ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 11
ಅಂತೂ ಇಂತೂ ಕಾವೇರಿ ಥಿಯೇಟರ್ ಬಳಿ ಬರುವಷ್ಟರಲ್ಲಿ ಸಮಯ ಹನ್ನೊಂದುವರೆ ಆಗಿತ್ತು. ಪಾಪ ಪಾವನಿ ಅಲ್ಲೇ ಒಂದು ಕಡೆ ನಿಂತಿದ್ದಳು. ನಾನು ಗಾಡಿ ನಿಲ್ಲಿಸಿ ತಕ್ಷಣ ಅವಳ ಬಳಿ ಓಡಿ ಮತ್ತೆ ಬಾಯಿಂದ ಸ್ವೀಟ್ ಹಾರ್ಟ್ ಎಂದು ಬರುವುದರಲ್ಲಿತ್ತು. ಬಲವಂತವಾ
ನನಗೆ ಹೇಗೆ ಮಾತು ಶುರು ಮಾಡುವುದೆಂದು ಗೊ
ನಂತರ ಅವಳು ಸಮಾಧಾನ ಮಾಡಿಕೊಂಡು ಹೋಗಲಿ ಬಿಡು ಭಗತ್ ತಲೆ ಕೆಡಿಸಿಕೊಳ್ಳಬೇಡ. ಮತ್ತೆ ಹೇಳು ಏನೋ ಸರ್ಪ್ರೈಸ್ ಕೊಡ್ತೀನಿ ಅಂತ ಇದ್ಯಲ್ಲ ಏನದು. ಏನಿಲ್ಲ ಬಿಡು ಪಾವಿ ನನ್ನ ಮೂಡ್ ಎಲ್ಲ ಹಾಳಾಗಿ ಹೋಯ್ತು ಇನ್ನೊಂದು ದಿ
ಈಗ ಹೇಳು ಭಗತ್ ಅದೇನು ಸರ್ಪ್ರೈಸ್ ಅಂತ. ಪಾವಿ ನನಗೆ ಹೇಗೆ ಹೇಳಬೇಕು ಅಂತ ಗೊತ್ತಾಗುತ್ತಿಲ್ಲ. ಅದಕ್ಕವಳು ಬಾಯಿಂದ ಹೇಳು ಪರವಾಗಿಲ್ಲ ಎಂದು ನಕ್ಕಳು. ನಾನು ಚೇರ್ ಇಂದ ಎದ್ದು ಕೆಳಗೆ ಮಂಡಿಯ ಮೇಲೆ ಕುಳಿತು ಪಾವಿ ನಾನು ನಿನ್ನನ್ನು ಧರ್ಮಸ್ಥಳದಲ್ಲಿ ಮೊದಲ ಬಾರಿ ನೋಡಿದಾಗಲೇ ನಿನ್ನ ಮೇಲೆ ಮನಸಾಯಿತು. ಅದುವರೆಗೂ ಎಷ್ಟೋ ಜನ ಹುಡುಗಿಯರನ್ನು ನೋಡಿದ್ದರೂ ಯಾರನ್ನು ಪ್ರೀತಿಸಿರಲಿಲ್ಲ. ಆದರೆ ನಿನ್ನನ್ನು ನೋಡಿದ ಕ್ಷಣದಿಂದಲೇ ಪ್ರೀತಿ ಶುರುವಾಯಿತು. ಮೊದಮೊದಲು ನನಗೆ ಇದು ಬರೀ ಆಕರ್ಷಣೆ ಎನಿಸಿದರೂ ನಂತರ ಯಾವಾಗ ನಿನ್ನನ್ನು ಬಿಟ್ಟಿರಲಾರೆನೋ ಎನಿಸಿತೋ ಆಗ ದೃಢವಾಯಿತು. ಪಾವಿ ನನ್ನ ಜೀವಿತಾಂತ ನಿನ್ನ ಜೊತೆ ಬಾಳಲು ಅವಕಾಶ ಕೊಡುತ್ತೀಯ ಎಂದು ಜೇಬಿನಿಂದ ಉಂಗುರದ ಡಬ್ಬಿಯನ್ನು ತೆಗೆದು ಅವಳ ಮುಂದೆ ಇಟ್ಟೆ.
ಪಾವನಿ ಮುಖದಲ್ಲಿ ನಗು ಕಂಡಿತು. ನನಗೆ ಒಳಗೊಳಗೇ ಬಹುಷಃ ಅವಳಿಗೂ ಇಷ್ಟವೇನೋ ಒಪ್ಪುತ್ತಾಳೆನೋ ಅನಿಸುತ್ತಿತ್ತು. ಭಗತ್ ಮೊದಲು ಮೇಲೆ ಏಳು ಎಂದಳು ಮೇಲೆ ಎದ್ದ ಮೇಲೆ ನಡಿ ಹಾಗೆ ವಾಕ್ ಮಾಡುತ್ತಾ ಮಾತಾಡೋಣ ಎಂದು ಇಬ್ಬರೂ ನಡೆಯಲು ಶುರು ಮಾಡಿದೆವು. ಸ್ವಲ್ಪ ದೂರ ಮೌನವಾಗಿ ನಡೆದ ನಂತರ ಅವಳೇ ಶುರು ಮಾಡಿದಳು. ಭಗತ್ ನೀನೆಂದರೆ ನನಗೂ ತುಂಬಾ ಇಷ್ಟ, ನೀನು ನನ್ನ ಮೇಲೆ ತೋರಿಸುವ ಪ್ರೀತಿ ಬಹುಷಃ ನಮ್ಮಪ್ಪ ಅಮ್ಮ ಕೂಡ ತೋರಿಸಿಲ್ಲವೇನೋ ಅಷ್ಟು ಪ್ರೀತಿ ತೋರಿಸುತ್ತೀಯ ನೀನು. ಆದರೆ ನೀನು ತೋರಿಸುವ ಪ್ರೀತಿಯನ್ನು ಪಡೆಯುವ ಯೋಗ್ಯತೆಯಾಗಲೀ ಅರ್ಹತೆಯಾಗಲೀ ನನಗಿಲ್ಲ ಭಗತ್ ಎಂದಳು. ಪಾವನಿ ಏನು ಮಾತನಾಡುತ್ತಿದ್ದೀಯ ನೀನು? ಯಾಕೆ ಏನೇನೋ ಮಾತನಾಡುತ್ತಿದ್ದೀಯ? ಹೌದು ಭಗತ್ ನನ್ನ ಮಾತು ನಿಜ. ನಾನು ನಿನ್ನ ಬಳಿ ಒಂದು ವಿಷಯ ಮುಚ್ಚಿಟ್ಟಿದ್ದೀನಿ ಕಣೋ ಎಂದಳು. ನನಗೆ ಏನಪ್ಪಾ ಅದು ಎಂಬ ಗೊಂದಲ ಶುರುವಾಯಿತು. ಏನು ಪಾವಿ ಎಂದೆ.
ಭಗತ್ ನನಗೆ ಆಗಲೇ ಮದುವೆಯಾಗಿದೆ ಎಂದಳು..