ಕನ್ನಡದ ಕೆಲಸ

Submitted by partha1059 on Thu, 02/14/2013 - 17:22

ಕನ್ನಡ ಬಾವುಟವ ನಿಲ್ಲಿಸಲು ನಡೆದಿತ್ತು ಕೆಲಸ

ಗುಂಡಿ ತೋಡಿ ಬಾವುಟವ ನಿಲ್ಲಿಸಿ ಮಣ್ಣ ಮುಚ್ಚಿ ನೇರಮಾಡುತ್ತಿದ್ದ

ಜನ ಇಬ್ಬರು!

ಹೀಗೆ ಮಾಡು ಹಾಗೆ ಹಿಡಿ ನೇರ ನಿಲ್ಲಿಸು ಎಂದು ಹೇಳುತ್ತಿದ್ದವರು

ಮತ್ತಾರು ಜನ!

ಇವರ ಮಾಡುತ್ತಿರುವ ಕೆಲಸ ನೋಡುತ್ತ ನಗುತ್ತ ನಿಂತಿದ್ದರು ಮೇಲೆ

ನೂರಾರು ಜನ!

............

ಸಿಗರು

ಕೈಯ ಹಾಕದೆ ಬಾಯಲ್ಲಿ ಮಾತನಾಡುತ್ತ ಕೆಲಸದಲ್ಲಿರುವರು

ಹಲವಾರು ಜನ

ಕೈಯ ಹಾಕುತ್ತ ಬಾಯಲ್ಲಿ ಗೋಳಾಡಿ ಕೆಲಸವ ಮಾಡುವರು

ಕೆಲವಾರು ಜನ

ಕೈಯ ಹಾಕುತ್ತ ಬಾಯೆ ತೆರೆಯದೆ ಕೆಲಸ ಮಾಡುವರು ಹುಡುಕಿದರು ಸಿಗರು

ಒಂದಾರು ಜನ

Rating
No votes yet

Comments