ಕನ್ನಡಕೊಬ್ಬನೇ ರಾಜಕುಮಾರ

ಕನ್ನಡಕೊಬ್ಬನೇ ರಾಜಕುಮಾರ

ಕನ್ನಡಕೊಬ್ಬನೇ ರಾಜಕುಮಾರ

ನಮ್ಮ ರಾಜಕುಮಾರ್! ನಮ್ಮ ರಾಜಣ್ಣ! ಬಹುಶಃ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹಲವೇ ಹಲವು ಕಲಾವಿದರಿಗೆ ಎಲ್ಲವರ್ಗದ ಜನರಿಂದ ಗೌರವ ಮತ್ತು ಅತಿಯಾದ ಪ್ರೀತಿ ಪ್ರೋತ್ಸಾಹ ಸಿಗುವುದುಂಟು. ರಾಜಕುಮಾರ್ ಎಂಬ ಶಕ್ತಿಗೆ ಇಡೀ ಭಾರತದಾದ್ಯಂತ ಸಿಕ್ಕಿದ ಪ್ರೀತಿ ಅಭಿಮಾನ ಬೇರಾವ ಕಲಾವಿದರಿಗೆ ಸಿಕ್ಕಿರಾಲಾರದು. "ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್" ಹುಟ್ಟಿದ್ದು ಏಪ್ರಿಲ್ 24, 1929. ಕಲಾವಿದನಾಗಿ ಕನ್ನಡಕಾಗಿ ಸಲ್ಲಿಸಿದ ಸೇವೆ ಅದ್ಭುತ. ಎಲ್ಲರ ಮನೆ ಮಗನಾಗಿ, ಅಣ್ಣನಾಗಿ ಚಿರಕಾಲ ಕನ್ನಡಿಗರ ಮನಸಲ್ಲಿ ಮನೆ ಮಾಡಿದವರು ರಾಜ್‍ಕುಮಾರ್. ಮುತ್ತುರಾಜರಿಂದ ರಾಜ್‍ಕುಮಾರ್ ಆಗಿದ್ದು 1954ನಲ್ಲಿ ಬಿಡುಗಡೆಯಾದ ಬೇಡರ ಕಣ್ಣಪ ಚಿತ್ರದಿಂದ. ಬಿರುದು ಕೊಟ್ಟಿದ್ದು ಆ ಸಿನಿಮಾ ನಿರ್ದೇಶಕ ದಿಗ್ಗಜರಾದ ಏಚ್ ಲ್ ಎನ್ ಸಿಂಹ ಅವರಿಂದ. ರಾಜಣ್ಣ ತಾವು ಕೇವಲ ಕಲಾವಿದರೆ ಅಲ್ಲ ಕನ್ನಡ ತಾಯಿಯ ಸೇವೆಗೆ ನಿಂತಿರುವ ಮಗ ಕೂಡ ಎಂದು ತೋರಿಸಿ ಕೊಟ್ಟಿದ್ದು ಗೋಕಾಕ್ ಚಳುವಳಿಯಿಂದ. ಕನ್ನಡ ಚಳುವಳಿಗೆ ಅವರಿಗೆ ಕರೇಬಂದಿದ್ದು ಜೀ ನಾರಾಯಣ ಕುಮಾರ್ ಅವರಿಂದ. ರಾಜ್ ಮರು ಯೋಚಿಸದೇ ಎಲ್ಲ ಕನ್ನಡ ಕಲಾವಿದರನ್ನು ಒಟ್ಟುಗೂಡಿಸಿ ಚಳುವಳಿಗೆ ಬೆನ್ನೆಲುಬಾದರು. ನಾರಾಯಣ ಕುಮಾರ್ ಮತ್ತು ರಾಜ್ ಅವರ ನೇತ್ರತ್ವದಲ್ಲಿ ಚಳುವಳಿಗಳಾದವು. ಎಲ್ಲ ಜಿಲ್ಲೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದವು ! ಇಡೀ ಕರ್ನಾಟಕ ಅಂದಿತು "ರಾಜಣ್ಣ ನಾವು ನಿಮ್ಮೊಂದಿಗಿದೇವೆ" ನಮ್ಮ ರಾಜ್‍ಕುಮಾರಿಂದ ಆದರು ನಮ್ಮ ರಾಜಣ್ಣ . ರಾಜ್ ಮತ್ತು ಅವರ ಕುಟುಂಬ ಅಂದಿನಿಂದ ಇಲ್ಲಿಯವರೆಗೂ ತಮ್ಮ ಸೇವೆಯನ್ನ ಕನ್ನಡಕ್ಕೆ ಮುಡಿಪಾಗಿಸಿದ್ದಾರೆ. ನಯ, ವಿನಯ, ವಿಧೇಯತೆ ,ಸಭ್ಯತೆ ಇವೆಲ್ಲವೂ ರಾಜ್ ಅವರಿಗೆ ಇರುವ ಇನ್ನೊಂದು ಹೆಸರು. ಇಂತಹ ರಾಜ್ ನೆನಪಾಗಿದ್ದು ಮೊನ್ನೆ ರಾಜ್ ಸಿನಿಮಾದ ಹಾಡುಗಳನ್ನ ಕೇಳುತ್ತಿದಾಗ. ಕೋಟಿ ತಾರೆಯರು ಬಂದರು ಹೋದರು ಕನ್ನಡಕೊಬನ್ನೇ ರಾಜಕುಮಾರ ನಮೆಲ್ಲರ ರಾಜಣ್ಣ!

ಪ್ರೀತಿಯಿಂದ
ನಿಮ್ಮವನು
ನಾನು

Rating
No votes yet

Comments