ಕನ್ನಡದಲ್ಲಿ ಕಂಪ್ಯೂಟರ್ ಕಲಿಕೆ-೧

ಕನ್ನಡದಲ್ಲಿ ಕಂಪ್ಯೂಟರ್ ಕಲಿಕೆ-೧

ಕಂಪ್ಯೂಟರ್ ಆಫ್ ಆಗಿರುವಾಗ ಅದು ನಿರ್ಜೀವ ಯಂತ್ರವಷ್ಟೇ . ಇಂಥ ಕಂಪ್ಯೂಟರ್ ನ CPU ಡಬ್ಬಿ ,
, ಪ್ರಿಂಟರ್ , ಮೋಡೆಮ್ , ಕೀಬೋರ್ಡ್ , ಪರದೆ(screen) ಒಳಗೊಂಡ ಮಾನಿಟರ್ ಇತ್ಯಾದಿ ಭೌತಿಕ
ಭಾಗಗಳು ( ಕೈಯಿಂದ ಮುಟ್ಟಬಹುದಾಗಿದ್ದು ) ಹಾರ್ಡ್‍ವೇರ್ ವರ್ಗಕ್ಕೆ ಸೇರುತ್ತವೆ.

ಕಂಪ್ಯೂಟರ್ ನಲ್ಲಿ ಅಳವಡಿಸಿದ ಕಾರ್ಯಕ್ರಮಗಳಿಗೆ ತಂತ್ರಾಂಶ- (software) ಎನ್ನುತ್ತಾರೆ.
ಇದನ್ನು hardware ನಂತೆ ಮುಟ್ಟಿ ತಿಳಿಯಲಾಗದು.

ಕಂಪ್ಯೂಟರ್ ಆನ್ ಆಗುವಾಗ ಅದರಲ್ಲಿ ಅಳವಡಿಸಿದ ತಂತ್ರಾಂಶ ( ಸಾಫ್ಟ್ ‍ವೇರ್) -
'ಕಾರ್ಯಕಾರಿ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ) ಕ್ರಿಯಾಶೀಲವಾಗಿ ಸಿನೆಮಾದಲ್ಲಿ ಎಚ್ಚರ
ತಪ್ಪಿದ ನಾಯಕ/ನಾಯಕಿ ಆಸ್ಪತ್ರೆಯಲ್ಲಿ 'ನಾನು ಎಲ್ಲಿದ್ದೇನೆ ( ಮೈ ಕಹಾಂ ಹೂಂ)' ಎಂದು
ಕೇಳುತ್ತ ಎಚ್ಚೆತ್ತುಕೊಳ್ಳುವಂತೆ ತನಗೆ ಅಳವಡಿಸಿದ ಯಂತ್ರಾಂಶ ಮತ್ತು ತಂತ್ರಾಂಶ(
ಸಾಫ್ಟ್ ‍ವೇರ್)ಗಳನ್ನು ಗುರುತಿಸಿ ನಿಮ್ಮ ಆದೇಶ ಸ್ವೀಕರಿಸಲು ಸಿದ್ಧವಾಗುತ್ತದೆ . ಇದನ್ನೇ
ಬೂಟಿಂಗ್ ಎನ್ನುತ್ತಾರೆ .

ಇನ್ನು ಕಂಪ್ಯೂಟರ್ ನೀವು ಬಯಸಿದ ಕೆಲಸ ಮಾಡಬೇಕಾದರೆ ಉಪಯುಕ್ತ ಅನ್ವಯ ತಂತ್ರಾಂಶ
(application software) ಉದಾಹರಣೆಗೆ ಬರಹ , ನುಡಿ , word, excel , powerpoint ,
ಇತ್ಯಾದಿಗಳನ್ನು ಅಳವಡಿಸಿರಬೇಕು .

ಕಂಪ್ಯೂಟರ್ ವ್ಯವಸ್ಥೆಗೆ ಸಹಾಯಕವಾಗುವ ಆಪರೇಟಿಂಗ್ ಸಿಸ್ಟಂ ಮತ್ತು ಇತರ ತಂತ್ರಾಂಶ ಗಳ್ನು
ಒಟ್ಟಿನಲ್ಲಿ System software ಎನ್ನುತ್ತಾರೆ.

ಈ software ಗಳನ್ನು ಹೇಗೆ ನಿರ್ಮಿಸುತ್ತಾರೆ ? ಇದನ್ನು ಮುಂದಿನ ಭಾಗದಲ್ಲಿ ನೋಡೋಣ.

Rating
Average: 3.8 (4 votes)