ಕನಸು ಭವಿಷ್ಯ ಸೂಚಕವೇ?

ಕನಸು ಭವಿಷ್ಯ ಸೂಚಕವೇ?

ನನಗೆ ಸುಮಾರು ಐದು ವರ್ಷದ ಹಿಂದೆ ಸತತವಾಗಿ ಒಂದು ಹದಿನೈದು ದಿನ ಕನಸೊಂದು ಬೀಳುತ್ತಲೇ ಇತ್ತು.
ಆ ಕನಸು ಹೀಗಿತ್ತು

ಮಡಿವಾಳ ಪೋಲಿಸ್ ಸ್ಟೇಷನ್ ಎದುರುಗಡೆ ಮಸೀದಿಯೊಂದಿದೆ
ನಾನು ಯಾವುದೋ ಕಾರಣಕ್ಕೆ ಆ ಮಸೀದಿಯ ಒಳಗಡೆ ಹೋಗುತ್ತೇನೆ
ಆದರೆ ಮಸೀದಿಯ ಒಳಗಡೆ ಚರ್ಚಿನ ವಾತಾವರಣವಿದೆ . ಅಲ್ಲಿ ಶ್ವೇತ ನಿಲುವಂಗಿ ಧರಿಸಿದ ಜನ ಓಡಾಡುತ್ತಿದ್ದಾರೆ. ಯಾರೊ ನನಗೆ ಪವಿತ್ರ ಸ್ನಾನ ಮಾಡಲು ಹೇಳುತ್ತಾರೆ.
ಅಲ್ಲೊಂದೆಡೆ ನನಗೆ ತಲೆಯ ಮೇಲೆ ನೀರನ್ನು ಎರೆಚಿ ನಂತರ ಒಳಗೆ ಬಿಡುತ್ತಾರೆ. ಅದೊಂದು ರೀತಿಯ ಹಜಾರ . ಹಜಾರದ ಮೂಲಕ ಕಾರಿಡಾರ್ ಪ್ರವೇಶಿಸುತ್ತಿದ್ದಂತೆ ಯಾರೋ ನನಗೆ ತೀರ್ಥ ಕೊಡುತ್ತಾರೆ.
ಸ್ವಲ್ಪ ಮುಂದೆ ನಡೆದಂತೆ ಸುಮಾರು ಕೊಠಡಿಗಳು ಕಾಣುತ್ತವೆ . ಸುತ್ತಲೂ ಗಾಡಾಂಧಕಾರ . ಅಷ್ಟರಲ್ಲಿ ಯಾರೊ ನನ್ನ ಕೈಗೆ ಕ್ಯಾಂಡೆಲ್ ಕೊಡುತ್ತಾರೆ.
ಕ್ಯಾಂಡೆಲ್‌ನ ಸಹಾಯದಿಂದ ನಾನು ಮುನ್ನಡೆಯುತ್ತೇನೆ.
ಸುತ್ತಲೂ ಕ್ಯಾಂಡೆಲ್‍ನ ಪ್ರಕಾಶ. ನಾನು ಪ್ರತಿಯೊಂದು ಕೊಠಡಿಯನ್ನು ಪ್ರವೇಶಿಸುತ್ತಿದ್ದಂತೆ ಕತ್ತಲಾಗಿದ್ದ ಕೋಣೆಯಲಿ ಒಂದು ಕ್ಯಾಂಡೆಲ್‍ ಇಟ್ಟು ಬರುತ್ತಿರುತ್ತೇನೆ. ಅದು ಒಂದೇ ಸಮನೆ

ಹೀಗೆ ಆ ಕನಸು ಬೀಳುತ್ತಲೇ ಇತ್ತು .

ನಾನು ನನಗೆ ತಿಳಿದವರ ಬಳಿ ಹೀಗೇಕೆ ಕನಸು ಮೂಡುತ್ತಿದೆ ಎಂದು ಕೇಳಿದಾಗ ಒಬ್ಬೊಬ್ಬರು ಒಂದೊಂದು ಉತ್ತರ ನೀಡಿದರು .
ಕೆಲವರು ನಾನು ಹಿಂದಿನ ಜನ್ಮದಲ್ಲಿ ಕ್ರೈಸ್ತ ಸಮುದಾಯಕ್ಕೆ ಸೇರಿದ್ದರಿಂದ ಹೀಗೆ ಕನಸು ಬರುತ್ತಿದೆ ಹಾಗಾಗಿ ಒಮ್ಮೆ ಚರ್ಚ್‌ಗೆ ಹೋಗಿ ಬರಲು ಸಲಹೆ ನೀಡಿದರು
ಇನ್ನೂ ಕೆಲವರು ನಾನು ಹಿಂದಿನ ಜನ್ಮದಲ್ಲಿ ಏನೋ ಪಾಪ ಮಾಡಿದ್ದೇನೆ ಅದನ್ನು ತೊಳೆದುಕೊಳ್ಳ್ಲಲು ಸೂಚಿಸುತ್ತಿದೆ ಎಂದರು
ಯಾವುದೂ ಸಮಾಧಾನಕರವಾಗಿರಲಿಲ್ಲ
ಒಮ್ಮೆ ನನ್ನ ಆಪ್ತರಾದ ಸಿಸಿಲಿ ಮೇಡಂ ಜೊತೆ ವಿಚಾರಿಸಿದೆ.
ಅವರು ಆ ಕನಸನ್ನು ವಿಶ್ಳೇಷಿಸಿದ ರೀತಿ ಅದ್ಭುತವಾಗಿತ್ತು. ಆ ಕನಸು ನನ್ನ ಮುಂದಿನ ಜೀವನದ ಹೆಜ್ಜೆಗಳನ್ನು ಸೂಚಿಸುತ್ತಿತ್ತು .
ಈಗ
ಅವರು ಹೇಳಿದಂತೆ ಕನಸು ನನ್ನ ಜೀವನವನ್ನು , ಗುರಿಯನ್ನು ಸೂಚಿಸಿತು ಎನಿಸುತಿದೆ, ಹೌದು ಅವರು ಹೇಳಿದ ಹಾಗೆ ನಾನು ನನ್ನ ಹೆಜ್ಜೆಯನ್ನು ಇಟ್ಟಿದ್ದೇನೆ

ಅವರೇನು ಹೇಳಿದರು ಎಂಬುದನ್ನ ತಿಳಿಸುವುದಕ್ಕೆ ಮುಂಚೆ ನಿಮಗೆಲ್ಲಾ ಈ ಕನಸು ಏನು ಹೇಳುತ್ತದೆ ಆನುವುದನ್ನು ಹೇಳಲಾಗುತ್ತದಾ?. ನಿಮ್ಮದೇ ಬಗೆಯಲ್ಲಿ ವಿಶ್ಲೇಷಿಸಲಾದೀತಾ?

ಹಾಗೆ ನಿಮಗೂ ಹೀಗೆ ಯಾವುದಾದರೂ ಕನಸು ಕಾಡಿ, ಅದು ವಾಸ್ತವವಾಗಿ ಬದಲಾದ ಉದಾಹರಣೆಗಳಿದ್ದರೆ ತಿಳಿಸಿ.

Rating
No votes yet

Comments