ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 16

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 16

ಮನೆಗೆ ಬರುವಷ್ಟರಲ್ಲಿ ಪಾವಿ ಇಂದ ಮೆಸೇಜ್ ಬಂತು. ಥ್ಯಾಂಕ್ಸ್ ಫಾರ್ ದಿ ೈಡ್ ಲವ್ ಯೂ ಸೊ ಮಚ್. ನಾನು ರಿಪ್ಲೈ ಮಾಡಿದೆ. ಮೀ ಟೂ ಸ್ವೀಟ್ ಹಾರ್ಟ್ ಂತ ಕಳಿಸಿ ಮನೆ ಒಳಗೆ ಕಾಲಿಟ್ಟೆ. ಒಳಗೆ ಹೋದ ತಕ್ಷಣ ಅಮ್ಮ ಅಪ್ಪ ಪೂಜಾ ಎಲ್ಲರೂ ಹಾಲಿನಲ್ಲಿ ಕುಳಿತು ಟಿ ವಿ ನೋಡುತ್ತಿದ್ದರು. ಅಪ್ಪ ಶುರು ಮಾಡಿದರು ಏನಪ್ಪಾ ಹೊತ್ತು ಗೊತ್ತು ಇಲ್ವಾ ಮನೆಗೆ ಬರಕ್ಕೆ. ಬೆಳಿಗ್ಗೆ ಹನ್ನೊಂದಕ್ಕೆ ಮನೆ ಬಿಟ್ಟವನು ಈಗ ನೆನಪಾಯಿತ ಮನೆ. ಹೋಗಲಿ ಮನೇಲಿ ಹೆದರಿಕೊಂಡಿರುತ್ತಾರೆ ಒಂದು ಫೋನಾದರೂ ಮಾಡಬೇಕು ಎಂದು ಸಾಮಾನ್ಯ ಜ್ಞಾನ ಇಲ್ವಾ ನಿಂಗೆ. ಯಾಕೋ ಬರ್ತಾ ಬರ್ತಾ ನಿಂದು ಅತೀ ಅಗ್ತಾ ಇದೆ. ಅಷ್ಟರಲ್ಲಿ ಅಮ್ಮ ಶುರು ಮಾಡಿದರು. ಮುಂಚೆಯೇ ಇದನ್ನು ಕೇಳಿದ್ದರೆ ಈಗ ಕೇಳುವ ಪರಿಸ್ಥಿತಿ ಬರ್ತಾ ರಲಿಲ್ಲ ಎಂದು ಅಪ್ಪನ ಕಡೆ ನೋಡಿದರು. ನಾನು ಅಪ್ಪ ಅಮ್ಮ ನಿಮ್ಮಿಬ್ಬರ ಹತ್ತಿರ ಒಂದು ವಿಷಯ ಮಾತಾಡಬೇಕು ಮೊದಲು ಮುಖ ತೊಳೆದು ಬರುತ್ತೇನೆ ಎಂದು ಒಳಗೆ ಹೋಗಿ ಮುಖ ತೊಳೆದುಕೊಂಡು ಬಂದು ಅಪ್ಪ ಅಮ್ಮನ ಎದುರಿನ ಕುರ್ಚಿಯಲ್ಲಿ ಕುಳಿತೆ. ಅಪ್ಪ ಅಮ್ಮ ನಾನು ಒಂದು ಹುಡುಗಿಯನ್ನು ಇಷ್ಟ ಪಡುತ್ತಿದ್ದೇನೆ ಅವಳನ್ನೇ ಮದುವೆ ಆಗಬೇಕು ಎಂದಿದ್ದೇನೆ ಎಂದು ಅವರ ಮುಖ ನೋಡಿದೆ.

ತಕ್ಷಣ ಅಮ್ಮನ ಮುಖ ಕೆಂಪಾಯಿತು. ಅಪ್ಪನ ಕಡೆ ತಿರುಗಿ ನನಗೆ ಮುಂಚಿನಿಂದ ಅನುಮಾನ ಇತ್ತು ಇವನು ಹೀಗೆ ಏನೋ ಮಾಡುತ್ತಾನೆ ಎಂದು ಗೊತ್ತಿತ್ತು ಎಂದು ಅಳಲು ಶುರು ಮಾಡಿದರು. ಅಮ್ಮ ಸುಮ್ಮನೆ ಅಳಬೇಡ ನಾನು ಪೂರ್ತಿ ಹೇಳುವವರೆಗೂ ಕೇಳು ಎಂದೆ. ಆದರೆ ನನ್ನ ಮಾತನ್ನು ಕೇಳುವ ವ್ಯವಧಾನ ಇರಲಿಲ್ಲ ಅಮ್ಮನಿಗೆ. ನೋಡೋ ನಾನು ಮುಂಚೆನೇ ಹೇಳಿದ್ದೆ.  ಲವ್ವು ಗಿವ್ವು ಎಲ್ಲ ನಮಗೆ ಆಗಲ್ಲ ಅಂತ. ಅಂತೂ ನಮ್ಮ ುಟುಂಬದ ಮರ್ಯಾದೆ ಹಾಳು ಮಾಡಿಬಿಟ್ಟೆಯಲ್ಲೋ. ಎಲ್ಲರೂ ಸ್ವಾರ್ಥಿಗಳು ಈಗಿನ ಮಕ್ಕಳಿಗೆ ಅಪ್ಪ ಅಮ್ಮನಿಗಿಂತ ಈ ಲವ್ವೇ ಹೆಚ್ಚಾಗಿ ಹೋಗಿದೆ. ಎಂದು ಒಂದೇ ಸಮನೆ ಅಳುತ್ತಿದ್ದರು. ಅಷ್ಟರಲ್ಲಿ ಅಪ್ಪ, ಲೇ ಮೊದಲು ಅಳು ನಿಲ್ಲಿಸು ಅವನು ಏನು ಹೇಳುತ್ತಾನೋ ಪೂರ್ತಿ ಕೇಳೋಣ ಯಾಕೆ ಸುಮ್ಮನೆ ಅಳುತ್ತೀಯ ಎಂದು ನನ್ನ ಕಡೆ ನೋಡಿ ಯಾರಪ್ಪ ಹುಡುಗಿ ಏನು ಮಾಡುತ್ತಿದ್ದಾಳೆ ಅವರು ಯಾವ ಜಾತಿಯವರು ಎಲ್ಲ ಸ್ವಲ್ಪ ವಿವರವಾಗಿ ಹೇಳಪ್ಪ ಎಂದರು.

ಅಪ್ಪ ಅವಳ ಹೆಸರು ಪಾವನಿ ಎಂದು, ನಾವು ಧರ್ಮಸ್ಥಳಕ್ಕೆ ಹೋಗಿದ್ದಾಗ ಭೇಟಿ ಮಾಡಿದೆ. ಅವಳನ್ನು ನೋಡಿದ ತಕ್ಷಣ ಇಷ್ಟ ಆಯ್ತು. ಆಮೇಲೆ ಅಮ್ಮ ಮುಂಚೆನೇ ನಮ್ಮ ಜಾತಿಯವರನ್ನೇ ಮದುವೆ ಮಾಡಬೇಕು ಅಂದಿದ್ದರಲ್ಲ ಅದಕ್ಕೆ ಅವಳ ಜಾತಿ ತಿಳಿದುಕೊಂಡೆ ಅವಳದೂ ನಮ್ಮದೇ ಜಾತಿ. ಅವಳೂ ಬಿ.ಇ ಮುಗಿಸಿ ಒಂದು ಸಾಫ್ಟ್ವೇರ್ ಕಂಪನಿ ಯಲ್ಲಿ ಕೆಲಸ ಮಾಡುತ್ತಿದ್ದಾಳೆ.

ನೋಡೇ ಅವಳದೂ ನಮ್ಮದೇ ಜಾತಿ ಅಂತೆ ಇನ್ನೇನು ಸಮಸ್ಯೆ, ಹೇಗಿದ್ದರೂ ಹುಡುಗಿಯೂ ಕೆಲಸಕ್ಕೆ ಹೋಗುತ್ತಿದ್ದಾಳೆ, ಜಾತಿ ಬಿಟ್ಟಂತೂ ಹೋಗುತ್ತಿಲ್ಲವಲ್ಲ ಹೇಗಿದ್ದರೂ ಮದುವೆ ಮಾಡೋದಂತೂ ಉಂಟು. ಇದೆ ಹುಡುಗಿಯನ್ನು ನೋಡೋಣ ಎಲ್ಲ ಹೊಂದಿದರೆ ಮಾಡೋಣ ಬಿಡು ಎಂದರು. ಅದಕ್ಕೆ ಅಮ್ಮ ಕಣ್ಣೊರೆಸಿಕೊಂಡು ಏನೋಪ ಅಂತೂ ನೀವೆಲ್ಲ ಒಂದಾಗಿ ನನ್ನನ್ನು ಒಂಟಿ ಮಾಡಿಬಿಟ್ಟಿರಿ. ಏನಾದರೂ ಮಾಡಿಕೊಳ್ಳಿ. ಮೊದಲು ಆ ಹುಡುಗಿಯ ಜಾತಕ ತರಿಸಲು ಹೇಳಿ ನೋಡೋಣ ಎಂದು ಏಳಲು ಸಿದ್ಧವಾದರು.

ಅಪ್ಪ, ಅಮ್ಮ ಎಲ್ಲ ಸರಿ ಆದರೆ ಒಂದು ಸಮಸ್ಯೆ ಇದೆ ಎಂದೆ. ಅಮ್ಮ ಮತ್ತೆ ಕೂತು ಶುರು ಮಾಡಿದರು. ನನಗೆ ಗೊತ್ತು ಏನೋ ಒಂದು ಯಡವಟ್ಟು ಇರುತ್ತದೆ ಎಂದು ಏನದು ಕೇಳಿ ಎಂದು ಅಪ್ಪನಿಗೆ ಹೇಳಿದರು. ಅಪ್ಪ ನನ್ನನ್ನು ನೋಡಿ ಕಣ್ಸನ್ನೆ ಯಲ್ಲೇ ಹೇಳು ಎಂದರು. ಆ ಹುಡುಗಿಗೆ ಆಗಲೇ ಒಂದು ಮದುವೆ ಆಗಿ ವಿಚ್ಚೇದನ ಆಗಿದೆ ಎಂದೆ. ಎರಡು ನಿಮಿಷ ಅಪ್ಪ ಅಮ್ಮ ಇಬ್ಬರೂ ಶಾಕ್ ನಿಂದ ಏನೂ ಮಾತಾಡದೆ ಒಬ್ಬರ ಮುಖ ಇನ್ನೊಬ್ಬರು ನೋಡುತ್ತಿದ್ದರು.

ಅಪ್ಪ ಶುರು ಮಾಡಿದರು. ನೋಡು ಭಗತ್ ನೀನು ಲವ್ ಮಾಡಿ ಮದುವೆ ಆಗುತ್ತೀಯ ಎಂದೆ ಓಕೆ ನನಗೇನೂ ಅಭ್ಯಂತರವಿಲ್ಲ. ಆದರೆ ಎರಡನೇ ಮದುವೆ ಇದು ಆಗದ ವಿಷಯ. ಆ ಹುಡುಗಿಯನ್ನು ಮರೆತು ಬಿಡುವುದು ಒಳ್ಳೆಯದು ಎಂದು ಎದ್ದು ಹೊರಟರು. ನಾನು ಅಪ್ಪ ಅಪ್ಪ ಅಂತ ಕೂಗುತ್ತಲೇ ಇದ್ದೆ. ಆದರೆ ಅವರ ಪಾಡಿಗೆ ಅವರು ರೂಮಿಗೆ ಹೋಗಿ ಬಿಟ್ಟರು. ಇನ್ನು ಅಮ್ಮ, ಸುಮ್ಮನೆ ನನ್ನ ಮುಖ ನೋಡಿ ಎದ್ದು ಒಳಗೆ ಹೋದರು. ಅವರೂ ಸಹ ನಾನು ಕೂಗುತ್ತಿದ್ದರೂ ಹಾಗೆ ಹೊರಟು ಹೋದರು. ನಾನು ಪೂಜಾ ಕಡೆ ನೋಡುತ್ತಾ ಏನು ಮಾಡುವುದು ಎಂಬಂತೆ ಅವಳನ್ನೇ ನೋಡುತ್ತಿದ್ದೆ.

ನೋಡೋ ಇದೆಲ್ಲ ಒಂದು ದಿನಕ್ಕೆ ನಡೆಯೋ ಕೆಲಸ ಅಲ್ಲ. ಬಹಳ ಸಮಯ ಬೇಕು. ಅಷ್ಟರವರೆಗೆ ಪಾವನಿ ಕಾಯುತ್ತಾಳಲ್ವಾ ಎಂದಳು. ನಾನು ಸುಮ್ಮನೆ ತಲೆ ಆಡಿಸಿದೆ. ಹಾಗಿದ್ದರೆ ಈಗ ಏನೂ ಯೋಚನೆ ಮಾಡದೆ ಹೋಗಿ ಆರಾಮಾಗಿ ಊಟ ಮಾಡಿ ಮಲ್ಕೋ ಹೇಗಿದ್ದರೂ ಇರೋ ವಿಷಯವನ್ನು ಏನೂ ಮುಚ್ಚಿಡದೆ ಎಲ್ಲಾ ಹೇಳಿದ್ದೀಯಲ್ಲ. ನೋಡೋಣ ಬಿಡು ಎಂದು ಅವಳೂ ಎದ್ದು ಹೋದಳು. ನನಗೆ ಏನೋ ಮನಸೆಲ್ಲ ನಿರಾಳವಾದಂತೆ ಅನಿಸುತ್ತಿತ್ತು. ಸೀದಾ ಅಡಿಗೆ ಮನೆಗೆ ಹೋಗಿ ಊಟ ಮಾಡಿಕೊಂಡು ರೂಮಿಗೆ ಬಂದು ಪಾವಿಗೆ ಗುಡ್ ನೈಟ್ ಸ್ವೀಟ್ ಹಾರ್ಟ್ ಎಂದು ಮೆಸೇಜ್ ಕಳಿಸಿದೆ. ಅವಳೂ ಗುಡ್ ನೈಟ್ ಹನಿ ಎಂದು ಮೆಸೇಜ್ ಕಳಿಸಿದಳು. ಅವಳ ಮೆಸೇಜ್ ನೋಡಿ ಖುಷಿಯಿಂದ ಮಲಗಿದೆ.

Rating
No votes yet