ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 15

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 15

ರಾತ್ರಿ ಎಲ್ಲ ನಿದ್ದೆ ಹತ್ತಿರಲಿಲ್ಲ. ಬೆಳಗಿನ ಹೊತ್ತಿಗೆ ನಿದ್ದೆ ಹತ್ತಿತ್ತು. ಇನ್ನೇನು ಮೈ ಮರೆತು ನಿದ್ದೆ ಮಾಡಬೇಕು ಅನ್ನುವಷ್ಟರಲ್ಲಿ ಮೊಬೈಲ್ ಹೊಡೆದುಕೊಂಡಿತು. ನಾನು ಮೊಬೈಲನ್ನು ನೋಡದೆ ಹಾಗೆಯೇ ಆಫ್ ಮಾಡಿ ಮತ್ತೆ ಮಲಗಿಬಿಟ್ಟೆ. ಮತ್ತೆ ಬಾಗಿಲು ತಟ್ಟುವ ಸದ್ದಿಗೆ ಎಚ್ಚರವಾಯಿತು. ಆಚೆಯಿಂದ ಪೂಜಾ ಬಾಗಿಲು ತೆಗೆಯೋ ಎಂದು ಕಿರುಚುತಿದ್ದಳು. ಎದ್ದು ಕಣ್ಣು ಬಿಟ್ಟು ನೋಡಿದರೆ ಸಮಯ ತ್ತೂವರೆ ತೋರಿಸುತ್ತಿತ್ತು. ಓಹೋ ಎಂದುಕೊಂಡು ಬಾಗಿಲು ತೆಗೆದೆ. ಅಮ್ಮ ಹೇಳಿದರು ಎಬ್ಬಿಸು ಅಂತ ಅದಕ್ಕೆ ಬಂದೆ. ಸಾಕಾ ನಿದ್ದೆ ಎಂದಳು. ಅಯ್ಯೋ ಸುಮ್ನೆ ಇರೆ ರಾತ್ರಿ ಎಲ್ಲ ನಿದ್ದೆ ಇಲ್ಲ ಅದು ಸರಿ ಅಮ್ಮನ ಕೋಪ ಹೇಗಿದೆ. ಕೋಪ ಅಂತೇನೂ ಇಲ್ಲ ಹಾಗೆಂದು ಸಂತೋಷನು ಇಲ್ಲ. ಅಮ್ಮನ ಹತ್ತಿರ ನಿಧಾನವಾಗಿ ನಿನ್ನ ವಿಷಯ ಹೇಳು. ಸುಮ್ಮನೆ ಆತುರ ಪಟ್ಟು ಕೋಪ ಮಾಡಿಕೊಂಡರೆ ಏನೂ ಪ್ರಯೋಜನ .ಇಲ್ಲ ಈಗ ಮೊದಲು ಆಚೆ ಬಾ ಎಂದಳು.

ನಾನು ಮುಖ ತೊಳೆದುಕೊಂಡು ಬಂದು ಮೊಬೈಲ್ ನೋಡಿದರೆ ಪಾವನಿ ಇಂದ ಒಂದು ಮಿಸ್ಡ್ ಕಾಲ್ ಇತ್ತು. ಒಹ್ ಇವಳೇ ಅನಿಸುತ್ತೆ ಬೆಳಿಗ್ಗೆ ಮಾಡಿದ್ದು ಎಂದುಕೊಂಡು ಕಾಲ್ ಮಾಡಿದೆ.

ಹಲೋ ಏನ್ಸಾರ್ ಇವಾಗ ಸೂರ್ಯ ದರ್ಶನವಾಯ್ತ ತಮಗೆ ಎಂದಳು. ಹಾಗೇನಿಲ್ಲ ಪಾವಿ ರಾತ್ರಿ ಎಲ್ಲ ನಿದ್ದೆ ಬಂದಿರಲಿಲ್ಲ ಬೆಳಗಿನ ಜಾವ ನಿದ್ದೆ ಹತ್ತಿತ್ತು. ಯಾಕೋ ರಾತ್ರಿ ಎಲ್ಲ ನಿದ್ದೆ ಮಾಡಲಿಲ್ಲ ಎಂದಳು. ಅಯ್ಯೋ ಅದು ಬಿಡುನೆನ್ನೆ ಫೋನ್ ಯಾಕೆ ಎತ್ತಲಿಲ್ಲ. ಎಂದಿದ್ದಕ್ಕೆ ಯಾವಾಗ ಮಾಡಿದ್ಯೋನನಗೆ ಯಾವುದೇ ಕಾಲ್ ಬಂದಿಲ್ಲ ಸರಿಯಾಗಿ ನೋಡು ಯಾರಿಗೆ ಮಾಡಿದ್ಯ ಅಂತ. ಒಂದು ನಿಮಿಷ ಇರು ನೋಡ್ತೀನಿ ಎಂದು ಕಾಲ್ ಲಿಸ್ಟ್ ನೋಡಿದರೆ ಪವನ್ ಎಂದಿತ್ತು. ಛೆ ಇವಳಿಗೆ ಮಾಡಕ್ಕೆ ಹೋಗಿ ನನ್ನ ಸ್ನೇಹಿತ ವನ್ ಗೆ ಮಾಡಿದ್ದೆ. ಒಹ್ ಸಾರಿ ಪಾವಿ ನಿನಗೆ ಅಂದುಕೊಂಡು ಬೇರೆ ನಂಬರ್ ಗೆ ಮಾಡಿದ್ದೆ. ಹ್ಮ್ಮ್ ಸರಿ ಬಿಡು ಏನು ಕಾರ್ಯಕ್ರಮ ಇವತ್ತು ಎಂದಳು. ಏನೂ ಇಲ್ಲ ಪಾವಿ ನಿಂದು ಎಂದೆ. ಎಲ್ಲಾದರೂ ಲಾಂಗ್ ರೈಡ್ ಹೋಗಬೇಕು ಅನಿಸುತ್ತಿದೆ ಕಣ ಹೋಗೋಣ ಎಂದಳು. ಎಲ್ಲಿಗೆ ಹೋಗೋಣಎಲ್ಲಾದರೂ ಸರಿ ದೂರ ಹೋಗಬೇಕು. ಸರಿ ಒಂದು ಕೆಲಸ ಮಾಡು ಈಗ ಹನ್ನೊಂದು ಗಂಟೆ ನಾನು ಇನ್ನ ಒಂದು ಗಂಟೆಯಲ್ಲಿ ರೆಡಿ ಆಗ್ತೀನಿ ನೀನು ಎಲ್ಲಿ ಸಿಕ್ತೀಯ ಹೇಳು. ಸ್ವಾಮಿ ನೆನ್ನೆ ಆದ ಅನುಭವ ಾಕು ನೀನೆ ಎಲ್ಲಿ ಸಿಕ್ತೀಯ ಹೇಳು ನಾನೇ ಅಲ್ಲಿಗೆ ಬರುತ್ತೀನಿ ಎಂದಳು. ಸರಿ ಹಾಗಿದ್ದರೆ ಸರಿಯಾಗಿ ಹನ್ನೆರಡು ಗಂಟೆಗೆ ಮೈಸೂರ್ ರೋಡ್ ಗೋಪಾಲನ್ ಮಾಲ್ ಹತ್ತಿರ ಕಾಯುತ್ತಿರುತ್ತೇನೆ. ಅಲ್ಲಿಗೆ ಬಂದು ಬಿಡು ಎಂದು ಫೋನ್ ಇಟ್ಟು ಸ್ನಾನಕ್ಕೆ ಹೊರಟೆ.

ಸ್ನಾನ ಮುಗಿಸಿ ದೇವರಿಗೆ ನಮಸ್ಕಾರ ಾಕಿ ಅಡಿಗೆ ಮನೆಯಲ್ಲಿ ಅಮ್ಮನ ಮುಖ ನೋಡಿದೆ. ಮುಖ ಗಂಟಿಕ್ಕಿಕೊಂಡು ತರಕಾರಿ ಹೆಚ್ಚುತ್ತಿದ್ದರು. ಅಮ್ಮ ನನ್ನ ಮೇಲಿನ ಕೋಪನ ತರಕಾರಿ ಮೇಲೆ ಯಾಕಮ್ಮ ತೋರಿಸ್ತಾ ಇದ್ದೀಯ ಸ್ವಲ್ಪ ನಗಬಾರದ ಎಂದು ಛೇಡಿಸು ಹಾಗೆ ಕೇಳಿದ್ದಕ್ಕೆ ಇನ್ಯಾರ ಮೇಲೆ ತೋರಿಸಲಿ ಹೇಳಪ್ಪ ಯಾರು ಕೇಳಬೇಕು ನ್ನ ಕೋಪನ? ಅಮ್ಮ ನಿನಗೇನೂ ಇವತ್ತು ಫೋಟೋ ತೆಗೆಸಬೇಕು ಅಷ್ಟೇ ಅಲ್ವಾ ತೆಗೆಸಿಕೊಂಡು ಬರ್ತೀನಿ ಆದ್ರೆ ಸುಮ್ಮನೆ ಎಲ್ಲ ಹುಡುಗಿಯರನ್ನು ನೋಡು ಎಂದು ಬಲವಂತ ಮಾಡಬಾರದು ಎಂದೆ. ಮೊದಲು ನೀನು ಫೋಟೋ ತಗೊಂಡು ಬಾ ಆಮೇಲೆ ಮುಂದೆ ನೋಡೋಣ ಎಂದರು. ನಾನು ರೂಮಿಗೆ ಬಂದು ಬಟ್ಟೆ ಹಾಕಿಕೊಂಡು ರೆಡಿಯಾಗಿ ಆಚೆ ಬಂದು ಮೊಬೈಲ್ ನಲ್ಲಿ ಟೈಮ್ ನೋಡಿದೆ. ಇನ್ನ ಅರ್ಧ ಗಂಟೆ ಇತ್ತು. ನಮ್ಮ ಮನೆಗೆ ಬಹಳ ಹತ್ತಿರದಲ್ಲಿತ್ತು ಗೋಪಾಲನ್ ಮಾಲ್ ಹತ್ತು ನಿಮಿಷ ಮುಂಚೆ ಬಿಟ್ಟರೂ ಸಾಕು ಅಲ್ಲಿರಬಹುದು ಎಂದುಕೊಂಡು ಅಮ್ಮ ತಿಂಡಿ ಏನು ಎಂದೆ. ಚಪಾತಿ ರೆಡಿ ಇದೆ ತಗೋ ಎಂದರು. ಚಪಾತಿ ತಿಂದು ಹೊರಡುವಷ್ಟರಲ್ಲಿ ಹನ್ನೊಂದು ೪೫ ಆಗಿತ್ತು. ಗಾಡಿ ತೆಗೆದುಕೊಂಡು ಮಾಲ್ ಬಳಿ ಬಂದು ಂದೆರೆಡು ನಿಮಿಷದಲ್ಲೇ ಪಾವನಿ ಆಟೋಲಿ ಬಂದು ಇಳಿದಳು.ಅವಳನ್ನು ಹತ್ತಿಸಿಕೊಂಡು ಮೈಸೂರಿನ ಕಡೆ ಪಯಣ ಬೆಳೆಸಿದೆ.

ಭಗತ್ ಎತ್ತ ಕಡೆ ನಮ್ಮ ಪಯಣ. ಲಾಂಗ್ ರೈಡ್ ಬೇಕು ಅಂದ್ಯಲ್ಲ ಬಾ ಕರ್ಕೊಂಡು ಹೋಗ್ತೀನಿ. ನಮ್ಮ ಅದೃಷ್ಟಕ್ಕೆ ಮೋಡ ಕವಿದ ವಾತಾವರಣ ಇತ್ತು. ತಣ್ಣಗೆ ಗಾಳಿ ಬೀಸುತ್ತಿತ್ತು. ನಗರ ಪ್ರದೇಶ ದಾಟಿ ಹೈವೇ ೆ ಬಂದು ಸ್ವಲ್ಪ ವೇಗವನ್ನು ಹೆಚ್ಚಿಸಿದೆ. ಭಗತ್ ಸ್ವಲ್ಪ ನಿಧಾನವಾಗಿ ಓಡಿಸು ಆರಾಮಾಗಿ ಹೋಗಿ ರೋಣ ಎಂದಳು. ನಾನು ವೇಗವನ್ನು ತಗ್ಗಿಸಿ ನಿಧಾನವಾಗಿ ನಡೆಸುತ್ತಿದ್ದೆ. ಯಾಕೋ ಏನೂ ಮಾತಾಡುತ್ತಿಲ್ಲ ಸೈಲೆಂಟ್ ಆಗಿ ಗಾಡಿ ಓಡಿಸುತ್ತಿದ್ದೀಯ. ಹಾಗೇನು ಇಲ್ಲ ಪಾವಿ ನಾನು ಹೇಳಿದ ವಿಷಯ ಏನು ಮಾಡಿದೆ? ಭಗತ್...ನಿನಗೆ ಅತೀ ಅನ್ನಿಸುವುದಿಲ್ವಾ ನೆನ್ನೆ ತಾನೇ ಹೇಳಿದ್ಯ ಆಗಲೇ ಅರ್ಜೆಂಟ್ ಮಾಡಿದರೆ ಹೇಗೆ. ಸ್ವಲ್ಪ ಸಮಯ ಕೊಡು ವಿಚಾರ ಮಾಡಿ ಹೇಳ್ತೀನಿ. (ಮನಸಿನಲ್ಲಿ) ಪಾವಿ ನೀನೇನೋ ಸಮಯ ಕೇಳ್ತಿದ್ಯ ಆದರೆ ನನಗಿಲ್ಲಿ ಒಂದೊಂದು ಸೆಕೆಂಡ್ ಸಹ ಂದು ವರ್ಷದಂತೆ ಆಗುತ್ತಿದೆ ಎಂದುಕೊಂಡೆ. ಓಕೆ  ಓಕೆ ನಿನಗೆಷ್ಟು ಟೈಮ್ ೇಕೋ ಅಷ್ಟು ಟೈಮ್ ತಗೋ. ಹಾಗೆ ಒಂದೂವರೆಗಂಟೆ ಸತತವಾಗಿ ಗಾಡಿ ಓಡಿಸಿ ಮದ್ದೂರು ಕಾಫಿ ಡೇ ಬಳಿ ಗಾಡಿ ನಿಲ್ಲಿಸಿದೆ. ಕೆಳಗಿಳಿದ ಪಾವಿ ವೌ ಸೂಪರ್ ರೈಡ್ ಕಣೋ ರಿಯಲಿ ಥ್ಯಾಂಕ್ಸ್  ಲಾಟ್. ಇಬ್ಬರೂ ಒಳಗೆ ಹೋಗಿ ಸ್ವಲ್ಪ ಹೊತ್ತು ಅದೂ ಇದೂ ಮಾತಾಡಿ ಕಾಫಿ ಕುಡಿದು ಅರ್ಧ ಗಂಟೆ ಅಲ್ಲಿ ಕಳೆದು ಮತ್ತೆ ವಾಪಸ್ ಹೊರಟೆವು. ಸಮಯ ಮೂರು ಗಂಟೆ ಆಗಿತ್ತು. ಶಿವಳ್ಳಿ ಹತ್ತಿರ ಇದ್ದ ಕಾಮತ್ ಹೋಟೆಲ್ ಬಳಿ ನಿಲ್ಲಿಸಿ ಊಟ ಮಾಡಿಕೊಂಡು ಆಚೆ ಬರುವಷ್ಟರಲ್ಲಿ ನಾಲ್ಕು ಗಂಟೆ ಆಗಿತ್ತು. ಯಾಕೋ ಭಗತ್ ಫುಲ್ ಡಲ್ ಆಗಿದ್ಯ. ನೀನು ಹೀಗಿದ್ರೆ ಕೆಟ್ಟದಾಗಿ ಇರ್ತ್ಯ. ಅದಕ್ಕೆ ನೋಡು ಯಾವ ಹುಡುಗೀನು ನಿನ್ನ ನೋಡ್ತಿಲ್ಲ ಎಂದು ನನ್ನ ನೋಡಿ ನಕ್ಕಳು. ಪಾವಿ ಬೆಕ್ಕಿಗೆ ಚೆಲ್ಲಾಟ ಅಂದ್ರೆ ಇಲಿಗೆ ಪ್ರಾಣ ಸಂಕಟ ಅಂದ್ರೆ ಇದೆ ಅನ್ಸತ್ತೆ. ಅಯ್ಯೋ ನೀನು ಮತ್ತೆ ಅಲ್ಲಿಗೆ ಬರಬೇಡ ನಡೀ ಮೊದಲು ವಾಪಸ್ ಹೊರಡೋಣ ಇನ್ನು ಲೇಟ್ ಆಗತ್ತೆ. ಎಂದು ಅಲ್ಲಿಂದ ಹೊರಟೆವು

ಸಮಯ ತಡ ಆಗಿದ್ದರಿಂದ ಸ್ವಲ್ಪ ವೇಗವಾಗಿ ಗಾಡಿಯನ್ನು ಓಡಿಸಿಕೊಂಡು ಬಂದೆ. ಇನ್ನೇನು ಬೆಂಗಳೂರಿಗೆ ಹತ್ತಿರ ಇದ್ದೆವು ಅಷ್ಟರಲ್ಲಿ ಸಣ್ಣದಾಗಿ ಮಳೆ ಹನಿ ಶುರುವಾಯಿತು. ನನಗೆ ಎಲ್ಲಪ್ಪ ನೆಂದು ಹೋಗುತ್ತೀವಿ ಎಂದು ಬೇಗ ಗಾಡಿ ಓಡಿಸುತ್ತಿದ್ದರೆ ಪಾವಿ ಮಾತ್ರ ವೌ ಸೂಪರ್ ಆಗಿದೆ ನಿಧಾನವಾಗಿ ಹೋಗೋ ಎಂದಳು. ಪಾವಿ ಲೇಟ್ ಆಗತ್ತೆ ಸುಮ್ಮನೆ ಇರು ಎಂದೆ. ಮಳೆಹನಿ ನಿಂತಿತು. ಇನ್ನೇನು ಕೆಂಗೇರಿ ಸಮೀಪಿಸಬೇಕು ಅಲ್ಲಿಯವರೆಗೂ ನನ್ನ ಭುಜದ ಮೇಲೆ ಕೈ ಇಟ್ಟಿದ್ದ ಪಾವಿ ನಿಧಾನವಾಗಿ ತನ್ನ ಎರಡೂ ಕೈಗಳಿಂದ ನನ್ನ ಬಳಸಿ ನನ್ನ ಕಿವಿಯ ಬಳಿ ಬಂದು ಭಗತ್ ಐ ಲವ್ ಯೂ ಕಣೋ ಎಂದಳು. ನಾನು ಸಡನ್ನಾಗಿ ಬ್ರೇಕ್ ಹಾಕಿ ಪಾವಿ ಏನಂದೆ. ಎಸ್ ಐ ಲವ್ ಯೂ ಕಣೋ ಎಂದು ನನ್ನ ಕೆನ್ನೆಗೆ ಮುತ್ತಿಟ್ಟಳು. ಪಾವಿ ಐ ಲವ್ ಯೂ ಎಂದು ಜೋರಾಗಿ ಕಿರುಚಿ ಅವಳನ್ನು ತಬ್ಬಿ ಕೊಳ್ಳಲು ಹೋದೆ. ಸರ್ ಸಮಾಧಾನ ಇದು ಹೈವೇ ನಡಿ ಮೊದಲು ಮನೆಗೆ ಹೋಗೋಣ ಲೇಟ್ ಆಗಿದೆ ಎಂದಳು. ಅಲ್ಲಿಂದ ಹೊರಟು ಅವಳನ್ನು ಮಲ್ಲೇಶ್ವರಂ ಬಳಿ ಬಿಟ್ಟು ನಾನು ಮನೆಗೆ ಬರುವ ಹೊತ್ತಿಗೆ ಏಳು ಗಂಟೆ ಆಗಿತ್ತು

Rating
No votes yet