ಕನ್ನಡದಲ್ಲಿ ಫೆಡೋರ ೧೧!

ಕನ್ನಡದಲ್ಲಿ ಫೆಡೋರ ೧೧!


ಜೂನ್ ೯ ರಂದು ಫೆಡೋರ ೧೧ ಹೊರಬಂದಿದೆ (ಇದರ ಬಗ್ಗೆ ಓಂ ಶಿವು ತನ್ನ ಬ್ಲಾಗ್‌ನಲ್ಲಿ ಚಿತ್ರ ಸಹಿತವಾಗಿ ಈಗಾಗಲೆ ಬರೆದಿದ್ದಾನೆ). ಸಂಪೂರ್ಣ ಕನ್ನಡದಲ್ಲಿರುವ ಒಂದು ಕಾರ್ಯವ್ಯವಸ್ಥೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಫೆಡೋರ ೧೧ ಒಂದು ಮಹತ್ತರವಾದ ಮೈಲಿಗಲ್ಲು ಎಂದೇ ಹೇಳಬಹುದು. ಇದರಲ್ಲಿರುವ ಓಪನ್‌ ಆಫೀಸ್‌ (ಎಮ್‌ಎಸ್‌ ಆಫೀಸ್‌ಗೆ ಪರ್ಯಾಯವಾದ ತಂತ್ರಾಂಶ) ಸಂಪೂರ್ಣ ಕನ್ನಡದಲ್ಲಿದೆ. ಫೈರ್ಪಾಕ್ಸ್ ಈ ಮೊದಲೆ ಕನ್ನಡಕ್ಕೆ ಬಂದಿದ್ದು, ಫೆಡೋರ ೧೧ ರಲ್ಲಿ ಇದು ಇನ್ನಷ್ಟು ಉತ್ತಮಗೊಂಡಿದೆ. ಕೆಡಿಇ ೪.೧ ಸಹಾ ಬಹುತೇಕ ಕನ್ನಡಕ್ಕೆ ಅನುವಾದಗೊಂಡಿದೆ (ಸಣ್ಣ ಅಚಾತುರ್ಯದಿಂದಾಗಿ ಸದ್ಯಕ್ಕೆ ಫೆಡೋರದಲ್ಲಿ ಕೆಡಿಇ ಕನ್ನಡದಲ್ಲಿ ಕಾಣಿಸುವುದಿಲ್ಲ ಆದರೆ ಇನ್ನು ಎರಡು ಮೂರುದಿನದಲ್ಲಿ ಬರುವ ಅಪ್‌ಡೇಟ್‌ನಲ್ಲಿ ಸರಿಪಡಿಸಲಾಗುತ್ತದೆ).

ನನ್ನ ಕಳಕಳಿಯ ಮನವಿ ಇಷ್ಟೆ, ಆಸಕ್ತರು ಫೆಡೋರ ೧೧ ರ ಕನ್ನಡ ಆವೃತ್ತಿಯನ್ನು ಬಳಸಿ ಅದರಲ್ಲಿನ ತಪ್ಪು ಒಪ್ಪುಗಳನ್ನು ತಿಳಿಸಬೇಕು.ಏನಾದರೂ ತಪ್ಪುಗಳಿದ್ದಲ್ಲಿ ಫೆಡೋರದ ಬಗ್‌ಝಿಲ್ಲಾದಲ್ಲಿ ಒಂದು ದೋಷ ವರದಿಯನ್ನು ಸಲ್ಲಿಸಬಹುದು ಅಥವ ನನಗೆ ನೇರವಾಗಿ ಮೈಲ್ ಮಾಡಿದರೂ ಸರಿ.ಇನ್ನೂ ಸಹ ಬಾಕಿ ಉಳಿದಿರುವ ಅನುವಾದದ ಕೆಲಸದಲ್ಲಿ ಭಾಗಿಯಾಗಲು ಇಚ್ಛಿಸುವವರು ನನಗೆ ತಿಳಿಸಿ.

 

ಇವಲ್ಯೂಶನ್ ಮೈಲ್ ಕ್ಲೈಂಟ್‌

 

ಟೋಟೆಮ್ - ಚಲನಚಿತ್ರ ಪ್ಲೇಯರ್

 

  ಓಪನ್‌ಆಫೀಸ್‌ನ oowriter

 

ಓಪನ್‌ ಆಫೀಸ್‌ನ ಇಂಪ್ರೆಸ್‌

 

ಓಪನ್‌ ಆಫೀಸ್‌ನ oocalc

ಸುಮಾರು ಒಂದು ತಿಂಗಳಿಗೂ ಮೀರಿ ನಡೆದ ಓಪನ್‌ ಆಫೀಸ್‌ನ ಅನುವಾದ ಕೆಲಸದಲ್ಲಿ ನೆರವಾದ ಪ್ರಸಾದ್ ಹಾಗು ಅವರ ಸ್ನೇಹಿತರಾದ ವಿನುತ, ಮಧು, ಲಕ್ಷ್ಮಿ, ಭಾಗ್ಯ ಹಾಗು ಇನ್ನತರಿಗೆ ಇದನ್ನು ಬಳಸುವ ಎಲ್ಲಾ ಕನ್ನಡಿಗರೂ ಋಣಿಯಾಗಿರಬೇಕು. ಇಲ್ಲಿ ಪ್ರಸಾದ್ ಬಗೆಗೆ ಹೇಳಬೇಕಾದದ್ದು ಬಹಳಷ್ಟು ಇದೆ.ಈ ಮೊದಲು ಗ್ನೋಮ್‌ನ ಅನುವಾದದ ಸಮಯದಲ್ಲಿ ತಾವೆ ಸ್ವತಃ ನನ್ನನ್ನು ಸಂಪರ್ಕಿಸಿ 'ನಾನೂ ಸಹ ಅನುವಾದದಲ್ಲಿ ಭಾಗಿಯಾಗಲು ಬಯಸುತ್ತೇನೆ 'ಎಂದು ತಿಳಿಸಿದ್ದೂ ಅಲ್ಲದೆ ತಮ್ಮ ಜೊತೆಯಲ್ಲಿ ತಮ್ಮ ಗೆಳೆಯರನ್ನೂ ಕರೆತಂದರು.ಫೈರ್ಫಾಕ್ಸಿನಲ್ಲಿ ಭಾಗಿಯಾದ ಸುನಿಲನನ್ನೂ ಹಾಗು ಗ್ನೋಮ್‌ನಲ್ಲಿ ಕೊಂಚ ನೆರವಾದ ಶ್ರೀಕಾಂತ ಮಿಶ್ರಿಕೋಟಿಯವರನ್ನೂ ಇಲ್ಲಿ ನೆನೆಯಬೇಕು.

Rating
No votes yet

Comments