ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 4
Hi Pavani here hru ? ಎಂದಿತ್ತು. ನನಗೆ ಒಮ್ಮೆಲೇ ಸಂತೋಷ, ಆಶ್ಚರ್ಯ, ಕೋಪ ಎಲ್ಲ ಒಟ್ಟಿಗೆ ಆಯಿ
ಅಮ್ಮ ಒಳಗಿಂದ ಏನಪ್ಪಾ ಯಾವುದಕ್ಕೆ ಪ
ಅಬ್ಬಾ ಅಂತೂ ಒಂದು ವಾರ ಕಾಯಿಸಿದ ಮೇಲೆ ನೆನಪಾದೆನ ಎಂದುಕೊಂಡು ಸಂತೋಷದಲ್ಲಿ ಮುಳುಗಿದೆ. ಮರುಕ್ಷಣವೆ ಹೌದು ನಾನ್ಯಾಕೆ ಈ ಪರಿ ಒದ್ದಾಡುತ್ತಿದ್ದೇನೆ. ಅವಳ ಮನಸಿನಲ್ಲಿ ಏನಿದೆಯೋ. ಒಂದು ವೇಳೆ ಅವಳು ನನ್ನ ಪ್ರೀತಿಯನ್ನು ನಿರಾಕರಿಸಿ ಬರೀ ಸ್ನೇಹಿತರಾಗಿರೋಣ ಎಂದರೆ ಖಂಡಿತ ಬೇಡ ಎನ್ನಬೇಕು. ಅಥವಾ ಅವಳು ನನ್ನ ಮೇಲೆ ಕೋಪ ಮಾಡಿಕೊಂಡು ಮಾತಾಡುವುದೇ ಬಿಟ್ಟು ಬಿಟ್ಟರೆ ಥೂ ಯಾಕಪ್ಪ ನನಗೆ ಈ ಅವಸ್ಥೆ. ಅವಳನ್ನು ನೋಡುವುದಕ್ಕೆ ಮುಂಚೆ ಚೆನ್ನಾಗೆ ಇದ್ದೆ. ಅವಳ ಕಣ್ಣುಗಳಲ್ಲಿ ಅದೇನೋ ಸಮ್ಮೋಹನ ಶಕ್ತಿ ಇದೆ. ಅದೇ ನನ್ನನ್ನು ಈ ಪರಿ ಮಾಡಿರುವುದು, ಇಂದು ಸಂಜೆ ಕರೆ ಮಾಡಿದಾಗ ಲೋಕಾಭಿರಾಮವಾಗಿ ಮಾತಾಡುವುದು ಸಾಕು ಎಂದುಕೊಂಡು ಅದೇ ಖುಷಿಯಲ್ಲಿದ್ದೆ.
ಯಾವಾಗ್ಯಾವಾಗ ಸಂಜೆ ಆಗುತ್ತೋ ಎಂದು ಕಾಯುತ್ತ ಕರೆ ಮಾಡಿದ ಸ್ನೇಹಿತರಿಗೂ ಇಂದು ಸಂಜೆ ಸ್ವಲ್ಪ ತಡವಾಗಿ ಬರುತ್ತೇನೆ ಎಂದು ಹೇಳಿ ಸರಿಯಾಗಿ ಐದು ಮುಕ್ಕಾಲಿಗೆ ಆಚೆ ಬಂದೆ. ಯಾರೂ ಇಲ್ಲದಿರುವ ಜಾಗ ನೋಡಿಕೊಂಡು ಸರಿಯಾಗಿ ಆರು ಗಂಟೆಗೆ ಕರೆ ಮಾಡಿದೆ. ಒಂದು, ಎರಡು, ನಾಲ್ಕು ಆರು ಎಂಟು ಬಾರಿ ರಿಂಗಾದರೂ ಫೋನ್ ಎತ್ತಲಿಲ್ಲ. ಮತ್ತೊಮ್ಮೆ ಮಾಡಲೋ ಬೇಡವೋ ಎಂದು ಯೋಚಿಸುತ್ತಿರುವಾಗಲೇ ಅವಳೇ ವಾಪಸ್ ಕರೆ ಮಾಡಿದ್ದಳು. ನಾನು ಕೂಡಲೇ ಎತ್ತಲಿಲ್ಲ. ಅವಳು ಮಾತ್ರ ಎತ್ತುವುದಿಲ್ಲ ನಾನ್ಯಾಕೆ ಎತ್ತಬೇಕು ಎಂದು ಸುಮ್ಮನಿದ್ದೆ. ಒಂದು ಕಾಲ್ ಕಟ್ ಆದ ಮೇಲೆ ಮತ್ತೆ ಮಾಡಿದಳು. ಈ ಬಾರಿ ಫೋನ್ ಎತ್ತಿ ಹಲೋ ಎಂದೆ. ಹಾಯ್ ನಾನು ಪಾವನಿ ಎಂದಳು. ಹಾಯ್ ಗೊತ್ತಾಯಿತು ಹೇಳಿ ಎಂದೆ. ಅವಳು ಭಗತ್ ನಮ್ಮ ತಾತ ಹೋಗಿ ಬಿಟ್ಟಿದ್ದಾರೆ ನಾನು ಬೆಳಿಗ್ಗೆ ಮಾಡುತ್ತೇನೆ ಸಾರೀ ಎಂದು ಇಟ್ಟುಬಿಟ್ಟಳು. ನನಗೆ ಬಂದ ಕೋಪಕ್ಕೆ ಫೋನ್ ಎತ್ತಿ ಬಿಸಾಕಿ ಬಿಡೋಣ ಎನ್ನುವಂತಾಗಿತ್ತು. ಇವರ ತಾತ ಇವಾಗಲೇ ಹೋಗಬೇಕ, ಇಷ್ಟು ದಿನ ಇದ್ದ ತಾತ ಇವತ್ತೇ ನಿನಗೆ ಟೈಮ್ ಬಂತಾ, ನನ್ನ ಗ್ರಹಚಾರ ಕೆಟ್ಟಿದ್ದರೆ ಯಾರು ತಾನೇ ಏನು ಮಾಡುತ್ತಾರೆ ಎಂದುಕೊಂಡು ಸ್ನೇಹಿತರ ಬಳಿ ಹೋದೆ.
ಸ್ನೇಹಿತರೆಲ್ಲ ಏನಮ್ಮ ಭಗತ್ ಊರಿನಿಂದ ಬಂದಾಗಿನಿಂದ ಬಹಳ ಬದಲಾದಂತೆ ಕಾಣುತ್ತಿದ್ದೀಯ ಏನು ವಿಷಯ. ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ಏನಾದ್ರೂ ಪ್ರತ್ಯಕ್ಷವಾಗಿ ಏನಾದರೂ ಹೇಳಿದ್ದಾರ? ಅಥವಾ ಬಾಹುಬಲಿಯನ್ನು ನೋಡಿ ನೀನು ಏನಾದರೂ ತಪ್ಪು ನಿರ್ಧಾರ ತೆಗೆದುಕೊಂಡಿದ್ದೀಯ ಎಂದು ಕುಹಕವಾಡಿ ನಕ್ಕರು. ನನಗೆ ಒಳಗೆ ಕುದಿಯುತ್ತಿದ್ದರೂ ಅದನ್ನು ತೋರಗೊಡದೆ ಅಯ್ಯೋ ಹಾಗೇನು ಇಲ್ಲ ಆಫೀಸಿನಿಂದ ನನ್ನ ಸಹೋದ್ಯೋಗಿ ಒಬ್ಬರು ಬರುತ್ತೇನೆ ಎಂದಿದ್ದರು ಅವರನ್ನು ಮೀಟ್ ಮಾಡಿ ಬರುವಷ್ಟರಲ್ಲಿ ತಡವಾಯಿತು ಅಷ್ಟೇ ಎಂದೆ. ದಯವಿಟ್ಟು ಇಂದು ಮಾತ್ರ ನನ್ನನ್ನು ಸಿನೆಮಾಗೆ ಕರೆಯಬೇಡಿ ದಯವಿಟ್ಟು ನೀವು ಹೋಗಿ ಬನ್ನಿ ಎಂದೆ. ಸ್ವಾಮಿ ಇವತ್ತು ಯಾವ ಸಿನೆಮಾನು ಇಲ್ಲ ಹಾಗೆ VV ಪುರಂ ಗೆ ಹೋಗಿ ಏನಾದರೂ ತಿಂದು ಬರೋಣ ಎಂದರು. ಇನ್ನು ಅದಕ್ಕೂ ಬರಲ್ಲ ಎಂದರೆ ಇಲ್ಲದ ತಲೆ ನೋವು ಎಂದುಕೊಂಡು ಸರಿ ನಡೀರಿ ಎಂದೆ.