ಕನಕದಾಸರು ಮತ್ತು ಗೌರವ, ಪ್ರಶಸ್ತಿಯ ಆಸೆ.

ಕನಕದಾಸರು ಮತ್ತು ಗೌರವ, ಪ್ರಶಸ್ತಿಯ ಆಸೆ.

ಮಾಸ್ತಿಯವರು ಕನಕದಾಸರ ಕುರಿತು ಬರೆಯುವಾಗ ಹೀಗೆ ಬರೆದಿದ್ದಾರೆ .

"ಕುರುಬ ವಂಶದಲ್ಲಿ ಜನಿಸಿ ತಮ್ಮ ಪಾಳೆಯಪಟ್ಟನ್ನು ಕೆಲವುಕಾಲ ಆಳಿ ಆಮೇಲೆ ಹರಿದಾಸನ ಪದವಿಗೇರಿದ ಕನಕದಾಸರು ತಮ್ಮ ಬಾಳಿನ ರೀತಿಯಿಂದ ತಮ್ಮ ಗುರು ವ್ಯಾಸರಾಯರಿಗೆ ಮೆಚ್ಚುಗೆಯ ಶಿಷ್ಯರಾದರು . ದ್ವಿಜರಾದ ಗುರು , ದ್ವಿಜವಂಶದವನಲ್ಲದ ಈ ಶಿಷ್ಯ ತಮಗಿಂತ ಹೆಚ್ಚಿನ ಸಿದ್ಧಿಯನ್ನು ಪಡೆದಿರುವ ದೈವಭಕ್ತ ಎಂದು ಇವರನ್ನು ಹೊಗಳುತ್ತಿದ್ದರಂತೆ .
ವ್ಯಾಸರಾಯರು ಕನಕದಾಸರು ತಮಗಿಂತ ಹಿರಿಯರೆಂದು ಹೊಗಳಿದರೂ ಕನಕದಾಸರು ತಾವು ಗುರುವಿನ ಪೀಠದಲ್ಲಿ ಕುಳಿತೇನು ಎಂದು ಮುಂದರಿಯಲಿಲ್ಲ. ಈ ನಡತೆಯ ರಹಸ್ಯ ಏನು ಎಂದು ಆಧುನಿಕರಾದ ನಾವು ವಿಚಾರ ಮಾಡಬೇಕು. "

ಇಲ್ಲಿನ "ರಹಸ್ಯ" ಏನೆಂದು ನನಗೆ ತಿಳಿಯಲಿಲ್ಲ ; ( ನಿಮಗೆ ಗೊತ್ತಿದ್ದರೆ ಅಥವಾ ತೋಚಿದರೆ ತಿಳಿಸಿ ) . ಆದರೆ ಇಂಥ ಜನ ನಮ್ಮ ನಡುವೆ ಇದ್ದಾರೆ , ಅರ್ಹತೆಯಿದ್ದೂ ಪ್ರಶಸ್ತಿ,ಗೌರವ ಬಯಸದೆ "ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ ? " ಎಂದು ಹಾಡಿಕೊಂಡು ಇರುವವರು . ಇಂಥವರೇ ಈ ರಹಸ್ಯವನ್ನು ತಿಳಿಹೇಳಿದರೆ ಬಲು ಚೆನ್ನು.

Rating
No votes yet