ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 17
ನಂತರದ ಒಂದು ವಾರ ಅಮ್ಮ ನನ್ನ ಜೊತೆ ಮಾತಾಡಲಿಲ್ಲ. ಏನು ಇದ್ದರೂ ಪೂಜಾ ಕೈಲಿ ಹೇಳಿ ಕಳುಹಿಸುತ್ತಿದ್ದರು. ಅದೂ ಬೇರೆ ಏನೂ ಅಲ್ಲ ಅವಳನ್ನು ಮರೆತು ಬಿಡಬೇಕಂತೆ. ಅಪ್ಪ ಅಮ್ಮ ಬೇಕೋ ಅವಳು ಬೇಕೋ ನಿರ್ಧಾರ ಮಾಡಬೇಕಂತೆ, ಅವಳೇ ಬೇಕೆಂದಿದ್ದರೆ ಈ ಮನೆಯಲ್ಲಿ ಒಂದು ನಿಮಿಷವೂ ಇರಬಾರದಂತೆ ಅಥವಾ ಅವರೇ ಬೇರೆ ಹೋಗುತ್ತಾರಂತೆ. ಬರೀ ಇಂಥಹ ವಿಷಯಗಳನ್ನೇ ಹೇಳಿ ಕಳುಹಿಸುತ್ತಿದ್ದರು. ಅಪ್ಪ ಅಂತೂ ಹೇಳಿಬಿಟ್ಟಿದ್ದರು ಆ ಹುಡುಗಿಯ ವಿಷಯ ಬಿಟ್ಟು ಬೇರೆ ಏನಾದರೂ ಇದ್ದರೆ ಮಾತ್ರ ಮಾತಾಡು ಎಂದು. ನನಗೆ ದಿಕ್ಕೇ ತೋಚದ ಹಾಗೆ ಆಗಿತ್ತು.
ಶನಿವಾರ ಪಾವಿಯನ್ನು ಭೇಟಿ ಮಾಡಲು ಮಲ್ಲೇಶ್ವರಂ ಬಳಿ ಹೋಗಿದ್ದೆ. ಅಲ್ಲಿಂದ ಅವಳನ್ನು ಕರೆದುಕೊಂಡು ಬಂದು ಒಂದು ಪಾರ್ಕಿನಲ್ಲಿ ಕೂತು ಮಾತಾಡುತ್ತಿದ್ದೆವು. ಅವಳು ಕೇಳಿದಳು, ಏನೋ ಮನೆಯಲ್ಲಿ ಹೇಳಿದ್ಯ? ಹಾ ಪಾವಿ ಹೇಳಿದೆ. ಏನಂದರು ಮನೆಯವರು ಎಂದು ಕುತೂಹಲದಿಂದ ಕೇಳಿದಳು. ಅವರಿಗೆ ಸ್ವಲ್ಪ ಸಮಯ ಬೇಕಂತೆ ಎಂದು ಸುಳ್ಳು ಹೇಳಿದೆ. ಬಹುಷಃ ಅವಳಿಗೆ ನನ್ನ ಮಾತುಗಳು ಸುಳ್ಳೆಂದು ಗೊತ್ತಾಯಿತು ಅನಿಸಿ ಯಾಕೋ ಭಗತ್ ಸುಳ್ಳು ಹೇಳ್ತೀಯ. ನಿನ್ನ ಕಣ್ಣೆ ಹೇಳತ್ತೆ ನೀನು ಹೇಳುತ್ತಿರುವುದು ಸುಳ್ಳು ಎಂದು ನಿಜ ಹೇಳು ಏನೆಂದರು ಎಂದು. ಇನ್ನೇನಂತಾರೆ ಪಾವಿ ಆಗಲ್ಲ ಅಂದರು. ನಾನು ನಿನಗೆ ಮುಂಚೆಯೇ ಹೇಳಿದ್ದೆ ತಾನೇ ಇದೆಲ್ಲ ಆಗೋ ಕೆಲಸ ಅಲ್ಲ ಎಂದು. ಪಾವಿ ನಿನಗೆ ನನ್ನ ಮೇಲೆ ನಂಬಿಕೆ ಇದ್ಯಾ? ಯಾಕೋ, ಇದ್ಯಾ ಹೇಳು ಮೊದಲು. ಹಾ ಇದೆ. ಹಾಗಿದ್ದರೆ ಸ್ವಲ್ಪ ದಿವಸ ಕಾಯಿ ಅವರನ್ನು ಒಪ್ಪಿಸೋ ಜವಾಬ್ದಾರಿ ನನ್ನದು ಎಂದೆ. ಹಾ ಪಾವಿ ಇನ್ನೊಂದು ವಿಷಯ ನಿನ್ನ ರೆಸ್ಯೂಮ್ ಕಳಿಸು ನನಗೆ ನಮ್ಮ ಆಫೀಸ್ ನಲ್ಲಿ ಒಪೆನಿಂಗ್ಸ್ ನಡೀತಿದೆ. ನಿನಗೂ ಅಲ್ಲೇ ಟ್ರೈ ಮಾಡ್ತೀನಿ ಈಗಲ್ಲ ಅಂದ್ರೂ ಮುಂದೆ ಇಬ್ಬರೂ ಒಟ್ಟಿಗೆ ಕೆಲಸಕ್ಕೆ ಹೋಗಬಹುದಲ್ಲವ ಎಂದು ನಕ್ಕೆ.
ಲೋ ಕೂಸು ಹುಟ್ಟಕ್ಕೆ ಮುಂಚೆನೇ ಕುಲಾವಿ ಹೊಲೆಸಿದರಂತೆ ಹಾಗಾಯಿತು ನಿನ್ನ ಕಥೆ. ಇನ್ನ ನಿಮ್ಮ ಮನೆಯವರು ಒಪ್ಪಿಲ್ಲ, ಒಪ್ಪುತ್ತಾರೋ ಇಲ್ಲವೋ ಸಹ ಗೊತ್ತಿಲ್ಲ ಆಗಲೇ ಎಷ್ಟೊಂದು ಮುಂದಾಲೋಚನೆ ಆಯ್ತು ಬಿಡು ಕಳಿಸ್ತೀನಿ. ಭಗತ್ ಒಂದು ವಿಷಯ. ಪ್ಲೀಸ್ ಹೇಗಾದರೂ ನಿಮ್ಮ ಮನೆಯವರನ್ನು ಒಪ್ಪಿಸು. ನನಗೆ ನೀನು ಬೇಕು ಕಣೋ, ನಿನ್ನ ಪ್ರೀತಿ ಬೇಕು ಕಣೋ, ನನ್ನ ನೋವೆಲ್ಲ ಮರೆಯಲು ನೀನು ಬೇಕು ಕಣೋ. ನೀನು ನನ್ನ ಬಾಳಿನಲ್ಲಿ ಹೊಸ ಆಶಾಕಿರಣದಂತೆ ಬಂದಿದ್ದೀಯ ನಿನ್ನನ್ನು ಕಳೆದುಕೊಳ್ಳಲು ನನಗೆ ಮನಸಿಲ್ಲ ಎಂದು ನನ್ನೆಡೆಗೆ ನೋಡಿದಳು. ನನಗೆ ಅವಳ ಮಾತುಗಳನ್ನು ಕೇಳಿ ಪಾವಿ ನನ್ನ ನಂಬು ನಾನು ನಿನ್ನನ್ನು ಬಿಡುವುದಿಲ್ಲ. ಐ ಲವ್ ಯೂ ಸೊ ಮಚ್ ಎಂದೆ. ಅವಳು ಮೀ ಟೂ ಎಂದಳು.
ನಾನು ಮನೆಯಲ್ಲಿ ಪಾವನಿ ವಿಷಯ ಹೇಳಿ ಮೂರು ತಿಂಗಳಾಗಿತ್ತು. ಆದರೆ ಯಾವುದೇ ಅಭಿವೃದ್ಧಿ ಇರಲಿಲ್ಲ. ಅಪ್ಪಿ ತಪ್ಪಿ ನಾನೇನಾದರೂ ಆ ವಿಷಯ ತೆಗೆದರೆ ಮನೆಯಲ್ಲಿ ಗಂಗಾ ಕಾವೇರಿ ಹರಿಯುತ್ತಿದ್ದಳು ಅಮ್ಮನ ಕಣ್ಣಿನಿಂದ. ಇಲ್ಲ ಅಂದರೆ ಮನೆ ಇಂದ ಆಚೆ ಕಳಿಸುವುದು ಇಲ್ಲ ಮನೆ ಬಿಟ್ಟು ಹೋಗುವುದು ಬರೀ ಇದೆ ಮಾತುಗಳು ಬರುತ್ತಿದ್ದವು. ಅಪ್ಪನ ಬಳಿ ಮಾತಾಡಲು ಪ್ರಯತ್ನಿಸಿದರೆ ಅವರು, ನೋಡೋ ನಿಮ್ಮಮ್ಮನನ್ನು ನೋಯಿಸಬೇಡ ಅವಳು ನಿಮಗಾಗಿ ತನ್ನ ಜೀವವನ್ನೇ ತೇಯ್ದಿದ್ದಾಳೆ ಎಂದರು. ಅಪ್ಪ ಅಮ್ಮನನ್ನು ಒಪ್ಪಿಸುವ ಜವಾಬ್ದಾರಿ ನನ್ನದು. ನಿನಗೆ ಒಪ್ಪಿಗೆ ಇದ್ಯಾ? ನೋಡು ನಾನು ಅವತ್ತೇ ನಿನಗೆ ಹೇಳಿದ್ದೇನೆ ಜೀವನ ಪೂರ್ತಿ ಸಂಸಾರ ಮಾಡಬೇಕಾಗಿರುವುದು ನೀನು. ನೀವು ಚೆನಾಗಿದ್ದರೆ ನನಗಷ್ಟು ಸಾಕು. ನಾನು ನಿಮ್ಮಮ್ಮನ ಹಾಗೆ ಜನಕ್ಕೆ ಹೆದರುವುದಿಲ್ಲ. ಯಾಕೆಂದರೆ ಇವತ್ತು ಮಾತಾಡುವರು ನಾಳೆ ನಮ್ಮ ಕಷ್ಟಕ್ಕೆ ಯಾರೂ ಬರುವುದಿಲ್ಲ. ಆದರೆ ನಿಮ್ಮಮ್ಮ ಅವರ ಬಂಧುಗಳಿಗೆ ಹೆದರುತ್ತಾಳೆ. ಮೊದಲು ಅವಳನ್ನು ಒಪ್ಪಿಸು. ಆದರೆ ಅವಳಿಗೆ ನೋವಾಗುವಂತೆ ನಡೆದು ಕೊಳ್ಳಬೇಡ. ಆಮೇಲೆ ಆದಷ್ಟು ಆ ಹುಡುಗಿಯ ಜೊತೆ ಮನೆಯಲ್ಲಿದ್ದಾಗ ಮಾತಾಡಬೇಡ. ಆಚೆ ಹೋದಾಗ ಹೇಗಿದ್ದರೂ ನೀವು ಮಾತಾಡುವುದು ಭೇಟಿ ಮಾಡುವುದು ಇದ್ದಿದ್ದೆ. ಆಯ್ತಪ್ಪ ತುಂಬಾ ಥ್ಯಾಂಕ್ಸ್ ಎಂದು ಖುಷಿಯಿಂದ ಹೇಳಿದ್ದೆ.
ಅಂದು ರಾತ್ರಿ ನಾನು ರೂಮಿನಲ್ಲಿದ್ದಾಗ ಅಪ್ಪ ಅಮ್ಮನ ಬಳಿ ಮಾತಾಡುತ್ತಿರುವುದು ಕೇಳಿತು. ನೋಡೇ ಮಕ್ಕಳ ಸಂತೋಷವೇ ನಮ್ಮ ಸಂತೋಷ
Comments
ಉ: ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 17
In reply to ಉ: ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 17 by sasmi90
ಉ: ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 17