ಕನಸಿನ ರಾತ್ರಿ

ಕನಸಿನ ರಾತ್ರಿ

ಧಾವಿಸಿ ಬನ್ನಿ, ಸುಂದರ ರಾತ್ರಿ ನಿರ್ಮಾಣಕ್ಕೆ ಕೈಗೂಡಿಸಿ
ಹೆಮ್ಮೆಯ ಸುಮುಧರ ರಾತ್ರಿ ಕಟ್ಟೋಣ ಬನ್ನಿ

ನಿಶ್ಯಬ್ದವಾದ ಈ ಸುರಾತ್ರಿ ಚಂದಿರನ ತೆಕ್ಕೆಯಲ್ಲಿ ಅನುಭವಿಸೋಣ
ತೆರೆತೆರೆಯಲ್ಲಿ ಕಪ್ಪಾದ ಮೋಡಗಳ ಮರೆಯಲ್ಲಿ ಕರಿಕಗ್ಗತಲ ಅಸ್ಪದತೆ
ನಕ್ಷತ್ರಗಳ ಜ್ವಾಲೆಗಳಿಗೆ ಮನ ಮನಸ್ಸನ್ನು ಬಿಚ್ಚಿಡೂಣ
ಹಿನ್ನೆಲೆಯ ಸಂವೇದನೆಗೆ ಸೊಗಸಿನ ಈ ಕ್ಷಣ ಸಾಕ್ಷಿ
ನೋಡಿ, ಸೂಕ್ಷ್ಮತೆಯಾಗಿ ಸಂಚು ಮಾಡುತ್ತಿದೆ ನಿರ್ಮಲ ಮನಸ್ಸು

ರಾತ್ರಿಯನ್ನು ಅವರಿಸಿದೆ ಮಾಧುರ್ಯದ ಪರಿಮಳ ಇಬ್ಬನಿ
ಹೆಣೆದುಕೊಳ್ಳುತ್ತಿದೆ ಭ್ರಮೆಯ ಛಾಯೆ ಎದೆಗೂಡಲ್ಲಿ
ಭೂತಾಯಿಯ ದೇಹಕ್ಕೆ ನಿಷ್ಕಲ್ಮಶ ಸುವಾಸೆನೆಯ ಸಿಂಚನ
ಬನ್ನಿ, ಉತ್ಸಾಹದ ನವಿರು ಧ್ವನಿಗೆ ಮನಸೋತು

ಕಳೆಯಿತು ನೋವಿನ ಭಾವದಲ್ಲಿನ ತವಕ
ಅಂತರಂಗದಲ್ಲಿ ಮೂಡಿತು ಪ್ರೀತಿಯೆಂಬ ಓಯಾಸಿಸ್
ಅರಳಿತು ಸಮೂಹ ಭಾವದಲ್ಲಿನ ಪ್ರಾಕ್ಷಣಿಕ ಪರದೆ
ಕಾಡಿ ಕೆರಳಿತು, ಮೂಡಿತು ಸುಂದರ ನವರಾದ ರಾತ್ರಿ

ಬಾಲರಾಜ್. ಡಿ.ಕೆ

Rating
No votes yet