ಕನ್ನಡದಲ್ಲಿ ಗುಣಸಂಧಿ ಇದೆಯೇ?

ಕನ್ನಡದಲ್ಲಿ ಗುಣಸಂಧಿ ಇದೆಯೇ?

ಈ ಉದಾಹರಣೆ ಗಮನಿಸಿ:
ಶುಕನೋದಿಂಗುರೆ ಚೆಲ್ವೆ ಕಾಕರವ (ಶುಕನ ಊದಿಂಗೆ
ಉರೆ ಚೆಲುವೆ ಕಾಕರವ - ಗುಣ ಸಂಧಿ)
 
[ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ|| ||            - 
ಸೋಮೇಶ್ವರ ಶತಕ ]
 
ಇದು ಶುಕ|ನೂ|ದಿಂಗೆ ಅಲ್ಲವೇ? ಸಂಸ್ಕೃತದ ಗುಣಸಂಧಿಯನ್ನು ಕನ್ನಡದಲ್ಲಿ ಬಳಸಲು ಹೋಗಿ ಊದಿಂಗೆ ತಪ್ಪಿ ಓಂದಿಂಗೆ ಆಂದಂತೆ ಆಗಲಿಲ್ಲವೇ ? ಗುಣಸಂಧಿ ಸಂಸ್ಕೃತಸಂಧಿ. ಅದನ್ನು ಸಂಸ್ಕೃತ ಶಬ್ಧಗಳಿಗೆಮಾತ್ರ ಬಳಸಬೇಕು. ಊದು ಕನ್ನಡ ಪದ ಹಾಗಾಗಿ ಇಲ್ಲಿ ಗುಣಸಂಧಿ ಬಳಸಬಾರದು.  
 
ಗುಣಸಂಧಿ ಕನ್ನಡದಲ್ಲಿ ಇಲ್ಲ ಎನ್ನುವುದು ನನ್ನ ಅಭಿಪ್ರಾಯ!

 

Rating
No votes yet