ಕನಸಿನಲ್ಲಿ ನನಸಾದ ಕನಸು

ಕನಸಿನಲ್ಲಿ ನನಸಾದ ಕನಸು

ನಾಲ್ಕೈದು ಹುಡುಗಿಯರ ಗುಂಪೊಂದು ರಸ್ತೆ ಬದಿಯಲ್ಲಿ ನಿಂತು ಏನೋ ಚರ್ಚಿಸುತ್ತಿತ್ತು. ನಾನು ಆ ಗುಂಪನ್ನು ಹಾದುಹೋಗುವಾಗ, ಅಲ್ಲಿದ್ದ ಒಂದು ಸುಂದರ ಹೆಣ್ಣು ಕಣ್ಮನ ಸೆಳೆದಳು. ಕವಿಗಳು ವರ್ಣಿಸುವ ಹಾಗೆ ಅತಿರೂಪ ಲಾವಣ್ಯವತಿಯಾಗಿದ್ದಳು. ಕೆಂಪುಗುಲಾಬಿ ಬಣ್ಣದ ಸೀರೆಯನ್ನುಟ್ಟು, ಹಣೆಯಲ್ಲಿ ಸಣ್ಣದಾಗಿ ಕುಂಕುಮವನ್ನಿರಿಸಿ (ತಂದೆ ತಾಯಿಯ ಒತ್ತಾಯದ ಮೇರೆಗೆ ಎನ್ನುವ ಹಾಗೆ), ಮುಡಿಯಲ್ಲಿ ಅದ್ಭುತ ಸುವಾಸನೆ ಬೀರುವ ಮಲ್ಲಿಗೆ ಹೂವನ್ನು ಮುಡಿದಿದ್ದಳು. ಆಕೆಯನ್ನು ಈ ಮೊದಲೆ ನೋಡಿದ ಹಾಗೆ, ಬಹಳ ವರ್ಷಗಳು ಒಡನಾಡಿರುವ ಹಾಗನ್ನಿಸಿತು. ನನಗೆ ದೂರದ್ದು ಸ್ವಲ್ಪ ಸರಿಯಾಗಿ ಕಾಣಿಸದು, ಹಾಗಗಿ ಹತ್ತಿರದಿಂದ ನೋಡಿ, ಧೃಡೀಕರಿಸಿಕೊಳ್ಳುವ ಎಂದು ಹತ್ತಿರ ಹೋದೆ. ನನ್ನ ಕಣ್ಣನ್ನು ನಾನೆ ನಂಬಲಾಗಲಿಲ್ಲ. ಅವಳೇ... ಅವಳೇ... ಮೂರು ವರ್ಷಗಳಿಂದ ಯಾರನ್ನು ಒಮ್ಮೆಯಾದರು ನೋಡಬೇಕೆಂದು, ಮಾತನಾಡಿಸಬೇಕೆಂದು, ನನ್ನ ಅಳಲನ್ನು ಹೇಳಿಕೊಂಡು ಅತ್ತುಬಿಡಬೇಕೆಂದುಕೊಂಡಿದ್ದೆನೋ, ಅವಳೇ ನನ್ನೆದುರಿಗೆ ನಿಂತಿದ್ದಾಳೆ... ಮನಸ್ಸಿಗೆ ಎಲ್ಲಿಲ್ಲದ ಸಂತೋಷವಾಯಿತು. ಸೂತ್ರ ಹರಿದ‌ ಗಾಳಿಪಟದ ಹಾಗೆ, " ಯಾವ ಜನ್ಮದ ಮೈತ್ರಿ, ಈ ಜನ್ಮದಲಿ ಬಂದು, ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ " ಎಂದು ಹಾಡಲು ಶುರುವಿಟ್ಟಿತು. ಸಂತೋಷಕ್ಕೆ ಮಾತುಗಳೆ ಹೊರಬರದ ಪರಿಸ್ಥಿತಿ ಆವರಿಸಿತು. ಆದರೂ ಸಿಕ್ಕ ಈ ಅವಕಾಶವನ್ನು ಕಳೆದುಕೊಳ್ಳಬಾರದೆಂದು, ಮಾತಾಡಿಸಿಯೆ ಬಿಡಬೇಕೆಂದು ಆ ಗುಂಪಿನ ಮುಂದೆ ಹೋಗಿ ನಿಂತೆ...
ಆಕೆ ಮೊದಲಿಗಿಂತ ಸ್ವಲ್ಪ ದಪ್ಪಗಾಗಿದ್ದಳು. ಕಣ್ಣುಗಳು ಕಪ್ಪಿಟ್ಟಿದ್ದವು (ಕಂಪ್ಯೂಟರ್ ಮುಂದೆ ಕೂರುವ ಪರಿಣಾಮ). ಸಹಜ ಸುಂದರಿಯಾಗಿದ್ದ, ಎಂದಿಗೂ ಸೌಂದರ್ಯವರ್ಧಕಗಳನ್ನು ಉಪಯೋಗಿಸದ ನನ್ನವಳು, ಈಗ ಅವೆಲ್ಲವನ್ನು ಕೃತ್ರಿಮ ಸೌಂದರ್ಯಕ್ಕಾಗಿ ಬಳಸುತ್ತಿರುವುದನ್ನು ಕಂಡು ಸ್ವಲ್ಪ ಬೇಸರವಾಯಿತು. 
ಗುಂಪಿನಲ್ಲಿದ್ದ ಎಲ್ಲರೂ ನನ್ನನ್ನೊಮ್ಮೆ ಹಾಗೆ ದುರುಗುಟ್ಟಿದರು. ನಾನು ನಕ್ಕೆ, ಅವರು ನಗಲಿಲ್ಲ. ನನ್ನಾಕೆ ನನ್ನನ್ನು ಮೊದಲಿಗೆ ಗುರುತು ಹಿಡಿಯಲಿಲ್ಲ (ಏಕೆಂದರೆ, ನಾನೂ ಕೂಡ ಒಂದೆರಡು ಸುತ್ತು ದಪ್ಪಗಾಗಿದ್ದೆ, ಮೂಗಿನ ಮೇಲೆ, ಕಣ್ಣಿನ ಮುಂದೆ ಸುಲೋಚನ ಬಂದಿದ್ದಳು).
ಸ್ವಲ್ಪ ದೃಷ್ಠಿ ಸಮರದ ನಂತರ, ಏನೊ ಹೊಳೆದವಳಂತೆ, ಮಂದಹಾಸದೊಂದಿಗೆ " ಹೇ, ಗುರು... ನೀನಾ.. ಗುರ್ತೆ ಹಿಡಿಯೋಕ್ಕಾಗ್ಲಿಲ್ವಲ್ಲೊ... ಹೇಗಿದ್ದೀಯೊ ?? " ಎಂದಳು. 
ಮೂರು ವರ್ಷಗಳ ವಿರಹವೇದನೆ ಹಾಗೆ ಕರಗಿಹೋಯಿತು ಆ ಮಾತುಗಳಿಂದ. ಕಣ್ಣೀರು ಒತ್ತರಿಸಿ ಬಂದರು ತಡೆದುಕೊಂಡೆ. 
" ನಾನ್ ಚೆನ್ನಾಗಿದ್ದೀನಿ, ನೀನ್ ಹೇಗಿದ್ದೀಯ... ? ನಿನ್ನ ಕೋಡ ಗುರುತು ಹಚ್ಚೋಕ್ಕಾಗ್ಲಿಲ್ಲ ನಂಗೆ... ಸ್ವಲ್ಪ ಛೇಂಜ್ ಆಗಿದ್ದೀಯ... " ಎಂದು ಹೇಳಿ ನಕ್ಕೆ.. 
ಹೀಗೆ ಸ್ವಲ್ಪ ಹೊತ್ತಿನ ತನಕ ಉಭಯಕುಶಲೋಪರಿ ಸಂಭಾಷಣೆಗಳು ವಿನಿಮಯಗೊಂಡವು. 
" ಏನು, ನೀನಿಲ್ಲಿ.. ?" ಎಂದೆ.
" ಒ‍ಂದು ಕ‍ಂಪನಿಯ ಇಂಟರ್ವ್ಯೂಗೋಸ್ಕರ ಬ‍ಂದಿದ್ದೀನಿ. ನನ್ನ ಗೆಳತಿಯರೆಲ್ಲರಿಗು ಅವರವರ ಸಂಬಂಧಿಕರ ಮನೆಯಿದೆ, ನಾನು ಎಲ್ಲಿ ಉಳಿಯುವುದು ಅನ್ನೋದರ ಚರ್ಚೆ ನಡೀತಾ ಇದೆ ಈಗ " ಎಂದಳು.
ನಾನು ನನ್ನ ಮನೆಗೆ ಕರೆದುಬಿಡುವ ಎಂದು ಮನಸ್ಸಿನಲ್ಲೆ ಮಂಡಕ್ಕಿಯನ್ನು ತಿನ್ನಲು ಶುರುಮಾಡಿದೆ. ತಕ್ಷಣ ಅಮ್ಮ  ಬಹಳ ಸಂಪ್ರದಾಯಸ್ಥೆ, ಅಪ್ಪ ಬಹಳ ಕಟ್ಟುನಿಟ್ಟಿನ ಮನುಷ್ಯ ಎಂಬುದು ನೆನೆಪಾಯಿತು. ಇವಳನ್ನು ಕರೆದುಕೊಂಡು ಹೋದರೆ ತಪ್ಪು ತಿಳಿದಾರು ಎಂದು ಸುಮ್ಮನಾದೆ. ಆದರೂ, ಧೈರ್ಯಮಾಡಿ ಮನೆಗೆ ಕರೆದೊಯ್ಯುವುದೆಂದು, ಅಪ್ಪ ಅಮ್ಮ ಕೇಳಿದರೆ, ಆತ್ಮೀಯ ಗೆಳತಿ, ಇಂಟರ್ವ್ಯೂಗೆಂದು ಬಂದಿದ್ದಾಳೆ, ನಾಳೆ ಹೊರಟುಹೋಗುತ್ತಾಳೆಂದು ಹೇಳಿದರಾಯ್ತು ಎಂದು ನಿರ್ಧರಿಸಿದೆ. 
" ನಮ್ಮ ಮನೆಗೆ ಬಾ.. ಒಂದು ದಿನಾ ಅಲ್ವಾ.. ಅಪ್ಪ ಅಮ್ಮನನ್ನು ಕಂಡು ಮಾತಾಡಿದ ಹಾಗಾಗುತ್ತದೆ  " ಎಂದೆ.
ನನ್ನ ಪೂರ್ವಜನ್ಮದ ಸುಕೃತವೇನೊ ಎಂಬಂತೆ, ಮರುಮಾತನಾಡದೆ ಒಪ್ಪಿಕೊಂಡುಬಿಟ್ಟಳು. ನನ್ನ ಖುಷಿಗೆ ಪಾರವೇ ಇರಲಿಲ್ಲ. 
ಅವಳ ಸ್ನೇಹಿತೆಯರಿಗೆ ನನ್ನ ಬಗ್ಗೆ ಸಣ್ಣ ಕಿರುಪರಿಚಯವಿತ್ತು, ವಿದಾಯ ಹೇಳಿ ಹೊರಡಲು ಸಿದ್ದಳಾದಳು.
ಅವಳ ಬಳಿ ಲೂನಾ ಇರುವುದನ್ನು ಕಂಡು, ನಾನು ನನ್ನ ಪಾಡಿಗೆ ನನ್ನ ಬೈಕ್ ಮೇಲೆ ಹತ್ತಿ ಕುಳಿತು ಹೊರಡಲು ಅಣಿಯಾದೆ. ಅವಳು ನನ್ನ ದಡ್ಡತನವನ್ನು ಮತ್ತು ಬೇಜವಾಬ್ದಾರಿಯನ್ನು ಕಂಡು ಒಮ್ಮೆ ದುರುಗುಟ್ಟಿ ನೋಡಿದಳು. ನನ್ನ ತಪ್ಪನ್ನರಿತ ನಾನು ಅವಳನ್ನು ಲೂನಾವನ್ನು ತನ್ನ ಗಳತಿಯೊಬ್ಬಳಿಗೆ ಒಪ್ಪಿಸಿ ಬಂದು ನನ್ನ ಬೈಕ್ ಮೇಲೆ ಕೂರುವಂತೆ ತಿಳಿಸಿದೆ. ಸಂತಸಗೊಂಡ ಅವಳು ಹಾಗೆಯೆ ಮಾಡಿ, ನನ್ನ ಹಿಂದೆ ಕೂತಳು. ಇದುವರೆವಿಗೂ ನನ್ನ ಬೈಕ್ ನ ಹಿಂದಿನ ಸೀಟ್ ಮೇಲೆ ನನ್ನ ಅಮ್ಮ ಮತ್ತು ಅಕ್ಕನನ್ನು ಬಿಟ್ಟು ಬೇರಾವ ಹೆಣ್ಣು ಕೂತದ್ದಿಲ್ಲ. ಈ ಸನ್ನಿವೇಶ ನನ್ನಲ್ಲಿ ಬಹಳ ಸಂತೋಷ ತಂದಿತು. ಹಾಗೆ ಮಾತನಾಡುತ್ತಾ ಮನೆಗೆ ಬಂದು ಸೇರಿದೆವು...
ಆಕೆಯನ್ನು ಒಳಗೆ ಬಾ ಎಂದೆ. ಆಶ್ಚರ್ಯದ ಸಂಗತಿಯೆಂದರೆ, ನನ್ನ ಅಪ್ಪ ಅಮ್ಮ ಆಕೆಯನ್ನು ಬಹಳ ಸಂತೋಷದಿಂದ, ಮೊದಲೆ ಪರಿಚಯವಿದ್ದವರ ಹಾಗೆ ಬರಮಾಡಿಕೊಂಡರು. ನನಗೆ ಏನೊಂದೂ ಅರ್ಥವಾಗಲಿಲ್ಲ, ನಕ್ಕು ಸುಮ್ಮನಾದೆ. ಮನೆಯಲ್ಲಿ ಅಮ್ಮ ಭೂರಿ ಭೋಜನ ಸಿದ್ಧಪಡಿಸಿದರು. ಎಲ್ಲರೂ ಒಟ್ಟಿಗೆ ಕೂತು ಹರಟೆ ಹೊಡೆಯುತ್ತಾ ಊಟ ಮುಗಿಸಿದೆವು. ಅವಳು ನನ್ನ ತಾಯಿಯ ಬಳಿ ಮಲಗಿದಳು. ಎಲ್ಲವೂ ಆಶ್ಚರ್ಯವೆನಿಸತೊಡಗಿತ್ತು ನನಗೆ, ನಿದ್ದೆ ಹತ್ತಲೇ ಇಲ್ಲ ನನಗೆ... ಬಹಳ ಹೊರಳಾಟಗಳ ನಂತರ ನಿದ್ರಾದೇವಿ ಆವರಿಸಿದಳು. 
ಬೆಳಗ್ಗೆ ಆಕೆಯೆ ಕಾಫಿಯ ಲೋಟವನ್ನಿಡಿದು, ನನ್ನನ್ನೆಬ್ಬಿಸಿ " ಗುಡ್ ಮಾರ್ನಿಂಗ್ " ಹೇಳಿದಳು. ಆಫೀಸ್ಗೆ ಹೋಗೊ ದಾರಿಯಲ್ಲಿ ಇಂಟರ್ವ್ಯೂ ಇರುವ ಕಂಪನಿಯ ಬಳಿ ಬಿಡುವುದೆಂದು ನಿರ್ಧರಿಸಿ, ಬೇಗನೆ ಸ್ನಾನ ಮುಗಿಸಿ, ತಿಂಡಿ ತಿಂದು ತಯಾರಾದೆ.
ಆಕೆ ನನಗಿಂತ ಮೊದಲೆ ರೆಡಿಯಾಗಿ ಹೊರಗೆ ನಿಂತಿದ್ದಳು. ಇಂದು ಕಿತ್ತಲೆ ಬಣ್ಣದ ಸೀರೆಯನ್ನುಟ್ಟು, ಸ್ವಲ್ಪ ಮೇಕಪ್ ಮಾಡಿಕೊಂಡು, ಮುಂಜಾನೆಯ ಸೂರ್ಯನಂತೆ ಕಂಗೊಳಿಸುತ್ತಿದ್ದಳು. ಅಪ್ಸರೆಯಂತೆ ಕಾಣುತಿದ್ದಳು. ರಸ್ತೆಯಲ್ಲಿ ಹಾದುಹೋಗುವವರೆಲ್ಲ, ಇವಳನ್ನು ನೋಡಿ, ಬಹಳ ದಿನಗಳ ಪರಿಚಯವೇನೋ ಎಂಬಂತೆ ಮಾತಾಡಿಸಿ, ಕೈಕುಲುಕಿ ಹೋಗುತ್ತಿದ್ದರು. ನನಗೆಲ್ಲಾ ಅಯೋಮಯವೆನಿಸ‌ ತೊಡಗಿತು. ನನ್ನಷ್ಟಕ್ಕೆ ನಾನೆ ನಕ್ಕು ಬೈಕ್ ಹತ್ತಿ, ಸ್ಟಾರ್ಟ್ ಮಾಡಿದೆ, ನನ್ನ ಅಪ್ಪ ಅಮ್ಮ ಕಣ್ಣೀರಿಡುತ್ತಾ ಈಕೆಯನ್ನು ಬೀಳ್ಕೊಟ್ಟರು, ಇವಳೂ ಅಳುತ್ತಾ ನನ್ನ ಬೈಕ್ ಏರಿದಳು... ನನಗೊಂದೂ ಅರ್ಥವಾಗಲಿಲ್ಲ... 
ಇಂಟರ್ವ್ಯೂ ಇರುವ ಕಂಪನಿ ಬಳಿ ಬಿಡುವ ಮೊದಲು, ನನ್ನ ಮನಸ್ಸಿನಾಳದಲ್ಲಿದ್ದ ತುಮುಲಗಳು, ಆಸೆಗಳು ಎಲ್ಲವನ್ನೂ ಹೇಳಿಬಿಡಬೇಕೆಂದುಕೊಂಡೆ. ಆದರೆ, ಮೂರು ವರ್ಷದ ಹಿಂದೆ ಬಿಟ್ಟು ಹೋದವಳು, ಈಗ ಮತ್ತೆ ನನ್ನನ್ನು ಒಪ್ಪಿಕೊಳ್ಳುತ್ತಾಳಾ ?? ಎಂಬ ದೊಡ್ಡ ಪ್ರಶ್ನೆ ಕಾಡತೊಡಗಿತು. ಹೀಗಿರುವಾಗ, ಅವಳೆ ನನ್ನ ಹತ್ತಿರ ಸ್ವಲ್ಪ ಮಾತನಾಡಬೇಕೆಂದು, ಕಂಪೆನಿಯ ಲಾನ್ ಬಳಿ ಬೈಕ್ ನಿಲ್ಲಿಸುವಂತೆ ಹೇಳಿದಳು.. ಸರಿ ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಅಂದುಕೊಂಡು, ಲಾನ್ ಬಳಿ ಬೈಕ್ ನಿಲ್ಲಿಸಿದೆ. ಅಲ್ಲೇ ಇದ್ದ ಕಲ್ಲುಬೆಂಚಿನ ಮೇಲೆ ಕುಳಿತೆವು.. 
ಏನೊ ಮತಾಡ್ಬೇಕು ಅಂದ್ಯಲ್ಲ ಅಂದೆ. ಆಕೆ ಒಡನೆಯೆ, ಅಳುತ್ತಾ ನನ್ನ ಭುಜಕ್ಕೊರಗಿದಳು... ನಾನು ಆತಂಕಗೊಂಡು, ಅವಳ ದುಖ:ಕ್ಕೆ ಕಾರಣವೇನೆಂದು ಕೇಳಲು ಪ್ರಯತ್ನಿಸಿದೆ. ಆದರವಳು ನನ್ನನ್ನು ಮೌನವಾಗಿರುವಂತೆ ಹೇಳಿದಳು. ನಾನು ಅವಳ ತಲೆ ನೇವರಿಸುತ್ತಾ ಕುಳಿತೆ. 
ಆಕೆ ಏನೊ ಹೇಳಬೇಕೆಂದು ಬಾಯ್ತೆರೆಯುವ ಹೊತ್ತಿಗೆ, ಅಲ್ಲೆ ಇದ್ದ ವಾಚ್ಮನ್ ನನ್ನ ಭುಜವನ್ನಿಡಿದು ಅಲ್ಲಡಿಸುತ್ತಾ " ಇಲ್ಲಿ ಹೀಗೆಲ್ಲಾ ಕೋರಬಾರದು, ಎದ್ದೋಗಿ" ಎಂದು ಹೇಳಿದ. ನಾವು ಅವನ ಮಾತಿಗೆ ಕಿವಿಗೊಡದೆ ಹಾಗೆ ಕುಳಿತಿದ್ದೆವು....
ಮತ್ತೆ ಅವನು ಭುಜವನ್ನೊಮ್ಮೆ ಜೋರಾಗಿ ಅಲುಗಾಡಿಸಿ ಬೈಯ್ಯತೊಡಗಿದ.... ಇಂಥಾ ರಸಸಮಯವನ್ನು ಹಾಳುಮಾಡುತ್ತಿರುವ ಇವನಿಗೆ ಒಂದು ಕಾಣಿಸಬೇಕು ಎಂದುಕೊಂಡು ಎದ್ದೆ... ಕಣ್ಬಿಟ್ಟರೆ ನನ್ನಮ್ಮ " ಟೈಮಾಯ್ತು ಎಳೋ ಮೇಲೆ ಸೋಂಬೇರಿ" ಎಂದು ಎಬ್ಬಿಸುತ್ತಿದ್ದಾರೆ. ಕಣ್ಣುಜ್ಜಿಕೊಂಡು ಎದ್ದೆ...  ಸಮಯ ಆಗಲೆ ಆರಾಗಿತ್ತು...
ಆಗ ನನಗರ್ಥವಾಯಿತು, ಇಷ್ಟೋತ್ತೂ ಕಂಡಿದ್ದು ಸುಮಧುರವಾದ ಕನಸು ಎಂದು... ಆ ಅಪೂರ್ಣಗೊಂಡ ಕನಸನ್ನೆ ನನಸಾಗಬಾರದೆ, ಅವಳು ಮತ್ತೆ ನನಗೆ ಸಿಗಬಾರದೆ ಎಂದು ಕನವರಿಸುತ್ತಾ, ನನ್ನಷ್ಟಕ್ಕೆ ನಾನೆ ನಗತೊಡಗಿದೆ.. 
" ಯಾಕೊ ಹೀಗೆ ಒಬ್ಬೊಬ್ನೆ ನಗ್ತಾ ಇದಿಯಾ" ಅಂತ ಅಮ್ಮ ಕೇಳಿದಕ್ಕೆ, " ಏನಿಲ್ಲಾ " ಎಂದುತ್ತರಿಸಿ, ಸ್ನಾನದ ಮನೆ ಕಡೆಗೆ ಹೊರಟೆ.... 

ನಾಲ್ಕೈದು ಹುಡುಗಿಯರ ಗುಂಪೊಂದು ರಸ್ತೆ ಬದಿಯಲ್ಲಿ ನಿಂತು ಏನೋ ಚರ್ಚಿಸುತ್ತಿತ್ತು. ನಾನು ಆ ಗುಂಪನ್ನು ಹಾದುಹೋಗುವಾಗ, ಅಲ್ಲಿದ್ದ ಒಂದು ಸುಂದರ ಹೆಣ್ಣು ಕಣ್ಮನ ಸೆಳೆದಳು. ಕವಿಗಳು ವರ್ಣಿಸುವ ಹಾಗೆ ಅತಿರೂಪ ಲಾವಣ್ಯವತಿಯಾಗಿದ್ದಳು. ಕೆಂಪುಗುಲಾಬಿ ಬಣ್ಣದ ಸೀರೆಯನ್ನುಟ್ಟು, ಹಣೆಯಲ್ಲಿ ಸಣ್ಣದಾಗಿ ಕುಂಕುಮವನ್ನಿರಿಸಿ (ತಂದೆ ತಾಯಿಯ ಒತ್ತಾಯದ ಮೇರೆಗೆ ಎನ್ನುವ ಹಾಗೆ), ಮುಡಿಯಲ್ಲಿ ಅದ್ಭುತ ಸುವಾಸನೆ ಬೀರುವ ಮಲ್ಲಿಗೆ ಹೂವನ್ನು ಮುಡಿದಿದ್ದಳು. ಆಕೆಯನ್ನು ಈ ಮೊದಲೆ ನೋಡಿದ ಹಾಗೆ, ಬಹಳ ವರ್ಷಗಳು ಒಡನಾಡಿರುವ ಹಾಗನ್ನಿಸಿತು. ನನಗೆ ದೂರದ್ದು ಸ್ವಲ್ಪ ಸರಿಯಾಗಿ ಕಾಣಿಸದು, ಹಾಗಾಗಿ ಹತ್ತಿರದಿಂದ ನೋಡಿ, ಧೃಡೀಕರಿಸಿಕೊಳ್ಳುವ ಎಂದು ಹತ್ತಿರ ಹೋದೆ. ನನ್ನ ಕಣ್ಣನ್ನು ನಾನೆ ನಂಬಲಾಗಲಿಲ್ಲ. ಅವಳೇ... ಅವಳೇ... ಮೂರು ವರ್ಷಗಳಿಂದ ಯಾರನ್ನು ಒಮ್ಮೆಯಾದರು ನೋಡಬೇಕೆಂದು, ಮಾತನಾಡಿಸಬೇಕೆಂದು, ನನ್ನ ಅಳಲನ್ನು ಹೇಳಿಕೊಂಡು ಅತ್ತುಬಿಡಬೇಕೆಂದುಕೊಂಡಿದ್ದೆನೋ, ಅವಳೇ ನನ್ನೆದುರಿಗೆ ನಿಂತಿದ್ದಾಳೆ... ಮನಸ್ಸಿಗೆ ಎಲ್ಲಿಲ್ಲದ ಸಂತೋಷವಾಯಿತು. ಸೂತ್ರ ಹರಿದ‌ ಗಾಳಿಪಟದ ಹಾಗೆ, " ಯಾವ ಜನ್ಮದ ಮೈತ್ರಿ, ಈ ಜನ್ಮದಲಿ ಬಂದು, ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ " ಎಂದು ಹಾಡಲು ಶುರುವಿಟ್ಟಿತು. ಸಂತೋಷಕ್ಕೆ ಮಾತುಗಳೆ ಹೊರಬರದ ಪರಿಸ್ಥಿತಿ ಆವರಿಸಿತು. ಆದರೂ ಸಿಕ್ಕ ಈ ಅವಕಾಶವನ್ನು ಕಳೆದುಕೊಳ್ಳಬಾರದೆಂದು, ಮಾತಾಡಿಸಿಯೆ ಬಿಡಬೇಕೆಂದು ಆ ಗುಂಪಿನ ಮುಂದೆ ಹೋಗಿ ನಿಂತೆ...

ಆಕೆ ಮೊದಲಿಗಿಂತ ಸ್ವಲ್ಪ ದಪ್ಪಗಾಗಿದ್ದಳು. ಕಣ್ಣುಗಳು ಕಪ್ಪಿಟ್ಟಿದ್ದವು (ಕಂಪ್ಯೂಟರ್ ಮುಂದೆ ಕೂರುವ ಪರಿಣಾಮ). ಸಹಜ ಸುಂದರಿಯಾಗಿದ್ದ, ಎಂದಿಗೂ ಸೌಂದರ್ಯವರ್ಧಕಗಳನ್ನು ಉಪಯೋಗಿಸದ ನನ್ನವಳು, ಈಗ ಅವೆಲ್ಲವನ್ನು ಕೃತ್ರಿಮ ಸೌಂದರ್ಯಕ್ಕಾಗಿ ಬಳಸುತ್ತಿರುವುದನ್ನು ಕಂಡು ಸ್ವಲ್ಪ ಬೇಸರವಾಯಿತು. 

ಗುಂಪಿನಲ್ಲಿದ್ದ ಎಲ್ಲರೂ ನನ್ನನ್ನೊಮ್ಮೆ ಹಾಗೆ ದುರುಗುಟ್ಟಿದರು. ನಾನು ನಕ್ಕೆ, ಅವರು ನಗಲಿಲ್ಲ. ನನ್ನಾಕೆ ನನ್ನನ್ನು ಮೊದಲಿಗೆ ಗುರುತು ಹಿಡಿಯಲಿಲ್ಲ (ಏಕೆಂದರೆ, ನಾನೂ ಕೂಡ ಒಂದೆರಡು ಸುತ್ತು ದಪ್ಪಗಾಗಿದ್ದೆ, ಮೂಗಿನ ಮೇಲೆ, ಕಣ್ಣಿನ ಮುಂದೆ ಸುಲೋಚನ ಬಂದಿದ್ದಳು).ಸ್ವಲ್ಪ ದೃಷ್ಠಿ ಸಮರದ ನಂತರ, ಏನೊ ಹೊಳೆದವಳಂತೆ, ಮಂದಹಾಸದೊಂದಿಗೆ " ಹೇ, ಗುರು... ನೀನಾ.. ಗುರ್ತೆ ಹಿಡಿಯೋಕ್ಕಾಗ್ಲಿಲ್ವಲ್ಲೊ... ಹೇಗಿದ್ದೀಯೊ ?? " ಎಂದಳು. 

ಮೂರು ವರ್ಷಗಳ ವಿರಹವೇದನೆ ಹಾಗೆ ಕರಗಿಹೋಯಿತು ಆ ಮಾತುಗಳಿಂದ. ಕಣ್ಣೀರು ಒತ್ತರಿಸಿ ಬಂದರು ತಡೆದುಕೊಂಡೆ. 

" ನಾನ್ ಚೆನ್ನಾಗಿದ್ದೀನಿ, ನೀನ್ ಹೇಗಿದ್ದೀಯ... ? ನಿನ್ನ ಕೂಡ‌ ಗುರುತು ಹಚ್ಚೋಕ್ಕಾಗ್ಲಿಲ್ಲ ನಂಗೆ... ಸ್ವಲ್ಪ ಛೇಂಜ್ ಆಗಿದ್ದೀಯ... " ಎಂದು ಹೇಳಿ ನಕ್ಕೆ.. ಹೀಗೆ ಸ್ವಲ್ಪ ಹೊತ್ತಿನ ತನಕ ಉಭಯಕುಶಲೋಪರಿ ಸಂಭಾಷಣೆಗಳು ವಿನಿಮಯಗೊಂಡವು.

 " ಏನು, ನೀನಿಲ್ಲಿ.. ?" ಎಂದೆ.

" ಒ‍ಂದು ಕ‍ಂಪನಿಯ ಇಂಟರ್ವ್ಯೂಗೋಸ್ಕರ ಬ‍ಂದಿದ್ದೀನಿ. ನನ್ನ ಗೆಳತಿಯರೆಲ್ಲರಿಗು ಅವರವರ ಸಂಬಂಧಿಕರ ಮನೆಯಿದೆ, ನಾನು ಎಲ್ಲಿ ಉಳಿಯುವುದು ಅನ್ನೋದರ ಚರ್ಚೆ ನಡೀತಾ ಇದೆ ಈಗ " ಎಂದಳು.

ನಾನು ನನ್ನ ಮನೆಗೆ ಕರೆದುಬಿಡುವ ಎಂದು ಮನಸ್ಸಿನಲ್ಲೆ ಮಂಡಕ್ಕಿಯನ್ನು ತಿನ್ನಲು ಶುರುಮಾಡಿದೆ. ತಕ್ಷಣ ಅಮ್ಮ  ಬಹಳ ಸಂಪ್ರದಾಯಸ್ಥೆ, ಅಪ್ಪ ಬಹಳ ಕಟ್ಟುನಿಟ್ಟಿನ ಮನುಷ್ಯ ಎಂಬುದು ನೆನೆಪಾಯಿತು. ಇವಳನ್ನು ಕರೆದುಕೊಂಡು ಹೋದರೆ ತಪ್ಪು ತಿಳಿದಾರು ಎಂದು ಸುಮ್ಮನಾದೆ. ಆದರೂ, ಧೈರ್ಯಮಾಡಿ ಮನೆಗೆ ಕರೆದೊಯ್ಯುವುದೆಂದು, ಅಪ್ಪ ಅಮ್ಮ ಕೇಳಿದರೆ, ಆತ್ಮೀಯ ಗೆಳತಿ, ಇಂಟರ್ವ್ಯೂಗೆಂದು ಬಂದಿದ್ದಾಳೆ, ನಾಳೆ ಹೊರಟುಹೋಗುತ್ತಾಳೆಂದು ಹೇಳಿದರಾಯ್ತು ಎಂದು ನಿರ್ಧರಿಸಿದೆ. " ನಮ್ಮ ಮನೆಗೆ ಬಾ.. ಒಂದು ದಿನಾ ಅಲ್ವಾ.. ಅಪ್ಪ ಅಮ್ಮನನ್ನು ಕಂಡು ಮಾತಾಡಿದ ಹಾಗಾಗುತ್ತದೆ  " ಎಂದೆ.ನನ್ನ ಪೂರ್ವಜನ್ಮದ ಸುಕೃತವೇನೊ ಎಂಬಂತೆ, ಮರುಮಾತನಾಡದೆ ಒಪ್ಪಿಕೊಂಡುಬಿಟ್ಟಳು. ನನ್ನ ಖುಷಿಗೆ ಪಾರವೇ ಇರಲಿಲ್ಲ. ಅವಳ ಸ್ನೇಹಿತೆಯರಿಗೆ ನನ್ನ ಬಗ್ಗೆ ಸಣ್ಣ ಕಿರುಪರಿಚಯವಿತ್ತು, ವಿದಾಯ ಹೇಳಿ ಹೊರಡಲು ಸಿದ್ದಳಾದಳು.ಅವಳ ಬಳಿ ಲೂನಾ ಇರುವುದನ್ನು ಕಂಡು, ನಾನು ನನ್ನ ಪಾಡಿಗೆ ನನ್ನ ಬೈಕ್ ಮೇಲೆ ಹತ್ತಿ ಕುಳಿತು ಹೊರಡಲು ಅಣಿಯಾದೆ. ಅವಳು ನನ್ನ ದಡ್ಡತನವನ್ನು ಮತ್ತು ಬೇಜವಾಬ್ದಾರಿಯನ್ನು ಕಂಡು ಒಮ್ಮೆ ದುರುಗುಟ್ಟಿ ನೋಡಿದಳು. ನನ್ನ ತಪ್ಪನ್ನರಿತ ನಾನು ಅವಳನ್ನು ಲೂನಾವನ್ನು ತನ್ನ ಗಳತಿಯೊಬ್ಬಳಿಗೆ ಒಪ್ಪಿಸಿ ಬಂದು ನನ್ನ ಬೈಕ್ ಮೇಲೆ ಕೂರುವಂತೆ ತಿಳಿಸಿದೆ. ಸಂತಸಗೊಂಡ ಅವಳು ಹಾಗೆಯೆ ಮಾಡಿ, ನನ್ನ ಹಿಂದೆ ಕೂತಳು. ಇದುವರೆವಿಗೂ ನನ್ನ ಬೈಕ್ ನ ಹಿಂದಿನ ಸೀಟ್ ಮೇಲೆ ನನ್ನ ಅಮ್ಮ ಮತ್ತು ಅಕ್ಕನನ್ನು ಬಿಟ್ಟು ಬೇರಾವ ಹೆಣ್ಣು ಕೂತದ್ದಿಲ್ಲ. ಈ ಸನ್ನಿವೇಶ ನನ್ನಲ್ಲಿ ಬಹಳ ಸಂತೋಷ ತಂದಿತು. ಹಾಗೆ ಮಾತನಾಡುತ್ತಾ ಮನೆಗೆ ಬಂದು ಸೇರಿದೆವು...
ಆಕೆಯನ್ನು ಒಳಗೆ ಬಾ ಎಂದೆ. ಆಶ್ಚರ್ಯದ ಸಂಗತಿಯೆಂದರೆ, ನನ್ನ ಅಪ್ಪ ಅಮ್ಮ ಆಕೆಯನ್ನು ಬಹಳ ಸಂತೋಷದಿಂದ, ಮೊದಲೆ ಪರಿಚಯವಿದ್ದವರ ಹಾಗೆ ಬರಮಾಡಿಕೊಂಡರು. ನನಗೆ ಏನೊಂದೂ ಅರ್ಥವಾಗಲಿಲ್ಲ, ನಕ್ಕು ಸುಮ್ಮನಾದೆ. ಮನೆಯಲ್ಲಿ ಅಮ್ಮ ಭೂರಿ ಭೋಜನ ಸಿದ್ಧಪಡಿಸಿದರು. ಎಲ್ಲರೂ ಒಟ್ಟಿಗೆ ಕೂತು ಹರಟೆ ಹೊಡೆಯುತ್ತಾ ಊಟ ಮುಗಿಸಿದೆವು. ಅವಳು ನನ್ನ ತಾಯಿಯ ಬಳಿ ಮಲಗಿದಳು. ಎಲ್ಲವೂ ಆಶ್ಚರ್ಯವೆನಿಸತೊಡಗಿತ್ತು ನನಗೆ, ನಿದ್ದೆ ಹತ್ತಲೇ ಇಲ್ಲ... ಬಹಳ ಹೊರಳಾಟಗಳ ನಂತರ ನಿದ್ರಾದೇವಿ ಆವರಿಸಿದಳು.

ಬೆಳಗ್ಗೆ ಆಕೆಯೆ ಕಾಫಿಯ ಲೋಟವನ್ನಿಡಿದು, ನನ್ನನ್ನೆಬ್ಬಿಸಿ " ಗುಡ್ ಮಾರ್ನಿಂಗ್ " ಹೇಳಿದಳು. ಆಫೀಸ್ಗೆ ಹೋಗೊ ದಾರಿಯಲ್ಲಿ ಇಂಟರ್ವ್ಯೂ ಇರುವ ಕಂಪನಿಯ ಬಳಿ ಬಿಡುವುದೆಂದು ನಿರ್ಧರಿಸಿ, ಬೇಗನೆ ಸ್ನಾನ ಮುಗಿಸಿ, ತಿಂಡಿ ತಿಂದು ತಯಾರಾದೆ.
ಆಕೆ ನನಗಿಂತ ಮೊದಲೆ ರೆಡಿಯಾಗಿ ಹೊರಗೆ ನಿಂತಿದ್ದಳು. ಇಂದು ಕಿತ್ತಲೆ ಬಣ್ಣದ ಸೀರೆಯನ್ನುಟ್ಟು, ಸ್ವಲ್ಪ ಮೇಕಪ್ ಮಾಡಿಕೊಂಡು, ಮುಂಜಾನೆಯ ಸೂರ್ಯನಂತೆ ಕಂಗೊಳಿಸುತ್ತಿದ್ದಳು. ಅಪ್ಸರೆಯಂತೆ ಕಾಣುತಿದ್ದಳು. ರಸ್ತೆಯಲ್ಲಿ ಹಾದುಹೋಗುವವರೆಲ್ಲ, ಇವಳನ್ನು ನೋಡಿ, ಬಹಳ ದಿನಗಳ ಪರಿಚಯವೇನೋ ಎಂಬಂತೆ ಮಾತಾಡಿಸಿ, ಕೈಕುಲುಕಿ ಹೋಗುತ್ತಿದ್ದರು. ನನಗೆಲ್ಲಾ ಅಯೋಮಯವೆನಿಸ‌ ತೊಡಗಿತು. ನನ್ನಷ್ಟಕ್ಕೆ ನಾನೆ ನಕ್ಕು ಬೈಕ್ ಹತ್ತಿ, ಸ್ಟಾರ್ಟ್ ಮಾಡಿದೆ, ನನ್ನ ಅಪ್ಪ ಅಮ್ಮ ಕಣ್ಣೀರಿಡುತ್ತಾ ಈಕೆಯನ್ನು ಬೀಳ್ಕೊಟ್ಟರು, ಇವಳೂ ಅಳುತ್ತಾ ನನ್ನ ಬೈಕ್ ಏರಿದಳು... ನನಗೊಂದೂ ಅರ್ಥವಾಗಲಿಲ್ಲ... 
ಇಂಟರ್ವ್ಯೂ ಇರುವ ಕಂಪನಿ ಬಳಿ ಬಿಡುವ ಮೊದಲು, ನನ್ನ ಮನಸ್ಸಿನಾಳದಲ್ಲಿದ್ದ ತುಮುಲಗಳು, ಆಸೆಗಳು ಎಲ್ಲವನ್ನೂ ಹೇಳಿಬಿಡಬೇಕೆಂದುಕೊಂಡೆ. ಆದರೆ, ಮೂರು ವರ್ಷದ ಹಿಂದೆ ಬಿಟ್ಟು ಹೋದವಳು, ಈಗ ಮತ್ತೆ ನನ್ನನ್ನು ಒಪ್ಪಿಕೊಳ್ಳುತ್ತಾಳಾ ?? ಎಂಬ ದೊಡ್ಡ ಪ್ರಶ್ನೆ ಕಾಡತೊಡಗಿತು. ಹೀಗಿರುವಾಗ, ಅವಳೆ ನನ್ನ ಹತ್ತಿರ ಸ್ವಲ್ಪ ಮಾತನಾಡಬೇಕೆಂದು, ಕಂಪೆನಿಯ ಲಾನ್ ಬಳಿ ಬೈಕ್ ನಿಲ್ಲಿಸುವಂತೆ ಹೇಳಿದಳು.. ಸರಿ ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಅಂದುಕೊಂಡು, ಲಾನ್ ಬಳಿ ಬೈಕ್ ನಿಲ್ಲಿಸಿದೆ. ಅಲ್ಲೇ ಇದ್ದ ಕಲ್ಲುಬೆಂಚಿನ ಮೇಲೆ ಕುಳಿತೆವು.. 

ಏನೊ ಮತಾಡ್ಬೇಕು ಅಂದ್ಯಲ್ಲ ಅಂದೆ. ಆಕೆ ಒಡನೆಯೆ, ಅಳುತ್ತಾ ನನ್ನ ಭುಜಕ್ಕೊರಗಿದಳು... ನಾನು ಆತಂಕಗೊಂಡು, ಅವಳ ದುಖ:ಕ್ಕೆ ಕಾರಣವೇನೆಂದು ಕೇಳಲು ಪ್ರಯತ್ನಿಸಿದೆ. ಆದರವಳು ನನ್ನನ್ನು ಮೌನವಾಗಿರುವಂತೆ ಹೇಳಿದಳು. ನಾನು ಅವಳ ತಲೆ ನೇವರಿಸುತ್ತಾ ಕುಳಿತೆ. ಆಕೆ ಏನೊ ಹೇಳಬೇಕೆಂದು ಬಾಯ್ತೆರೆಯುವ ಹೊತ್ತಿಗೆ, ಅಲ್ಲೆ ಇದ್ದ ವಾಚ್ಮನ್ ನನ್ನ ಭುಜವನ್ನಿಡಿದು ಅಲ್ಲಾಡಿಸುತ್ತಾ " ಇಲ್ಲಿ ಹೀಗೆಲ್ಲಾ ಕೂರಬಾರದು, ಎದ್ದೋಗಿ" ಎಂದು ಹೇಳಿದ. ನಾವು ಅವನ ಮಾತಿಗೆ ಕಿವಿಗೊಡದೆ ಹಾಗೆ ಕುಳಿತಿದ್ದೆವು....ಮತ್ತೆ ಅವನು ಭುಜವನ್ನೊಮ್ಮೆ ಜೋರಾಗಿ ಅಲುಗಾಡಿಸಿ ಬೈಯ್ಯತೊಡಗಿದ.... ಇಂಥಾ ರಸಸಮಯವನ್ನು ಹಾಳುಮಾಡುತ್ತಿರುವ ಇವನಿಗೆ ಒಂದು ಗತಿ ಕಾಣಿಸಬೇಕು ಎಂದುಕೊಂಡು ಎದ್ದೆ...

ಕಣ್ಬಿಟ್ಟರೆ ನನ್ನಮ್ಮ " ಟೈಮಾಯ್ತು ಎಳೋ ಮೇಲೆ ಸೋಂಬೇರಿ" ಎಂದು ಎಬ್ಬಿಸುತ್ತಿದ್ದಾರೆ. ಕಣ್ಣುಜ್ಜಿಕೊಂಡು ಎದ್ದೆ...  ಸಮಯ ಆಗಲೆ ಆರಾಗಿತ್ತು...
ಆಗ ನನಗರ್ಥವಾಯಿತು, ಇಷ್ಟೋತ್ತೂ ಕಂಡಿದ್ದು ಸುಮಧುರವಾದ ಕನಸು ಎಂದು... ಆ ಅಪೂರ್ಣಗೊಂಡ ಕನಸನ್ನೆ ನನಸಾಗಬಾರದೆ, ಅವಳು ಮತ್ತೆ ನನಗೆ ಸಿಗಬಾರದೆ ಎಂದು ಕನವರಿಸುತ್ತಾ, ನನ್ನಷ್ಟಕ್ಕೆ ನಾನೆ ನಗತೊಡಗಿದೆ..

 " ಯಾಕೊ ಹೀಗೆ ಒಬ್ಬೊಬ್ನೆ ನಗ್ತಾ ಇದಿಯಾ" ಅಂತ ಅಮ್ಮ ಕೇಳಿದಕ್ಕೆ, " ಏನಿಲ್ಲಾ " ಎಂದುತ್ತರಿಸಿ, ಸ್ನಾನದ ಮನೆ ಕಡೆಗೆ ಹೊರಟೆ.... 

 ಇದು ಇಂದು ಬೆಳಗ್ಗೆ ಬಿದ್ದಂಥಾ ಕನಸು.... :)

Rating
No votes yet