ಖೋಜ
ಅವನಿಗಿಂತ ನೀವೇ ಉತ್ತಮರ ! ಓ ಸಾಹೇಬರ ||ಅನು ಪಲ್ಲವಿ ||

ಮುಂಗಾಲಿಂದ ನಡೆಯುತ್ತೀರಿ
ಹಿಂಗಾಲಿಂದ ಒದೆಯುತ್ತೀರಿ
ಎರಡೆರಡು ನಾಲ್ಕರಿಂದ
ಒದ್ದೂ ನಡೆದೂ ಕುಣಿಯುತ್ತೀರಿ ||
ಈ ನಾಡನ್ನಾಳೋ ರಾಜ
ಬರೆ ಎರಡು ಕಾಲಿನ ಮನುಜ
ಅವನಿಗಿನ್ನ ನೀವೇ ಉತ್ತಮರ ! ಓ ಸಾಹೇಬರ ||

....ಅದನ್ನು ಚಂದ್ರಶೇಖರ ಕಂಬಾರರ ಕ್ಯಾಸೆಟ್ಟೊಂದರಲ್ಲಿ ಕೇಳಿದ್ದೆ - ಅದನ್ನು ಶಿವಮೊಗ್ಗ ಸುಬ್ಬಣ್ಣ ಹಾಡಿದ್ದರು . ಕಂಬಾರರು ಗೊತ್ತಲ್ಲ ? ಜ್ಞಾನಪೀಠ ಇನ್ನೊಂದು ಬಂದರೆ ಅವರಿಗೆ ಬರಬೇಕು . ಕವಿ ಮತ್ತು ನಾಟಕಕಾರರು . ಜಾನಪದಶೈಲಿಯಲ್ಲಿ ಅನೇಕ ಹಾಡುಗಳನ್ನು ತಮ್ಮ ನಾಟಕಗಳಿಗಾಗಿ ಬರೆದಿದ್ದಾರೆ . ಅವರ ಹಾಡಿಗೋಸ್ಕರ ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ ಆಗ್ತಿತ್ತು ಅಂತ ಲಂಕೇಶರು ತಮಾಶೆ ಮಾಡೋರು . ಈ ಹಾಡು ನನಗೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ ಇಳಿಸಿಕೊಂಡ ನಾಟಕ - 'ಸಾಂಬಶಿವ ಪ್ರಹಸನ' ದಲ್ಲಿ ಸಿಕ್ಕಿತು . ನಿಮ್ಮ ಆನಂದಕ್ಕೋಸ್ಕರ ಇಲ್ಲಿ ಕುಟ್ಟಿದೀನಿ !

ವೇದ ಮಂತ್ರ ವಿದ್ಯಾಬುದ್ಧಿ
ನಿಮಗೆ ಕೊಳೆತು ನಾರುವ ರದ್ದಿ
ಎಲ್ಲಾ ತಿಂದು ತೇಗಿ ತೇಗಿ
ಹಾಕುತ್ತೀರಿ ಭಾರೀ ಲದ್ದಿ
ಈ ನಾಡನ್ನಾಳೋ ರಾಜ
ತಲೆ ತುಂಬ ಬದನೆ ಬೀಜ
ಅವನಿಗಿನ್ನ ನೀವೇ ಉತ್ತಮರ ! ಓ ಸಾಹೇಬರ ||ಅನು ಪಲ್ಲವಿ ||

Rating
No votes yet